ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಬೋಲಾ ಭೀತಿ, ಹಜ್ ವೀಸಾ ನಿಷೇಧ

By Mahesh
|
Google Oneindia Kannada News

ರಿಯಾದ್, ಆ.8: ಮಾರಕ ಎಬೋಲಾ ವೈರಾಣು ಪೀಡಿತ ರಾಷ್ಟ್ರಗಳಿಂದ ಹಜ್ ಯಾತ್ರೆ ತೆರಳ ಬಯಸುವವರಿಗೆ ಕಹಿ ಸುದ್ದಿ ಇಲ್ಲಿದೆ. ವೈರಾಣು ಪೀಡಿತ ದೇಶಗಳ ಯಾತ್ರಿಗಳಿಗೆ ಹಜ್ ಹಾಗೂ ಉಮ್ರಾಗೆ ತೆರಳಲು ವೀಸಾ ನಿರಾಕರಿಸಲು ಸೌದಿ ಅರೇಬಿಯಾ ಸರ್ಕಾರ ನಿರ್ಧರಿಸಿದೆ.

ಈಗಾಗಲೇ ಪಶ್ಚಿಮ ಆಫ್ರಿಕಾದಿಂದ ದೇಶಕ್ಕೆ ಬಂದಿರುವ ವ್ಯಕ್ತಿಗಳನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ ಕೆಲವರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಗುರುವಾರದಂದು ಎಬೋಲಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಸಂಪರ್ಕಕ್ಕೆ ಸಿಕ್ಕಿರುವ ಎಲ್ಲರನ್ನು ಹುಡುಕಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೌದಿ ಅರೇಬಿಯಾ ಹೇಳಿದೆ.

ಎಲ್ಲಾ ವೈರಾಣು ಶಂಕಿತರನ್ನು 21 ದಿನಗಳ ಕಾಲ ತೀವ್ರ ನಿಗಾದಲ್ಲಿ ಇರಿಸಲಾಗಿದೆ. ಸದ್ಯಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯಾವುದೇ ಹೊಸ ಕೇಸುಗಳು ದಾಖಲಾಗಿಲ್ಲ ಎಂದು ವೈದಾಧಿಕಾರಿಗಳು ಹೇಳಿದ್ದಾರೆ.

Saudi bans Haj visas to Ebola-hit nations

ಪಶ್ಚಿಮ ಆಫ್ರಿಕಾದಲ್ಲಿ ಕಾಣಿಸಿಕೊಂಡು ವಿಶ್ವದ ಹಲವೆಡೆ ಆತಂಕ ಮೂಡಿಸುತ್ತಿರುವ ಎಬೋಲಾ ವೈರಾಣು ಕಾಯಿಲೆ(EVD) ಕಾಯಿಲೆಯನ್ನು ಅಂತಾರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಶುಕ್ರವಾರದಂದು ವಿಶ್ವ ಆರೋಗ್ಯ ಸಂಸ್ಥೆ(WHO) ಘೋಷಿಸಿದೆ.

2013ರಿಂದ ತೀವ್ರಗೊಂಡಿರುವ ಎಬೋಲಾ ಪೀಡನೆ ಮೊದಲಿಗೆ ಗಿನಿಯಾದಲ್ಲಿ ಕಾಡತೊಡಗಿತು ಈಗ ನೈಜೀರಿಯಾ, ಸಿಯಾರಾ ಲಿಯೋನ್, ಲಿಬೇರಿಯಾದಲ್ಲಿ ಹರಡಿದೆ. ಆ.4 ರ ತನಕ ಸುಮಾರು 1,711 ಕೇಸುಗಳು ದಾಖಲಾಗಿವೆ (1,070 ದೃಢಪಟ್ಟಿದ್ದರೆ, 436 ತೀವ್ರ ಶಂಕೆ ಹಾಗೂ 205 ಶಂಕಿತರು) ಒಟ್ಟು 932 ಜನರನ್ನು ಬಲಿ ಪಡೆದಿದೆ.

ಎಬೋಲಾ ವೈರಸ್ ಗಾಳಿ ಅಥವಾ ನೀರಿನ ಮೂಲಕ ಸಾಂಕ್ರಾಮಿಕವಾಗಿ ಹರಡುವುದಿಲ್ಲ. ರೋಗ ಪೀಡಿತ ರಕ್ತ, ಜಿಹ್ವಾರಸ, ಮೂತ್ರ ಮುಂತಾದವುಗಳ ಸೋಕುವಿಕೆಯಿಂದ ಹರಡುತ್ತದೆ. ಮಲೇರಿಯಾ, ಕಾಲರ, ವೈರಲ್ ಫೀವರ್ ಮಾದರಿಯಲ್ಲೇ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜ್ವರ, ಗಂಟಲು ನೋವು, ಕೈಕಾಲು ನೋವು, ತಲೆನೋವಿನೊಂದಿಗೆ ಆರಂಭವಾಗಿ ಆಮಶಂಕೆ, ಕರಳು ಬೇನೆ, ಕಿಡ್ನಿ ವೈಫಲ್ಯ ಉಂಟಾಗಲಿದೆ. ಕೊನೆ ಕೊನೆಗೆ ರಕ್ತ ಸ್ರಾವ ಉಂಟಾಗಿ ರೋಗಿ ಸಾವನ್ನಪ್ಪುತ್ತಾನೆ. [ಇಲ್ಲಿವರೆಗಿನ ಸಾವು ನೋವಿನ ಪಟ್ಟಿ]

English summary
The Saudi government has stopped issuing visas for Haj and Umrah (Islamic pilgrimages to Mecca) to people from countries affected by the deadly Ebola virus, a media report said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X