ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ನಲ್ಲಿ ಹೊಸ ಭಾರತೀಯ ವೀಸಾ ಕೇಂದ್ರಗಳು

By Mahesh
|
Google Oneindia Kannada News

ನ್ಯೂಯಾರ್ಕ್, ಮೇ 20: ಭಾರತದ ದೂತಾವಾಸವು ಅಮೆರಿಕದ ಆರು ನಗರಗಳಾದ್ಯಂತ ಆರು ವೀಸಾ ಸೇವಾಕೇಂದ್ರಗಳನ್ನು ತೆರೆದಿದೆ. ಭಾರತದ ದೂತವಾಸವು ವೀಸಾ ಸೇವೆಗಳಿಗೆ ಹೊರಗುತ್ತಿಗೆ ನೀಡುವ ಪ್ರಕ್ರಿಯೆ ಸರಳಗೊಳಿಸಲು ಹೊಸ ಕಂಪೆನಿಯೊಂದಿಗೆ ಹೊರಗುತ್ತಿಗೆ ನೀಡಿದೆ.

ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್, ಅಟ್ಲಾಂಟ, ಶಿಕಾಗೊ, ಹ್ಯೂಸ್ಟನ್ ಹಾಗೂ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಮೇ 21ರಂದು ಪ್ರಾರಂಭಗೊಂಡಿರುವ ಹೊಸ ವೀಸಾ ಸೇವಾ ಕೇಂದ್ರಗಳು ಭಾರತೀಯ ವೀಸಾ, ಸಾಗರೋತ್ತರ ಭಾರತೀಯ ಪ್ರಜೆಗಳು (ಒಸಿಐ), ಭಾರತೀಯ ಮೂಲದ ನಾಗರಿಕರು(ಪಿಐಒ) ಹಾಗೂ ಅಮೆರಿಕದಲ್ಲಿ ವಾಸಿಸುತ್ತಿದ್ದು ಭಾರತಕ್ಕೆ ಭೇಟಿ ನೀಡಲು ಬಯಸುವ ಪ್ರಜೆಗಳು ಮೊದಲಾದವರಿಗೆ ಅನುಕೂಲವಾಗುವಂತೆ ಹೊಸ ಕೇಂದ್ರಗಳು ಸೇವೆಗಳನ್ನು ಒದಗಿಸಲಿವೆ ಎಂದು ಕಾಕ್ಸ್ ಅಂಡ್ ಕಿಂಗ್ಸ್ ಗ್ಲೋಬಲ್ ಸರ್ವಿಸಸ್(ಸಿಕೆಜಿಎಸ್) ತಿಳಿಸಿದೆ.

New Indian visa service centres open in six US cities

ಅಮೆರಿಕದಲ್ಲಿ ಭಾರತೀಯ ವೀಸಾ ಹಾಗೂ ಅದಕ್ಕೆ ಸಂಬಂಧಿಸಿದ ಸೇವೆಗಳ ಹೊರಗುತ್ತಿಗೆಗೆ ಕಾಕ್ಸ್ ಅಂಡ್ ಕಿಂಗ್ಸ್ ಗ್ಲೋಬಲ್ ಸರ್ವಿಸಸ್ (ಸಿಕೆಜಿಎಸ್) ಕಂಪೆನಿಯನ್ನು ನೇಮಿಸಲಾಗುವುದು ಎಂದು ವಾಷಿಂಗ್ಟ್‌ನಲ್ಲಿರುವ ಭಾರತೀಯ ದೂತಾವಾಸವು ಈ ತಿಂಗಳ ಆರಂಭದಲ್ಲಿ ತಿಳಿಸಿತ್ತು. ಸಿಕೆಜಿಎಸ್ ಅಮೆರಿಕದಲ್ಲಿ ಭಾರತದ ವೀಸಾ ಸೇವೆಗಳ ಹೊರಗುತ್ತಿಗೆ ನಿರ್ವಹಿಸುತ್ತಿರುವ ಮೂರನೆಯ ಸಂಸ್ಥೆಯಾಗಿದೆ. ಆಸಕ್ತರು ಸಿಕೆಜಿಎಸ್ ವೆಬ್ ತಾಣಕ್ಕೆ ಭೇಟಿ ನೀಡಿ ರಿಯಲ್ ಟೈಮ್ ನಲ್ಲಿ ತಮ್ಮ ಅರ್ಜಿಯ ಸ್ಥಿತಿ ಗತಿ ಅವಲೋಕಿಸಬಹುದು.

ಇತ್ತ ಭಾರತದಲ್ಲಿ ಪ್ರವಾಸಿಗರನ್ನು ಸೆಳೆಯರು ಹೊಸ ವೀಸಾ ನಿಯಮವನ್ನು ಜಾರಿಗೊಳಿಸಲಾಗಿದ್ದು, ಮುಂಬರುವ ಸೆಪ್ಟೆಂಬರ್ ತಿಂಗಳಿನಿಂದ ಎಲ್ಲಾ ರಾಷ್ಟ್ರಗಳ ಪ್ರವಾಸಿಗರಿಗೆ ವೀಸಾ ಆನ್ ಅರೈವಲ್ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಯುಪಿಎ ಕೇಂದ್ರ ಸರ್ಕಾರ ಘೋಷಿಸಿತ್ತು. ಪಾಕಿಸ್ತಾನ ಸೇರಿ 8 ದೇಶಗಳಿಗೆ ಮಾತ್ರ ಈ ಸೌಲಭ್ಯ ಲಭ್ಯವಿರುವುದಿಲ್ಲ. ಇ ವೀಸಾ ಸೌಲಭ್ಯ ಮೊಟ್ಟ ಮೊದಲ ಬಾರಿಗೆ ನ್ಯೂಜಿಲೆಂಡ್ ಸೇರಿ 11 ರಾಷ್ಟ್ರಗಳ ಪ್ರಜೆಗಳಿಗೆ ನೀಡಲು ಭಾರತ ಸರ್ಕಾರ ನಿಯಮ ರೂಪಿಸಿದೆ. [ವಿವರ ಇಲ್ಲಿದೆ]

English summary
The new company to which the Indian Embassy in the US outsourced its visa related work for its diplomatic missions there, will be opening service centres across six cities in America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X