ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನ್ ಉಗ್ರರಿಂದ ಅಟಾಕ್: ಪಾಕ್ ಸುಸ್ತೋ ಸುಸ್ತು

By Srinath
|
Google Oneindia Kannada News

ಕರಾಚಿ, ಜೂನ್ 9: ನಿನ್ನೆ ನಡುರಾತ್ರಿ ಭಯೋತ್ಪಾದಕರು ಇಲ್ಲಿನ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದ್ದು, ತಮ್ಮ ವಶಕ್ಕೆ ತೆಗೆದುಕೊಂಡು ಅಟ್ಟಹಾಸ ಮೆರೆಯುತ್ತಿದ್ದಾರೆ.

ತಾಜಾ ವರದಿಗಳ ಪ್ರಕಾರ ತೆಹ್ರೀಕ್ ಎ ತಾಲಿಬಾನ್ ಸಂಘಟನೆ ಹೊಣೆ ಹೊತ್ತಿದೆ. ಈ ಮಧ್ಯೆ, ಕರಾಚಿ ದುಷ್ಕೃತ್ಯಕ್ಕೆ ಭಾರತದ ನೂತನ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂದು ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜಾ ಮೊಹಮದ್ ಸಯೀದ್ ಟ್ವೀಟ್ ಮಾಡಿ ಗುಡುಗಿದ್ದಾನೆ.
ಇದಾಗುತ್ತಿದ್ದಂತೆ, ವಿಮಾನ ನಿಲ್ದಾಣದ ಒಂದು ಮೂಲೆಯಲ್ಲಿ ಉಗ್ರರು ಇನ್ನೂ ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಮತ್ತೆ ಗುಂಡಿನ ದಾಳಿ ನಡೆಸಿದ್ದಾರೆ. (ವಿಮಾನಗಳ ಹೈಜಾಕ್ ಮಾಡಿ ಭಾರತದ ಮೇಲೆ ದಾಳಿ?)

2008ರ ನವೆಂಬರ್ ತಿಂಗಳಲ್ಲಿ ಮುಂಬೈ ಮೇಲೆ ನಡೆಸಿದ ದಾಳಿ ಮಾದರಿಯಲ್ಲಿ ಉಗ್ರರು ಇದೀಗ ತಮ್ಮದೇ ನೆಲದಲ್ಲಿ ಅಂದರೆ ಪಾಕಿಸ್ತಾನದ ಆಯಕಟ್ಟಿನ ವಿಮಾನ ನಿಲ್ದಾಣದ ಮೇಲೆ ಎರಗಿದ್ದಾರೆ. ಇದರಿಂದ ವಾಣಿಜ್ಯ ನಗರಿ ಕರಾಚಿ ಬೆಚ್ಚಿಬಿದ್ದಿದೆ.

Karachi Jinnah International airport under terrorist attack

ವಿಶಾಲವಾದ ವಿಮಾನ ನಿಲ್ದಾಣದಲ್ಲಿ ರಕ್ತಪಿಪಾಸುಗಳಂತೆ ವಿಜೃಂಭಿಸುತ್ತಿರುವ ಉಗ್ರರು ಇದುವರೆಗೂ 13 ಮಂದಿಯನ್ನು ಆಹುತಿ ತೆಗೆದುಕೊಂಡಿದ್ದಾರೆ. ನಿನ್ನೆ ನಡುರಾತ್ರಿ 12 ಗಂಟೆಯಲ್ಲಿ ನಿಲ್ದಾಣದ ಗಡಿಯಲ್ಲಿ ಭದ್ರತೆಗೆ ಹಾಕಲಾಗಿದ್ದ ಮುಳ್ಳುಬೇಲಿಯನ್ನು ತುಂಡರಿಸಿಕೊಂಡು ಒಳನುಸುಳಿರುವ ಉಗ್ರರು ಇಡೀ ನಿಲ್ದಾಣವನ್ನು ತಮ್ಮ ಹತೋಟಿಗೆ ತೆಗೆದುಕೊಂಡಿದ್ದಾರೆ.

