ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯ ಗೊತ್ತಾ? ಮುಸ್ಲಿಂರಿಗೆ ಭಯೋತ್ಪಾದನೆ ಬೇಕಿಲ್ಲವಂತೆ!

|
Google Oneindia Kannada News

ಪಿಜಿಎಪಿ (PEW Global Attitudes Project) ಇತ್ತೀಚೆಗೆ ಇಸ್ಲಾಂ ರಾಷ್ಟ್ರಗಳಲ್ಲಿ ಅಧ್ಯಯನವೊಂದನ್ನು ನಡೆಸಿದೆ. ಇಸ್ಲಾಂ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಮುಸ್ಲಿಮರು ಭಯೋತ್ಪಾದನೆ ಮತ್ತು ಜಿಹಾದ್ ಬಗ್ಗೆ ಯಾವ ನಿಲುವನ್ನು ತಾಳಿದ್ದಾರೆಂದು ಸವಿವರವಾಗಿ ಈ ಅಧ್ಯಯನದಲ್ಲಿ ತಿಳಿಸಲಾಗಿದೆ.

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಎಂಡ್ ಸಿರಿಯಾ (ಐಎಸ್ಐಎಸ್) ಮಧ್ಯಪ್ರಾಚ್ಯ ಭಾಗದಲ್ಲಿ ತನ್ನ ಕರಾಳ ಹಿಡಿತವನ್ನು ಬಿಗಿಗೊಳಿಸುತ್ತಿರುವ ಈ ಸಂದರ್ಭದಲ್ಲಿ ಈ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ಬಂದಿದೆ.

ವಿಶ್ವದ ಹದಿನಾಲ್ಕು ಮುಸ್ಲಿಂ ಪ್ರಾಬಲ್ಯವಿರುವ ದೇಶಗಳಲ್ಲಿನ 14,244 ಮಂದಿ ಭಾಗಿಯಾಗಿರುವ ಈ ಅಧ್ಯಯನವನ್ನು ಈ ವರ್ಷದ ಎಪ್ರಿಲ್ 10 ರಿಂದ ಮೇ 25ರ ಅವಧಿಯಲ್ಲಿ ನಡೆಸಲಾಗಿತ್ತು. (ಇಸ್ಲಾಂ ಸಾಮ್ರಾಜ್ಯ ವಿಸ್ತರಣೆ: ಉಗ್ರರ ಕಣ್ಣು ಭಾರತದತ್ತ)

ಏಪ್ರಿಲ್ ತಿಂಗಳ ಆದಿಯಲ್ಲಿ ಇರಾಕ್ ಮತ್ತು ಸಿರಿಯಾ ಭಾಗದಲ್ಲಿ ಉಗ್ರರ ಹಿಡಿತ ಈ ಪ್ರಮಾಣದಲ್ಲಿ ಇಲ್ಲದಿದ್ದರೂ ಐಎಸ್ಐಎಸ್ ಮತ್ತು ತಾಲಿಬಾನ್ ಉಗ್ರರ ದಾಳಿಯ ಭೀತಿಯ ಬಗ್ಗೆ ಮುಸ್ಲಿಂ ರಾಷ್ಟ್ರಗಳಲ್ಲಿನ ಜನತೆ ತೀವ್ರ ಕಾಳಜಿಯನ್ನು ಹೊಂದಿದ್ದರು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಅದರಲ್ಲೂ ಮುಸ್ಲಿಂ ರಾಷ್ಟ್ರದ ವಿಸ್ತರಣೆಗಾಗಿ ಹೆಚ್ಚಿನ ದಾಳಿಗೆ ಸನ್ನದ್ದವಾಗುವಂತೆ ತನ್ನ ಉಗ್ರ ಪಡೆಗಳಿಗೆ ಐಎಸ್ಐಎಸ್ ಸಂಘಟನೆ ಕರೆ ನೀಡಿರುವುದಕ್ಕೂ ಅಧ್ಯಯನದಲ್ಲಿ ಭಾಗಿಯಾಗಿದ್ದವರು ತೀವ್ರ ವಿಷಾದವನ್ನು ವ್ಯಕ್ತ ಪಡಿಸಿದ್ದಾರೆ. ಮುಂದೆ ಓದಿ..

