ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ : ಪೆರಾಲ್ಟ ಗೋಲು, ಮೆಕ್ಸಿಕೋಗೆ ಜಯ

By Mahesh
|
Google Oneindia Kannada News

ನಟಾಲ್(ಬ್ರೆಜಿಲ್) , ಜೂ.14: ಅಫ್ರಿಕಾದ ಬಲಿಷ್ಠ ದೇಶ ಕ್ಯಾಮರೂನ್ ವಿರುದ್ಧ ವಿಶ್ವಕಪ್ ನಲ್ಲ್ಲಿ ಮೆಕ್ಸಿಕೋ ತಂಡ ಪ್ರಪ್ರಥಮ ಬಾರಿಗೆ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದೆ. ಈ ಮೂಲಕ ಎ ಗುಂಪಿನಲ್ಲಿ ಬ್ರೆಜಿಲ್ ಜತೆಗೆ ಮುಂದಿನ ಹಂತಕ್ಕೇರುವ ಕನಸು ಕಾಣಬಹುದಾಗಿದೆ.

ಮುಂಪಡೆ ಆಟಗಾರ ಪೆರಾಲ್ಟ ಹೊಡೆದ ಗೋಲಿನ ಮೂಲಕ ಮೆಕ್ಸಿಕೋ ತಂಡಕ್ಕೆ ಐತಿಹಾಸಿಕ ಜಯ ದಾಖಲಿಸುವ ಸುಳಿವು ಪಂದ್ಯದ 61ನೇ ನಿಮಿಷದಲ್ಲೇ ಸಿಕ್ಕಿತ್ತು. ಕ್ಯಾಮರೂನ್ ತಂಡ ಸ್ಟಾರ್ ಆಟಗಾರ, ನಾಯಕ ಸ್ಯಾಮುಯಲ್ ಎಟೋ ವೈಫಲ್ಯದಿಂದ ಬಳಲಿತು. ಮೋಟಿಂಗ್, ಎಕೊಟ್ಟೋ ಉತ್ತಮ ಆಟ ಪ್ರದರ್ಶಿಸಿದರು.

ಸ್ಯಾಂಟೋಸ್ ಸ್ಟಾರ್ : ಮೆಕ್ಸಿಕೋ ಪರ ಗಿಯಾವಾನಿ ಡಾಸ್ ಸ್ಯಾಂಟೋಸ್ ಉತ್ತಮ ಆಟ ಪ್ರದರ್ಶಿಸಿ ಎರಡು ಬಾರಿ ಚೆಂಡನ್ನು ಗೋಲ್ ಪೋಸ್ಟ್ ಒಳಗೆ ಕಳಿಸಿದರೂ ಅದೃಷ್ಟದ ಬೆಂಬಲ ಸಿಗಲಿಲ್ಲ. ಎರಡೂ ಬಾರಿ ಆಫ್ ಸೈಡ್ ಎಂದು ಸಹಾಯಕ ರೆಫ್ರಿ ತೀರ್ಪು ಇತ್ತರು. ಉಳಿದಂತೆ ಆಗ್ವಿಲರ್, ಹೆರೆರಾ, ನಾಯಕ ಮಾರ್ಕ್ವೆಜ್ ಉತ್ತಮ ಆಟ ಪ್ರದರ್ಶಿಸಿದರು. ಕ್ಯಾಮರೂನ್ ತಂಡಕ್ಕೂ ಕೂಡಾ ಪಂದ್ಯದ 16ನೇ ನಿಮಿಷದಲ್ಲಿ ಇದೇ ಅನುಭವವಾಯಿತು. ಎಟೋ ಆಫ್ ಸೈಡ್ ಇದ್ದ ಕಾರಣ ಮೋಟಿಂಗ್ ಹೊಡೆದ ಗೋಲು ಪರಿಗಣಿಸಲಾಗಲಿಲ್ಲ.

Peralta gives Mexico 1-0 victory against Cameroon

ಆದರೂ ಈ ಬಾರಿಯ ರೆಫ್ರಿಗಳ ನಿರ್ಣಯಗಳ ಬಗ್ಗೆ ಸಾಕಷ್ಟು ಚರ್ಚೆ ಆರಂಭವಾಗಿದೆ. ಫುಟ್ಬಾಲ್ ದಿಗ್ಗಜ ಗ್ಯಾರಿ ಲಿನೇಕರ್ ಕೂಡಾ ರೆಫ್ರಿಗಳ ನಿರ್ಣಯಗಳು ಸಾಧಾರಣ ಮಟ್ಟದಲ್ಲಿದ್ದು, ವಿಶ್ವಕಪ್ ನಲ್ಲಿ ಇಂಥ ನಿರ್ಣಯಗಳು ನೋಡಲು ಕಷ್ಟವಾಗುತ್ತದೆ ಎಂದಿದ್ದಾರೆ, ಬ್ರೆಜಿಲ್ ಪಂದ್ಯದಲ್ಲಿ ಜಪಾನಿ ರೆಫ್ರಿ ಕೊಟ್ಟ ಪೆನಾಲ್ಟಿ ಕೂಡಾ ಚರ್ಚೆಗೊಳಲ್ಪಟ್ಟಿದೆ. [ಪಂದ್ಯದ ವರದಿ ಓದಿ]

ಮೆಕ್ಸಿಕೋ vs ಕ್ಯಾಮರೂನ್ ಪಂದ್ಯದ ಅಂಕಿ ಅಂಶ:

* ಗೋಲ್ ಪೋಸ್ಟ್ ನತ್ತ ಒದ್ದಿದ್ದು : ಮೆಕ್ಸಿಕೋ 9(5) >> ಕ್ಯಾಮರೂನ್ 10(4)
* ಫೌಲ್ : ಮೆಕ್ಸಿಕೋ 11 >> ಕ್ಯಾಮರೂನ್ 12
* ಚೆಂಡಿನ ಹಿಡಿತ : ಮೆಕ್ಸಿಕೋ 58% >> ಕ್ಯಾಮರೂನ್ 48%
* ಕಾರ್ನರ್ : ಮೆಕ್ಸಿಕೋ 2 >> ಕ್ಯಾಮರೂನ್ 5
* ಆಫ್ ಸೈಡ್ಸ್: ಮೆಕ್ಸಿಕೋ 5 >> ಕ್ಯಾಮರೂನ್ 3
* ಹಳದಿ ಕಾರ್ಡ್:ಮೆಕ್ಸಿಕೋ 1 >> ಕ್ಯಾಮರೂನ್ 1

English summary
Mexico had a smile at the 61st minute when Oribe Peralta scored following a fumble by Cameroon's goalkeeper Charles Intandje in their first match in the 2014 Fifa World Cup on Friday. The goal went on to give Mexico their first win in this year's edition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X