ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಯ್ಬಿಟ್ಟ ಭೂಮಿ: ಸೈಬೀರಿಯಾದಲ್ಲಿ ನಿಗೂಢ ಕುಳಿ

By Mahesh
|
Google Oneindia Kannada News

ಮಾಸ್ಕೋ, ಜು.18: ಸೈಬೀರಿಯಾದ ಉತ್ತರ ಪ್ರದೇಶ ಪ್ರಾಂತ್ಯದಲ್ಲಿ ಭೂಮಿಯಲ್ಲಿ ದೈತ್ಯಾಕಾರದ ನಿಗೂಢವಾದ ಕುಳಿ ಕಂಡು ಬಂದಿದೆ. ಎಂಡ್ ಆಫ್ ದಿ ವರ್ಲ್ಡ್ ಎಂದು ಹೆಸರಿಸಲಾಗಿರುವ ಈ ಕುಳಿ ಬಗ್ಗೆ ತೀವ್ರ ಆತಂಕ, ಕುತೂಹಲ ಮೂಡಿದೆ. ಸುಮಾರು 80 ಮೀಟರ್‌ಗೂ ಹೆಚ್ಚು ಅಗಲವಾದ ಈ ದೈತ್ಯಕುಳಿ ಹೀಗೆ ಏಕಾಏಕಿ ಭೂಮಿಯಲ್ಲಿ ಉಂಟಾಗಲು ಕಾರಣವೇನು ಎಂಬುದರ ಬಗ್ಗೆ ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದಾರೆ.

ಆದರೆ, ಈ ನಿಗೂಢ ಕುಳಿ ಕುರಿತಂತೆ ಮಾತನಾಡಿರುವ ಆರ್ಕ್ಟಿಕ್‌ನ ವೈಜ್ಞಾನಿಕ ಸಂಶೋಧನಾ ಕೇಂದ್ರದ ವಿಜ್ಞಾನಿ, ಸಂಶೋಧಕ ಆಂಡ್ರೀ ಪ್ಲೇಖಾನೋವ್, ಭೂ ತಳದಲ್ಲಿ ಹೆಚ್ಚಿದ ಒತ್ತಡದಿಂದಾಗಿ ಈ ಕುಳಿ ಸಂಭವಿಸಿದ್ದು, ಇದರಿಂದ ಈ ಪ್ರಾಂತ್ಯದಲ್ಲಿ ಉಷ್ಣಾಂಶ ದ್ವಿಗುಣಗೊಳ್ಳುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಿದ್ದಾರೆ. [ಬಿಮ್ಮ ಸಿಂಕ್ ಹೋಲ್]

Mysterious giant crater spotted at the 'end of the world' in Siberia; scientists baffled

ಉತ್ತರ ಪ್ರಾಂತ್ಯದ ಯಮೆಲ್ ದ್ವೀಪ ರಾಷ್ಟ್ರದ ಬೋವಾನೆಂಕೋವಾದಿಂದ ಕೇವಲ 30 ಕಿಮೀ ಅಂತರದಲ್ಲಿ ಕಂಡುಬಂದಿರುವ ಈ ಭಾರಿ ಕುಳಿಯ ಬಳಿಗೆ ಭೇಟಿ ನೀಡಿದ ಸಂಶೋಧಕ ಪ್ಲೆಖಾನೋವ್, ಸ್ಥಳ ಪರಿಶೀಲನೆ ನಡೆಸಿ, ಸುಮಾರು ಶೇ.80ರಷ್ಟು ಭಾಗದ ಕುಳಿಯಲ್ಲಿ ಹಿಮ ಶೇಖರಣೆಯಾಗಿದ್ದು, ಸ್ಫೋಟ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ. ಜುಲೈ 16ರಂದು ಈ ಕುಳಿ ಬಿದ್ದಿದೆ. ಈ ಕುಳಿಯಿಂದಾಗಿ ಈ ಭಾಗದ ಜನರಲ್ಲಿ ತೀವ್ರ ಆತಂಕ ಮೂಡಿದ್ದು ಭೀತಿಗೊಳಗಾಗಿದ್ದಾರೆ. ದೈತ್ಯಕುಳಿಯ ವಿಡಿಯೋ ಇಲ್ಲಿದೆ ನೋಡಿ..

English summary
A mysterious giant hole has appeared at the 'end of the world' in Siberia, leaving scientists perplexed, media reports said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X