(ಫೋಟೋ: ಪಿಟಿಐ: ಮಾಹಿತಿ: ವಾಷಿಂಗ್ಟನ್ ಪೋಸ್ಟ್, PEW ಗ್ಲೋಬಲ್)

ಮಧ್ಯಪ್ರಾಚ್ಯ ಭಾಗದಲ್ಲಿ

ಮಧ್ಯಪ್ರಾಚ್ಯ ಭಾಗದಲ್ಲಿ

ವಿಶ್ವದಲ್ಲಿನ ಮತ್ತು ಪ್ರಮುಖವಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಜನರು ತೀವ್ರ ನೋವನ್ನು ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಪ್ರಾಬಲ್ಯವಿರುವ ಲೆಬನಾನ್ ನಲ್ಲಿ ಶೇ. 92, ಟುನೇಶಿಯಾದಲ್ಲಿ ಶೇ.80, ಈಜಿಪ್ಟ್ ಶೇ. 75, ಜೋರ್ಡಾನ್ ಶೇ. 62, ಟರ್ಕಿಯಲ್ಲಿನ ಶೇ. 50ರಷ್ಟು ಮಂದಿ ಜಿಹಾದ್ ಬಗ್ಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.

ಉಗ್ರರ ವಿರುದ್ದ ಲೆಬನಾನ್ ಜನತೆ ಕೆಂಡ

ಉಗ್ರರ ವಿರುದ್ದ ಲೆಬನಾನ್ ಜನತೆ ಕೆಂಡ

ಉಗ್ರರ ದಾಳಿಯಿಂದ ಹೈರಾಣವಾಗಿರುವ ಲೆಬನಾನ್ ಜನತೆ ಭಯೋತ್ಪಾದನೆಯ ವಿರುದ್ದ ಕೆಂಡಕಾರುತ್ತಿದ್ದಾರೆ. ಅಲ್ ಖೈದಾ ಉಗ್ರ ಸಂಘಟನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಲೆಬನಾನ್ (ಶೇ. 96), ಟರ್ಕಿ (ಶೇ.85), ಜೋರ್ಡಾನ್ (ಶೇ.83), ಈಜಿಪ್ಟ್ (ಶೇ. 81), ಟುನೇಶಿಯಾ (ಶೇ.74), ಬಾಂಗ್ಲಾದೇಶ (ಶೇ. 66), ಇಂಡೋನೇಶಿಯಾ (ಶೇ. 56), ಪಾಕಿಸ್ತಾನ (ಶೇ. 42) ಮತ್ತು ಮಲೇಷಿಯಾದ ಶೇ. 32ರಷ್ಟು ಮಂದಿ ಈ ಸಂಘಟನೆಯ ಕಾರ್ಯವೈಖರಿಗೆ ತಮ್ಮ ವಿರೋಧ ವ್ಯಕ್ತ ಪಡಿಸಿದ್ದಾರೆ.

