ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅತಿ ತೂಕದ ವ್ಯಕ್ತಿ ಯುರಿಬಿ ಇನ್ನಿಲ್ಲ

By Mahesh
|
Google Oneindia Kannada News

ಮೆಕ್ಸಿಕೋ, ಮೇ.28: ವಿಶ್ವದ ಅತಿ ತೂಕದ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ದಾಖಲೆ ನಿರ್ಮಿಸಿದ್ದ ಮ್ಯಾನ್ಯುಯಲ್‌ ಯುರಿಬಿ ಸೋಮವಾರ ನಿಧನ ಹೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸ್ಥೂಲಕಾಯದಿಂದ ಹೃದಯಬಡಿತ ಸಮಸ್ಯೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಮ್ಯಾನ್ಯುಯಲ್. ಮೇ 2ರಂದು ಆಸ್ಪತ್ರೆಗೆ ದಾಖಲಾಗಿದ್ದರು.ಮೆಕ್ಸಿಕೋದ 'ಹೆವಿವೇಟ್ 'ಮ್ಯಾನ್ಯುಯಲ್‌ ಅವರು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿ ಪ್ರಕಟಿಸಿದ್ದಾರೆ. ಆದರೆ, ಮ್ಯಾನ್ಯುಯಲ್ ಯುರಿಬಿ ಅವರ ಸಾವಿಗೆ ನಿಖರ ಕಾರಣವನ್ನು ತಿಳಿಸಿಲ್ಲ. ಸುಮಾರು 560 ಕೆ.ಜಿ. ತೂಕವಿದ್ದ ಅವರು 2006ರಲ್ಲಿ ಗಿನ್ನೆಸ್‌ ದಾಖಲೆ ಸ್ಥಾಪಿಸಿದ್ದರು.

ಅನಾರೋಗ್ಯದ ಕಾರಣ ವೈದ್ಯರ ಸಲಹೆ ಬಳಿಕ ಯುರಿಬಿ ಅವರು ತಮ್ಮ ದೇಹದ ತೂಕವನ್ನು 394 ಕೆ.ಜಿಗೆ ಇಳಿಸಿಕೊಂಡರಾದರೂ ಸ್ವತಂತ್ರವಾಗಿ ಎದ್ದು ಓಡಾಡುವಂತಹ ಪರಿಸ್ಥಿತಿಯಲ್ಲಿ ಅವರಿರಲಿಲ್ಲ. ಭಾರಿ ತೂಕವಿದ್ದ ಮ್ಯಾನ್ಯುಯಲ್‌ ಅವರು ಹಾಸಿಗೆಯಿಂದ ಏಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅವರನ್ನು ಕ್ರೇನ್ ಸಹಾಯದಿಂದ ಆಸ್ಪತ್ರೆ ಕೊಠಡಿಗೆ ಸಾಗಿಸಲಾಗಿತ್ತು ಎಂದು ತಿಳಿದು ಬಂದಿದೆ.

Mexico: World's “heaviest” man Manuel Uribe dead at 48

ಮೇ 2ರಂದು ಹೃದಯಬಡಿತದಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಕ್ರೇನ್‌ ಮುಖಾಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. 2002ರಿಂದ ಅವರ ಆರೋಗ್ಯ ಸರಿ ಇರಲಿಲ್ಲ, ಅನೇಕ ಬಾರಿ ಚಿಕಿತ್ಸೆ ಪಡೆದುಕೊಂಡರೂ ದೇಹಾರೋಗ್ಯ ಸುಧಾರಣೆ ಕಂಡಿರಲಿಲ್ಲ. ಯುರಿಬಿ ಅವರ ತಾಯಿ ಹಾಗೂ ಗೆಳೆಯರು ಅತನ ಶುಶ್ರೂಷೆ ಮಾಡುತ್ತಿದ್ದರು, ಆತನ ಸ್ನಾನ, ಪಾನ ಎಲ್ಲವನ್ನು ನೋಡಿಕೊಳ್ಳುತ್ತಿದ್ದರು.

2008ರಲ್ಲಿ 48 ವರ್ಷ ವಯಸ್ಸಿನ ಯುರಿಬಿಗೆ ಮದುವೆ ಯೋಗವೂ ಕೂಡಿ ಬಂದಿತ್ತು. ಕ್ಲಾಡಿಯಾ ಸೊಲಿಸ್ ಎಂಬುವರನ್ನು ಯುರಿಬಿ ಮದುವೆಯಾಗಿದ್ದರು. ಅದರೆ, ದೇಹ ತೂಕ ಇಳಿಸಿಕೊಳ್ಳದ ಕಾರಣ ದಾಂಪತ್ಯ ಜೀವನವಿರಲಿ ದೈನಂದಿನ ಬದುಕು ದುಸ್ತರವಾಗಿಬಿಟ್ಟಿತ್ತು. ಗಿನ್ನಿಸ್ ದಾಖಲೆ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದ ಯುರಿಬಿಗೆ ದೇಹ ತೂಕ ಇಳಿಸಿಕೊಂಡು ಎಲ್ಲರಂತೆ ಬಾಳುವ ಇಚ್ಛೆ ಇತ್ತು ಆದರೆ, ಬಿಡದಂತೆ ಕಾಡುತ್ತಿದ್ದ ಕಾಯಿಲೆಗಳಿಂದ ಯುರಿಬಿ ಚೇತರಿಸಿಕೊಳ್ಳಲಾಗಲಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

English summary
World's former heaviest man, Manuel Uribe died at a hospital in Mexico on Monday.Uribe was bed-ridden since 2002 as he was not able to walk or even move on his own. His weight was also reduced to 394 kgs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X