ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆಯಲ್ಲಿ ಮೋದಿ ಭಾಷಣ ಬಾಂಧವ್ಯ ಬೆಸುಗೆ

By Mahesh
|
Google Oneindia Kannada News

ನ್ಯೂಯಾರ್ಕ್,ಸೆ.28: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರಮೋದಿ ವಿಶ್ವಸಂಸ್ಥೆಯ 69ನೇ ಸಾಮಾನ್ಯ ಸಭೆಯಲ್ಲಿ ಸದಸ್ಯ ರಾಷ್ಟ್ರಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದು ಎಲ್ಲರ ಹೃದಯ ತಟ್ಟಿದೆ. ಹಿಂದಿ ಭಾಷೆಯಲ್ಲಿ ಮೋದಿ ಅವರು ಮಾಡಿದ ಭಾಷಣದಲ್ಲಿ ಭಾರತದ ಹಿರಿಮೆ, ಭಯೋತ್ಪಾದನೆ ವಿರುದ್ಧ ತಿರುಗೇಟು, ಯೋಗ ಮುಂತಾದ ವಿಷಯಗಳು ಹಾದು ಹೋಗಿವೆ.

ನಮ್ಮ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ, ನ್ಯಾಯ ಹಾಗೂ ಅವಕಾಶಕ್ಕಾಗಿ ಧ್ವನಿ ಎತ್ತುತ್ತಲೇ ಬಂದಿದೆ. ದೇಶದ ಭವಿಷ್ಯ ನೆರೆ ರಾಷ್ಟ್ರಗಳೊಂದಿಗೆ ಬಾಂಧವ್ಯವನ್ನು ಅವಲಂಬಿಸಿದೆ ಎನ್ನುವ ಸ್ಪಷ್ಟ ಅರಿವು ನಮಗಿದೆ. ಭಯೋತ್ಪಾದನೆಯ ಕರಿನೆರಳು ಇಲ್ಲದ ಪರಿಸ್ಥಿತಿಯಲ್ಲಿ ಸಹಕಾರ ಮತ್ತು ಮೈತ್ರಿಗೆ ಉತ್ತೇಜನ ನೀಡಲು ನಾನು ಪಾಕಿಸ್ತಾನದ ಜತೆಗೆ ಮಾತುಕತೆಗೆ ಸಿದ್ಧನಿದ್ದೇನೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. [ವಿಶ್ವಸಂಸ್ಥೆಯಲ್ಲಿ ಕನ್ನಡ ಕಂಪು ಹರಿಸಿದ ಅನಂತ್ ಕುಮಾರ್]

ಪಾಕಿಸ್ತಾನವೂ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಹಿಂಸೆಯ ಬದಲು ಮಾತುಕತೆಗೆ ಪೂರಕ ವಾತಾವರಣ ನಿರ್ಮಿಸಬೇಕು. ಆದರೆ ವಿಶ್ವಸಂಸ್ಥೆ ದ್ವಿಪಕ್ಷೀಯ ವಿವಾದ ಬಗೆಹರಿಸಲು ಸಾಧ್ಯವಿಲ್ಲ ಎಂಬುದನ್ನು ಪಾಕಿಸ್ತಾನ ಅರಿತುಕೊಳ್ಳಬೇಕು ಎಂದು ತಮ್ಮ 35 ನಿಮಿಷಗಳ ಭಾಷಣದಲ್ಲಿ ಹೇಳಿದರು. ಭಾಷಣದ ಇನ್ನಷ್ಟು ವಿವರ ಹಾಗೂ ಚಿತ್ರಗಳು ವಿಡಿಯೋ ನಿಮ್ಮ ಮುಂದೆ ನಿಮ್ಮ ಮುಂದೆ.. [ಭಾಷಣದ ಪೂರ್ಣಪಾಠ ಇಲ್ಲಿ ಓದಿ]