ಅಲ್ ಖೈದಾಗೆ ಸ್ವಲ್ಪ ಮಟ್ಟಿನ ಬೆಂಬಲ್

ಅಲ್ ಖೈದಾಗೆ ಸ್ವಲ್ಪ ಮಟ್ಟಿನ ಬೆಂಬಲ್

ಆದಗ್ಯೂ, ಮುಸ್ಲಿಂ ಪ್ರಾಬಲ್ಯವಿರುವ ಈ ರಾಷ್ಟ್ರಗಳಲ್ಲಿ ಅಲ್ ಖೈದಾ ಸಂಘಟನೆಗೆ ಸ್ವಲ್ಪ ಮಟ್ಟಿನ ಬೆಂಬಲವಿರುವುದೂ ಕಂಡು ಬಂದಿದೆ, ಅದಕ್ಕಿರುವ ಕಾರಣವೆಂದರೆ ಸುನ್ನಿ ತೀವ್ರವಾದಕ್ಕಾಗಿ. ಪ್ರಮುಖವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಜನತೆ ತಾಲಿಬಾಲ್ ವಿರುದ್ದ ಬೇಸತ್ತಿ ಹೋಗಿರುವುದು ರಕ್ತಪಾತ ಶಾಸ್ವತ ಅಲ್ಲ ಎನ್ನುವ ನಿರ್ಧಾರಕ್ಕೆ ಬಂದಂತಿದೆ.

ಆತ್ಮಹತ್ಯಾ ದಾಳಿಯ ಬಗ್ಗೆ

ಆತ್ಮಹತ್ಯಾ ದಾಳಿಯ ಬಗ್ಗೆ

ಆತ್ಮಹತ್ಯಾ ದಾಳಿಯ ಬಗ್ಗೆ ಕೇಳಿದ ಪ್ರಶ್ನೆಗೆ, ಕೆಲವೊಂದು ಮುಸ್ಲಿಂ ರಾಷ್ಟ್ರಗಳಲ್ಲಿ ಇಂತಹ ದಾಳಿಗೆ ಬೆಂಬಲ ವ್ಯಕ್ತವಾಗಿರುವುದು ಆಶ್ಚರ್ಯ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಜನತೆ ಪ್ಯಾಲೇಸ್ತೇನ್ ಭಾಗದಲ್ಲಿ ನಡೆಯುವ ಆತ್ಮಹತ್ಯಾ ದಾಳಿಗೆ ಬೆಂಬಲ ಸೂಚಿಸಿರುವುದು ಅಧ್ಯಯನದಲ್ಲಿನ ಗಮನಿಸಬೇಕಾದ ಅಂಶ. ಆದರೆ ಪಾಕಿಸ್ತಾನದ ಜನತೆ ಇತ್ತೀಚಿನ ದಿನಗಳಲ್ಲಿ ಯಾವುದೇ ರೀತಿಯ ಹಿಂಸಾಚಾರದ ವಿರುದ್ದವಾಗಿದ್ದಾರೆಂದು ಸಂಸ್ಥೆ ನಡೆಸಿದ ಅಧ್ಯಯನದಲ್ಲಿನ ಪ್ರಮುಖ ಅಂಶಗಳಲ್ಲೊಂದು.

ಮೌಲ್ವಿ, ಮುಲ್ಲಾಗಳ ಜಿಹಾದ್ ಕರೆ

ಮೌಲ್ವಿ, ಮುಲ್ಲಾಗಳ ಜಿಹಾದ್ ಕರೆ

ಬಹಳಷ್ಟು ಬಾರಿ ನಾವು ಗಮನಿಸುತ್ತಿದ್ದ ಹಾಗೇ ಮೌಲ್ವಿಗಳು, ಮುಲ್ಲಾಗಳು ಮತ್ತು ಧಾರ್ಮಿಕ ಗುರುಗಳು ಜಿಹಾದ್ ಬೆಂಬಲಿಸಿ ಸಾರ್ವಜನಿಕವಾಗಿ ಕರೆ ನೀಡುತ್ತಾರೆ. ಮುಸ್ಲಿಮರಿಗೇ ಇಲ್ಲದ ಜಿಹಾದ್ ರಕ್ತ ಸಂಪ್ರದಾಯದ ಮೇಲಿನ ಕುರುಡು ಪದ್ದತಿ ಇವರಿಗ್ಯಾಕೆ ಎನ್ನುವುದು ಇಲ್ಲಿ ಹುಟ್ಟುವ ಪ್ರಶ್ನೆ?

English summary
Muslims hate terrorism and Jihad too, a PEW study conducted during the period of April 10 to May 25, 2014. This study conducted in 14 Islam countries and more than fourteen thousand people participated in this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X