ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಮ್ರಾನ್ ಖಾನ್ ಮೇಲೆ ಭಾರಿ ಮೊತ್ತದ ಮೊಕದ್ದಮೆ

By Mahesh
|
Google Oneindia Kannada News

ಇಸ್ಲಾಮಾಬಾದ್, ಜು.24: ಮಾಜಿ ಕ್ರಿಕೆಟಿಗ, ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಾಧೀಶ ಇಫ್ತಿಕಾರ್ ಮುಹಮ್ಮದ್ ಚೌಧರಿ ಅವರು 20 ಶತಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆಯೊಂದನ್ನು ದಾಖಲಿಸಿದ್ದಾರೆ.

2013ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಭ್ರಷ್ಟಾಚಾರವನ್ನು ತಡೆಯುವಲ್ಲಿ ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರಾಗಿದ್ದ ಚೌಧರಿಯವರು ವಿಫಲರಾಗಿದ್ದರು ಮತ್ತು ಅದು ತನ್ನ ಸೋಲಿಗೆ ಪರೋಕ್ಷವಾಗಿ ಕಾರಣವಾಗಿದೆ ಎಂದು ಪಾಕಿಸ್ತಾನ್ ತಹ್ರೀಕ್ ಇನ್ಸಾಫ್(ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಹೇಳಿದ್ದರು.

ರಾಷ್ಟ್ರದ ನ್ಯಾಯಾಂಗದ ಉನ್ನತಾಧಿಕಾರಿಯ ಬಗ್ಗೆ ಅಪಪ್ರಚಾರ ಮಾಡಿ ಅವರ ಕೀರ್ತಿಗೆ ಭಂಗವನ್ನುಂಟು ಮಾಡಿದ ಆರೋಪ ಹೊರಿಸಿ ಇಮ್ರಾನ್ ಖಾನ್ ವಿರುದ್ಧ ಚೌಧರಿ ಪರ ವಕೀಲರು ನೋಟಿಸ್ ಜಾರಿಗೊಳಿಸಿದ್ದಾರೆ.

ಮಾನಹಾನಿಗೆ ಸಂಬಂಧಿಸಿದಂತೆ 15 ಶತಕೋಟಿ ರೂಪಾಯಿ ಮತ್ತು ಉಂಟಾಗಿರುವ ಮಾನಸಿಕ ಹಿಂಸೆಗಾಗಿ ಉಳಿದ 5 ಶತಕೋಟಿ ರೂಪಾಯಿಗಳ ಪರಿಹಾರ ಕೇಳಿಕೊಳ್ಳುತ್ತಿರುವುದಾಗಿ ನೋಟಿಸ್‌ನಲ್ಲಿ ಮಾಜಿ ಮುಖ್ಯ ನ್ಯಾಯಾಧೀಶ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ನವಾಜ್ ಶರೀಫ್ ನೇತೃತ್ವದ ಪಿಎಂಎಲ್-ಎನ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಗದ್ದುಗೆ ಹಿಡಿದಿತ್ತು. ದೇಶದ ಮೂರನೆ ಬಾರಿಗೆ ಪ್ರಧಾನಿಯಾಗಿ ನವಾಜ್‌ಶರೀಫ್ ಅಧಿಕಾರ ಸ್ವೀಕರಿಸಿತ್ತು.

ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ತೆಹ್ರಿಕ್ ಇ ಇನ್ಸಾಫ್ ಹಾಗೂ ಪಾಕಿಸ್ತಾನ್ ಪೀಪಲ್ ಪಾರ್ಟಿ ಕಳಪೆ ಪ್ರದರ್ಶನ ನೀಡಿತ್ತು. ಎರಡು ಪಕ್ಷಗಳು ತಲಾ 35 ಸ್ಥಾನಗಳನ್ನು ಗಳಿಸಿತ್ತು.[ಹೆಚ್ಚಿನ ವಿವರ]

ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಹಾಗೂ ತೆಹರಿಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಭಾರೀ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಪಂಜಾಬ್ ಪ್ರಾಂತ್ಯದಿಂದ ಸ್ಪರ್ಧಿಸಿದ್ದ ಇಮ್ರಾನ್ ಖಾನ್ ಸುಮಾರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ರಾಷ್ಟ್ರೀಯ ಅಸೆಂಬ್ಲಿಗೆ ಪ್ರವೇಶಿಸಿದ್ದರು.

ಪಾಕಿಸ್ತಾನದಲ್ಲೂ ಭ್ರಷ್ಟಾಚಾರ ವಿರುದ್ಧ ಹೋರಾಟ ನಡೆಯುತ್ತಿದೆ.ಆದರೆ, ಸರ್ಕಾರ ಅದನ್ನು ಹತ್ತಿಕ್ಕುತ್ತಿದೆ. ಸುಪ್ರೀಂಕೋರ್ಟ್ ಆದೇಶಗಳನ್ನು ಸರ್ಕಾರ ಬದಿಗೊತ್ತುತ್ತಿದೆ. ಜನ ಬೆಂಬಲ ಇಲ್ಲದಿದ್ದರೆ ಏನು ಸಾಧ್ಯವಿಲ್ಲ ಎಂಬುದನ್ನು ಅಣ್ಣಾ ಅವರು ಭಾರತ ಸರ್ಕಾರಕ್ಕೆ ಮನವರಿಕೆ ಮಾಡಿಕೊಂಡಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದ್ದರು. [ವಿವರ ಇಲ್ಲಿ ಓದಿ]

English summary
Former Chief Justice Iftikhar Muhammad Chaudhry’s notice to PTI Chairman Imran Khan threatening a defamation suit for hurling unsubstantiated allegations is unique and exceptional.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X