ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಕೆಂಪು ಮೆಣಸಿಗೆ ಸೌದಿ ಸರ್ಕಾರ ನಿಷೇಧ

By Ashwath
|
Google Oneindia Kannada News

ರಿಯಾದ್‌‌‌, ಮೇ. 12: ಯುರೋಪಿಯನ್‌ ಒಕ್ಕೂಟ ದೇಶಿಯ ಆಲ್ಫಾನ್ಸೊ ಮಾವಿನ ಹಣ್ಣಿನ ಆಮದಿಗೆ ನಿಷೇಧ ಹೇರಿದ್ದೇ ತಡ ಈಗ ಸೌದಿ ಸರ್ಕಾರ ಕೆಂಪು ಮೆಣಸಿನ ಮೇಲೆ ನಿಷೇಧ ಹೇರಲು ಮುಂದಾಗಿದೆ.[ಭಾರತದ ಮಾವಿನ ಹಣ್ಣಿಗೆ ಯುರೋಪಿನಲ್ಲಿ ನಿಷೇಧ]

ಭಾರತದಿಂದ ಆಮದು ಮಾಡಿಕೊಂಡ ಕೆಂಪು ಮೆಣಸಿನ ಕಾಯಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಕೀಟನಾಶಕದ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ನಿಷೇಧ ಹೇರುವುದಾಗಿ ಸೌದಿ ಅರೇಬಿಯಾ ಕೃಷಿ ಸಚಿವಾಲಯ ಹೇಳಿದೆ.

ನಿಷೇಧ ಕುರಿತು ಈಗಾಗಲೇ ಸೌದಿ ಸಚಿವಾಲಯ ಭಾರತದ ಕೃಷಿ ಮತ್ತು ಸಂಸ್ಕರಿತ ಆಹಾರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಎಪಿಇಡಿಎ) ಮಾಹಿತಿ ನೀಡಿದ್ದು, ಮೇ.30 ರಿಂದ ಈ ಆದೇಶ ಜಾರಿಗೆ ಬರಲಿದೆ.

ಕೆಂಪು ಮೆಣಸನ್ನು ಭಾರತದಿಂದ ಆಮದು ಮಾಡಿಕೊಳ್ಳುವ ಐದನೇ ಅತಿ ದೊಡ್ಡ ರಾಷ್ಟ್ರ ಸೌದಿ ಅರೇಬಿಯಾ ಆಗಿದ್ದು, 2013 ಏಪ್ರಿಲ್‌ ನವೆಂಬರ್‌ ಅವಧಿಯಲ್ಲಿ 18 ಕೋಟಿ ಮೌಲ್ಯದ 1,81,500 ಟನ್‌ ಕೆಂಪು ಮೆಣಸನ್ನು ಭಾರತ ರಫ್ತು ಮಾಡಿತ್ತು.[ಸೌದಿಯಲ್ಲಿ ಹೆಚ್ಚಾಗುತ್ತಿದೆ ಎಂಇಆರ್‌ಎಸ್ ಸೋಂಕು]

ಈಗಾಗಲೇ ಆಲ್ಫಾನ್ಸೋ ಮಾವಿನ ಮೇಲಿನ ನಿಷೇಧದಿಂದಾಗಿ ಈ ತಳಿಯ ಮಾವಿನ ಹಣ್ಣಿನ ಬೆಲೆ ಇಳಿಕೆಯಾಗಿದೆ. ಎಪಿಇಡಿ ಈಗಾಗಲೇ ಸೌದಿ ಸಚಿವಾಲಯದ ಜೊತೆ ಮನವೊಲಿಕೆ ಮಾಡುತ್ತಿದ್ದು, ಮನವೊಲಿಕೆ ವಿಫಲವಾದಲ್ಲಿ ಕೆಂಪು ಮೆಣಸಿನ ಬೆಲೆ ಮಾರುಕಟ್ಟೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆಯಿದೆ.

chilli grphics
English summary
Indian chilli has been banned in Saudi Arabia, the fifth-largest importer of fresh vegetables from India, citing the presence of high pesticide residues in it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X