ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Hijack ಆಗಿದೆ; ಆಗಿಲ್ಲ: ಮಲೇಷ್ಯಾ ಪ್ರಧಾನಿ ಗೊಂದಲ

By Srinath
|
Google Oneindia Kannada News

ಕೌಲಾಲಂಪುರ, ಮಾರ್ಚ್ 15: ಮಲೇಷಿಯಾದ ಪ್ರಧಾನಿ ನಜಿಬ್ ರಜಾಕ್ ಅವರು ವಾರದ ಹಿಂದೆ ನಾಪತ್ತೆಯಾದ ಬೋಯಿಂಗ್ ವಿಮಾನದ ಬಗ್ಗೆ ಮಾತನಾಡಿದ್ದಾರೆ. ಆದರೆ ಅದು ಅಪಹರಣವಾಗಿದೆಯಾ? ಎಂಬುದರ ಬಗ್ಗೆ ಖಚಿತವಾಗಿ ಏನೂ ಹೇಳಲಿಲ್ಲ. ಅಪಹರಣ ಆಗಿದ್ದರೂ ಆಗಿರಬಹುದು. ತಮ್ಮ ಸರಕಾರ ಎಲ್ಲ ಸಾಧ್ಯತೆಗಳ ಬಗ್ಗೆಯೂ ಆಲೋಚಿಸುತ್ತಿದೆ ಎಂದು ಪ್ರಕರಣದ ಬಗ್ಗೆ ಮತ್ತಷ್ಟು ಗೊಂದಲ ಹುಟ್ಟುಹಾಕಿದ್ದಾರೆ.

ಯಾರೋ ವಿಮಾನದಲ್ಲಿದ್ದವರೇ ಉದ್ದೇಶಪೂರ್ವಕವಾಗಿಯೇ ಅದರ ಪ್ರಯಾಣ ದಿಕ್ಕನ್ನು ಬದಲಿಸಿದ್ದಾರೆ ಎಂದು ಪ್ರಧಾನಿ ನಜಿಬ್ ರಜಾಕ್ ಹೇಳಿದರು. ಜತೆಗೆ, 'ನಮ್ಮ ತನಿಖಾಧಿಕಾರಿಗಳು ಸಲ್ಲಿರುವ ವರದಿಯನ್ನು ಆಧರಿಸಿ ಹೇಳುವುದಾದರೆ ಮಧ್ಯ ಏಷ್ಯಾದ ಕಝಕಸ್ತಾನ ಮತ್ತು ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಅದು ಬಿದ್ದಿರಬಹುದು' ಎಂದೂ ಅವರು ಹೇಳಿದ್ದಾರೆ.

Missing Malaysia Airlines Boeing plane has been hijacked- Malaysian investigators

ಹಿಂದಿನ ಸುದ್ದಿ: ಒಂದು ವಾರದ ಹಿಂದೆ ನಾಪತ್ತೆಯಾಗಿದ್ದ ಮಲೇಷಿಯಾದ ಬೋಯಿಂಗ್ ವಿಮಾನವನ್ನು ಅಷ್ಟೂ ಪ್ರಯಾಣಿಕರ ಸಮೇತ ಅಪಹರಿಸಲಾಗಿದೆ ಎಂದು ಮಲೇಷಿಯಾ ಸರಕಾರ ಇದೀಗತಾನೆ ಘೋಷಿಸಿದೆ.

ಮಲೇಷಿಯಾದ ಪ್ರಧಾನಿ ನಜಿಬ್ ರಜಾಕ್ ಅವರು ಸದ್ಯದಲ್ಲೇ ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ, ತನಿಖಾ ತಂಡ ಸಲ್ಲಿಸಿರುವ ವರದಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