 ವಾಜಪೇಯಿ ಹಾದಿಯಲ್ಲಿ ಮೋದಿ

ವಾಜಪೇಯಿ ಹಾದಿಯಲ್ಲಿ ಮೋದಿ

ಅಟಲ್ ಬಿಹಾರಿ ವಾಜಪೇಯಿ ಅವರು ವಿದೇಶಾಂಗ ಸಚಿವರಾಗಿದ್ದಾಗ ವಿಶ್ವಸಂಸ್ಥೆಯ ಸಭೆ ಉದ್ದೇಶಿಸಿ 1977ರಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದರು. ಇದೇ ಹಾದಿಯಲ್ಲಿ ಮೋದಿ ಅವರು ಕೂಡಾ ವಿಶ್ವಸಂಸ್ಥೆಯ ಅಧಿಕೃತ ಭಾಷೆಯಲ್ಲದ ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ. ಭಾರತದ ರಾಷ್ಟ್ರಭಾಷೆಗಳಲ್ಲಿ ಒಂದಾದ, ತಮ್ಮ ಮಾತೃಭಾಷೆಯೂ ಅಲ್ಲದ ಹಿಂದಿಯಲ್ಲಿ ಮಾತನಾಡಿ ಹಲವರ ಹುಬ್ಬೇರಿಸಿದರು.

ಜಿ ಗುಂಪುಗಳು ಯಾಕೆ ಬೇಕು? ಎಂದ ಮೋದಿ

ಜಿ ಗುಂಪುಗಳು ಯಾಕೆ ಬೇಕು? ಎಂದ ಮೋದಿ

ಒಂದು ಕಾಲದಲ್ಲಿ ರಾಷ್ಟ್ರಗಳನ್ನು ಜೋಡಿಸುತ್ತಿದ್ದ ಸಮುದ್ರದಲ್ಲಿ ಇಂದು ತಿಕ್ಕಾಟ ಆರಂಭವಾಗಿದೆ. ಸೈಬರ್ ಯುದ್ಧದ ಕಾಲ ಎದುರಾಗಿದೆ. ಇಂಥ ಪರಿಸ್ಥಿತಿಯಲ್ಲಿ ವಿಶ್ವಸಂಸ್ಥೆಯಂಥ ಸಂಸ್ಥೆಯ ಅಗತ್ಯ ಹೆಚ್ಚಿದೆ. ವಿಶ್ವಸಂಸ್ಥೆಯಂಥ ಅದ್ಬುತ ವೇದಿಕೆ ಇದ್ದಾಗ್ಯೂ ಆರೇಳು ಜಿ ರಾಷ್ಟ್ರಗಳ ಗುಂಪುಬೇಕು? ನಾವು ಬಯಸಿದರೂ, ಬಯಸದಿದ್ದರೂ ಅದರ ಭಾಗವಾಗಿದ್ದೇವೆ. ಒಂದು ವೇಳೆ ಎಲ್ಲ ರಾಷ್ಟ್ರಗಳು ಒಂದೇ ವೇದಿಕೆ(ಜಿ ಆಲ್)ಯಡಿ ಬಂದರೆ ಪ್ರಮುಖ ವಿಚಾರಗಳ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ.

ವಿಶ್ವವೇ ಕುಟುಂಬ ಆಗಿದೆ ಎಂದ ಮೋದಿ

ವಿಶ್ವವೇ ಕುಟುಂಬ ಆಗಿದೆ ಎಂದ ಮೋದಿ

ಪ್ರತಿಯೊಂದು ರಾಷ್ಟ್ರವು ತನ್ನದೇ ಆದ ತತ್ವಶಾಸ್ತ್ರವನ್ನು ಹೊಂದಿರುತ್ತದೆ. ನಾನು ಸಿದ್ಧಾಂತದ ಬಗ್ಗೆ ಮಾತನಾಡುತ್ತಿಲ್ಲ. ಈ ತತ್ವಶಾಸ್ತ್ರವು ರಾಷ್ಟ್ರಕ್ಕೆ ಮಾರ್ಗದರ್ಶನ ನೀಡುತ್ತದೆ. ಭಾರತದ ತತ್ವಶಾಸ್ತ್ರದಡಿ ಅದು 'ವಸುಧೈವ ಕುಟುಂಬಕಂ' (ವಿಶ್ವವೇ ಕುಟುಂಬ) ಆಗಿದೆ'' ಎಂದವರು ನುಡಿದರು. ಇಂದಿಲ್ಲಿ 193 ರಾಷ್ಟ್ರಗಳ ಧ್ವಜಗಳು ಹಾರುತ್ತಿವೆ. ನಾವು ಕಳೆದ ದಶಕಗಳಲ್ಲಿ ಬಹಳಷ್ಟು ಸಾಧಿಸಿದ್ದೇವೆ ಎಂದರು.