ಮತ್ತೂ ಒಂದು ಬದಿಯಿಂದ ಒಳನುಸುಳಿರುವ ಉಗ್ರರು ಅಲ್ಲಿನ ಭದ್ರತಾ ಸಿಬ್ಬಂದಿಯನ್ನು ಸಾಯಿಸಿ, ಒಳಪ್ರವೇಶಿಸಿದ್ದಾರೆ. ಇದರಿಂದ ತಕ್ಷಣ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. 2 ವಿಮಾನಗಳಿಗೆ ಬೆಂಕಿ ಬಿದ್ದಿದ್ದು, 5 ವಿಮಾನಗಳು ಜಖಂಗೊಂಡಿವೆ.

ವಿಮಾನಗಳಲ್ಲಿರುವ ಪ್ರಯಾಣಿಕರು ಅಲ್ಲೇ ಉಳಿದುಕೊಂಡಿದ್ದಾರೆ. ನೆಲದ ಮೇಲಿನ ಸಿಬ್ಬಂದಿ ಮತ್ತು ಪ್ರಯಾಣಿಕರೂ ಸಹ ಉಗ್ರರ ಕಪಿಮುಷ್ಟಿಯಲ್ಲಿದ್ದಾರೆ. ಸುಸಜ್ಜಿತವಾಗಿ ದಾಳಿ ನಡೆಸಿರುವ ಉಗ್ರರ ಬಳಿ ಭಾರಿ ಶಸ್ತ್ರಾಸ್ತ್ರಗಳಿವೆಯೆಂದು ಮಾಧ್ಯಮ ವರದಿಗಳು ತಿಳಿಸಿವೆ. ಉಗ್ರರು ಎಷ್ಟು ಮಂದಿಯಿದ್ದಾರೆ ಎಂಬುದು ಇನ್ನೂ ಅಂದಾಜಿಗೆ ಸಿಕ್ಕಿಲ್ಲ. ಗ್ರೆನೇಡುಗಳೊಂದಿಗೆ ಆಗಾಗ್ಗೆ ಭಾರಿ ಸ್ಫೋಟಗಳನ್ನುಂಟುಮಾಡುತ್ತಿದ್ದಾರೆ.

ತಾಜಾ ವರದಿಗಳ ಪ್ರಕಾರ ಕಾರ್ಯಾಚರಣೆಗಿಳಿದಿದ್ದ ಪಾಕ್ ಸೇನೆ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದು, ಇಂದು ಬೆಳಗಿನ ಜಾವ ನಿಲ್ದಾಣವನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ. ಒಟ್ಟು 6 ಉಗ್ರರು ಹತರಾಗಿದ್ದಾರೆ.

ಘಟನೆ ಸಂಬಂಧ ಯಾವುದೇ ಸಂಘಟನೆಗಳು ಜವಾಬ್ದಾರಿ ಹೊತ್ತುಕೊಂಡಿಲ್ಲ. ಈ ಹಿಂದೆಯೂ ಇಂತಹುದೇ ದಾಳಿಗಳು ನಡೆದಾಗ ಪಾಕ್ ಸರಕಾರದ ವಿರುದ್ಧ ಸಿಟ್ಟಿಗೆದ್ದು ಪ್ರತೀಕಾರವಾಗಿ ದಾಳಿಗಳನ್ನು ನಡೆಸಿದ್ದಾಗಿ ತಾಲಿಬಾನ್ ಸಂಘಟನೆ ಒಪ್ಪಿಕೊಳ್ಳುತ್ತಿತ್ತು. ಈಗಿನ ಕಾರ್ಯಾಚರಣೆ ವಿಧಾನ ನೋಡಿದರೆ ಇದೂ ತಾಲಿಬಾನಿ ಉಗ್ರರ ಕೃತ್ಯವೇ ಎನ್ನಬಹುದಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

English summary
Pakistan: Karachi Jinnah International airport under terrorist attack. Heavily armed militants attacked Pakistan's busiest airport on Sunday night, as flights were suspended and the army was called in, officials said. The operation finally ended in the wee hours of Monday. A Pakistani official said in the morning that the siege was over and altogether 13 people were dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X