239 ಮಂದಿ ಮಲೇಷಿಯಾ ವಿಮಾನ ಏನಾಯ್ತು ಎಂದು ಇಡೀ ವಿಶ್ವವೇ ಒಂದು ವಾರರಿಂದ ಉಸಿರು ಬಿಗಿಹಿಡಿದು ಚಿಂತಿಸುತ್ತಿತ್ತು. ಅದು ಸಮುದ್ರದಲ್ಲಿ ಬಿದ್ದಿದೆ ಎಂಬುದು ಬಹುತೇಕ ಮಂದಿಯ ಅನಿಸಿಕೆಯಾಗಿತ್ತು. ಆದರೆ ಇದೀಗ ಆ ವಾದಗಳನ್ನೆಲ್ಲ ತಳ್ಳಿ ಹಾಕಿರುವ ಸರಕಾರ, ವಿಮಾನ ಹೈಜಾಕ್ ಆಗಿರುವ ಬಗ್ಗೆ ಯಾವುದೇ ಅನುಮಾನವೇ ಇಲ್ಲ ಎಂದು ಹೇಳಿದೆ.

'Malaysian Airlines flight MH370 ವಿಮಾನವು ಸಮದ್ರದಲ್ಲಿ ಪತನವಾಗಿದೆ ಎಂದು ಇದುವರೆಗೂ ನಂಬಲಾಗಿತ್ತು. ಆದರೆ ತಾಜಾ ವರದಿಗಳ ಪ್ರಕಾರ ಆಕಾಶದಲ್ಲಿ ಕಣ್ಮರೆಯಾಗಿದೆ ಎಂದು ಭಾವಿಸಲಾಗಿದ್ದ ವಿಮಾನವು hijack ಆಗಿದೆ' ಎಂದು ಸರಕಾರದ ಅಧಿಕೃತ ವಕ್ತಾರರು ಹೇಳಿದ್ದಾರೆ.

ಪ್ರಕರಣದ ತನಿಖೆಗೆ ಇಳಿದಿದ್ದ ತನಿಖಾಧಿಕಾರಿಗಳು 'ಅನುಭವಸ್ಥ ಪೈಲಟ್ (ಒಬ್ಬರು ಅಥವಾ ಇಬ್ಬರು) ವಿಮಾನವನ್ನು hijack ಮಾಡಿದ್ದಾರೆ. ಅಪಹರಣದ ಬಗ್ಗೆ ಮಾಹಿತಿ ಬಹಿರಂಗವಾಗಬಾರದೆಂದು ಅಪಹರಣಕಾರರು ಸಂಪರ್ಕ ಸಾಧನಗಳನ್ನು ಸ್ಥಗಿತಗೊಳಿಸಿದ್ದಾರೆ' ಎಂದು ಖಚಿತ ದನಿಯಲ್ಲಿ ಹೇಳಿದ್ದಾರೆ. ಆದರೆ ಅಪಹರಣಕ್ಕೆ ಕಾರಣವೇನು? ಅಪಹರಣಕಾರರ ಗುರಿಯೇನು? ಅಪಹೃತ ಪ್ರಯಾಣಿಕರು ಜೀವಂತವಾಗಿದ್ದಾರಾ? ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

ಐದು ಭಾರತೀಯರು ಮತ್ತು ವಿಮಾನ ಸಿಬ್ಬಂದಿ ಸೇರಿದಂತೆ 239 ಮಂದಿ ಮಲೇಷಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಇದೀಗ ಈ ಪ್ರಯಾಣಿಕರ ಕುಟುಂಬ ವರ್ಗ ಸ್ವಲ್ಪ ನೆಮ್ಮದಿಯ ನಿಟ್ಟುಸಿರುಬಿಟ್ಟಿದೆಯಾದರೂ ಅವರ ಸ್ಥಿತಿಗತಿ ಏನಾಗಿದೆಯೋ ಎಂಬುದುರ ಬಗ್ಗೆ ಚಿಂತನೆಗೊಳಗಾಗಿದೆ.

English summary
The whereabouts of the ill fated missing MH 370 Boeing 777 is not yet known. But Investigators have concluded that one or more people with significant flying experience hijacked the missing Malaysia Airlines jet, switched off communication devices and steered it off-course, a Malaysian government official involved in the investigation said on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X