ವಿಶ್ವಸಂಸ್ಥೆಯಲ್ಲಿ ಬದಲಾವಣೆಗೆ ಕರೆ

ವಿಶ್ವಸಂಸ್ಥೆಯಲ್ಲಿ ಬದಲಾವಣೆಗೆ ಕರೆ

2015ರೊಳಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತಾಗಬೇಕು ಎಂದು ತನ್ನ ಭಾಷಣದ ಕೊನೆಯಲ್ಲಿ ಮೋದಿ ಆಶಿಸಿದರು. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯನ್ನು ಇನ್ನಷ್ಟು ಬಲಪಡಿಸುವಂತೆ ಇದೇ ವೇಳೆ ಅವರು ಕರೆ ನೀಡಿದರು. 'ನಮಸ್ತೆ' ಎಂಬ ಪದದೊಂದಿಗೆ ಮೋದಿ ವಿಶ್ವಸಂಸ್ಥೆಯ ಮಹಾಧಿವೇಶನವನ್ನುದ್ದೇಶಿಸಿ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದರು.

ಭಾರತ ಆರ್ಥಿಕ, ಸಾಮಾಜಿಕತೆಯಲ್ಲಿ ಬದಲಾವಣೆ

ಭಾರತ ಆರ್ಥಿಕ, ಸಾಮಾಜಿಕತೆಯಲ್ಲಿ ಬದಲಾವಣೆ

ಭಾರತ ಆರ್ಥಿಕ, ಸಾಮಾಜಿಕತೆಯಲ್ಲಿ ಬದಲಾವಣೆಯಾಗುತ್ತಿದೆ. ವಿಶ್ವದ ಒಟ್ಟು ಜನಸಂಖ್ಯೆಯ 1ರಷ್ಟು ಜನ ಭಾರತದಲ್ಲಿದ್ದಾರೆ. ಭೂಮಿಯನ್ನು ಉಳಿಸಲು ಎಲ್ಲಾ ರಾಷ್ಟ್ರಗಳೂ ಕೈಜೋಡಿಸಬೇಕು. ನಮ್ಮ ಭವಿಷ್ಯ ನಮ್ಮ ನೆರೆ ರಾಷ್ಟ್ರಗಳೊಂದಿಗೆ ಬೆಸೆದುಕೊಂಡಿದೆ.ಅಂತಾರಾಷ್ಟ್ರೀಯ ನಿಯಮಗಳನ್ನು ಎಲ್ಲರೂ ಪಾಲಿಸಬೇಕಿದೆ ಎಂದರು

ಭಯೋತ್ಪಾದನೆ ನಾನಾ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿದೆ

ಭಯೋತ್ಪಾದನೆ ನಾನಾ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿದೆ

ಭಯೋತ್ಪಾದನೆ ನಾನಾ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿದೆ. ವಿಶ್ವದಲ್ಲಿ ಭಯೋತ್ಪಾದನೆ ದೊಡ್ಡ ಶಕ್ತಿಯಾಗುತ್ತಿದೆ. ಭಯೋತ್ಪಾದನೆ ಶಮನಗೊಳಿಸಿದರೆ ದೇಶಕ್ಕೆ ಮುಕ್ತಿ. ಭಯೋತ್ಪಾದನೆ ವಿರುದ್ಧ ಹೋರಾಡಲು ಎಲ್ಲರೂ ಒಂದಾಗಬೇಕು. ವಿಶ್ವದಲ್ಲಿ ಸೈಬರ್​ ಭಯೋತ್ಪಾದನೆ ಹೆಚ್ಚಾಗುತ್ತಿದೆ. ಸೈಬರ್​ ಭಯೋತ್ಪಾದನೆ ತಡೆಯಲು ಭಾರತ ಸಿದ್ಧ ಎಂದರು.

ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ ಭಾಷಣ ವಿಡಿಯೋ

ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಚೊಚ್ಚಲ ಭಾಷಣದ ವಿಡಿಯೋ ನೋಡಿ

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಜೊತೆ ಪ್ರಧಾನಿ ನೋದಿ.

ಭಾಷಣಕ್ಕೂ ಮುನ್ನ ವಿಶ್ವಸಂಸ್ಥೆಯಲ್ಲಿ

ಭಾಷಣಕ್ಕೂ ಮುನ್ನ ವಿಶ್ವಸಂಸ್ಥೆಯಲ್ಲಿ

ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಭಾಷಣ ಮಾಡುವುದಕ್ಕೂ ಮುನ್ನ ಮೋದಿ ಅವರು ವಿಶ್ವಸಂಸ್ಥೆ ಪ್ರಾಂಗಣದಲ್ಲಿ ಕಾಣಿಸಿಕೊಂಡಿದ್ದು ಹೀಗೆ... ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರನ್ನು ಕಾಣಬಹುದು.

ವಿಶ್ವಸಂಸ್ಥೆ 69ನೇ ಮಹಾಧಿವೇಶನ

ವಿಶ್ವಸಂಸ್ಥೆ 69ನೇ ಮಹಾಧಿವೇಶನ

ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಮೋದಿ ಭಾಷಣ ಮಾಡಿದ ಸಂದರ್ಭದ ಚಿತ್ರ

ಶ್ರೀಲಂಕಾ ಅಧ್ಯಕ್ಷ ಮಹೇಂದ್ರ ಜೊತೆ ಮೋದಿ

ಶ್ರೀಲಂಕಾ ಅಧ್ಯಕ್ಷ ಮಹೇಂದ್ರ ಜೊತೆ ಮೋದಿ

ಶ್ರೀಲಂಕಾ ಅಧ್ಯಕ್ಷ ಮಹೇಂದ್ರ ರಾಜಪಕ್ಸೆ ಜೊತೆ ಭಾರತದ ಪ್ರಧಾನಿ ಮೋದಿ

ನ್ಯೂಯಾರ್ಕ್ ಗವರ್ನರ್ ಜೊತೆ ಮೋದಿ

ನ್ಯೂಯಾರ್ಕ್ ಗವರ್ನರ್ ಜೊತೆ ಮೋದಿ

ನ್ಯೂಯಾರ್ಕ್ ಗವರ್ನರ್ ಕ್ರಿಸ್ ಕ್ರಿಸ್ಟಿ ಅವರ ಜೊತೆ ಮೋದಿ ಅವರು ಮಾತುಕತೆ ನಡೆಸಿದರು. PTI Photo by Vijay Verma

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಜೊತೆ ಮೋದಿ

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಜೊತೆ ಮೋದಿ

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಜೊತೆ ಭಾರತದ ಪ್ರಧಾನಿ ನರೇಂದ್ರ ಮೋದಿ

ನೇಪಾಳದ ಪ್ರಧಾನಿ ಜೊತೆ ಮೋದಿ

ನೇಪಾಳದ ಪ್ರಧಾನಿ ಜೊತೆ ಮೋದಿ

ನೇಪಾಳದ ಪ್ರಧಾನಿ ಸುಶೀಲ್ ಕುಮಾರ್ ಕೊಯಿರಾಲಾ ಅವರ ಜೊತೆ ಪ್ರಧಾನಿ ಮೋದಿ

English summary
In Pictures: With his maiden speech at the United Nations General Assembly (UNGC), Narendra Modi on Saturday, Sept 28 impressed the audience. Modi's speech touched all Indians as he succeeded to maintain his calm while replying to Pakistan Prime Minister Nawaz Sharif's remark on Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X