ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾಚಿ: ಮುಗಿದ ದಾಳಿ, ಆಶ್ಚರ್ಯ ಉಗ್ರರು ಪರಾರಿ

By Srinath
|
Google Oneindia Kannada News

karachi-jinnah-international-airport-again-attacked-by-terrorist-june-10
ಕರಾಚಿ, ಜೂನ್ 10: ಕರಾಚಿ ವಿಮಾನದ ನಿಲ್ದಾಣದ ಮೇಲೆ ಇಂದು ಮಧ್ಯಾಹ್ನ ದಿಢೀರನೆ ದಾಳಿ ನಡೆಸಿದ ಉಗ್ರರು ಭದ್ರತಾ ಪಡೆಗಳ ಪ್ರತಿ ದಾಳಿಯಿಂದ ಹಿಮ್ಮೆಟ್ಟಿದ್ದಾರೆ. ದಾಳಿಗಿಳಿದಿದ್ದ 10 ಮಂದಿ ಉಗ್ರರು ಆಶ್ಚರ್ಯಕರ ರೀತಿಯಲ್ಲಿ ಭಧ್ರತಾ ಪಡೆಗಳ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ.

ಅಧಿಕಾರಿಗಳು ವಿಮಾನದ ನಿಲ್ದಾಣವನ್ನು ಮತ್ತೆ ಸ್ವಾಧೀನಕ್ಕೆ ಪಡೆಯುತ್ತಿದ್ದಂತೆ ವಿಮಾನಗಳ ಹಾರಾಟವನ್ನು ಪುನರಾರಂಭಿಸಿದರು. ದಾಳಿಯಲ್ಲಿ ಯಾವುದೇ ಸಾವು ನೋವುಗಳಾಗಿಲ್ಲ.

ಗಮನಾರ್ಹವೆಂದರೆ ಭಾನುವಾರ ರಾತ್ರಿ ಇದೇ ಉಗ್ರರು (ತೆಹ್ರೀಕ್-ಇ-ತಾಲಿಬನ್ ಭಯೋತ್ಪಾದಕ ಸಂಘಟನೆ) ಇದೇ ಸ್ಥಳದಲ್ಲಿ ಅಟ್ಟಹಾಸ ಮೆರೆದು 29 ಮಂದಿ ಸಾವಿಗೆ ಕಾರಣರಾಗಿದ್ದರು. ಅದಾದ ನಂತರ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದ ಭದ್ರತಾ ಪಡೆಗಳು ಭಾರಿ ಕಾವಲು ಕಾಯುತ್ತಿದ್ದರು. (ತಾಲಿಬಾನ್ ಉಗ್ರರಿಂದ ಅಟಾಕ್: ಪಾಕ್ ಸುಸ್ತೋ ಸುಸ್ತು)

ಇದೀಗ ಮರುದಾಳಿ ನಡೆಸಿದ್ದೂ ಅಲ್ಲದೇ, ಸೇನಾಪಡೆಗಳ ಕಣ್ತಪ್ಪಿಸಿ, ಪರಾರಿಯಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಟಿವಿ ಕ್ಯಾಮರಾಗಳು ಘಟನಾ ಸ್ಥಳವನ್ನು ಸುತ್ತುವರಿದಿದ್ದವು. ಆದರೂ ಮಟಮಟ ಮಧ್ಯಾಹ್ನ ಉಗ್ರರು ಪರಾರಿಯಾಗಿದ್ದಾರೆ ಎಂಬುದನ್ನು ಜಗತ್ತು ಇದೀಗ ನಂಬಬೇಕಾಗಿದೆ.

ಹಿಂದಿನ ಸುದ್ದಿ: ಭಾನುವಾರ ನಡುರಾತ್ರಿಯ ದಾಳಿ ನಂತರ ಭಯೋತ್ಪಾದಕರು ಇಂದು ಮಧ್ಯಾಹ್ನ 1 ಗಂಟೆಯಲ್ಲಿ ಜಿನ್ನಾ ವಿಮಾನ ನಿಲ್ದಾಣದ ಬಳಿ ಮತ್ತೆ ದಾಳಿ ನಡೆಸಿದ್ದಾರೆ. (ವಿಮಾನಗಳ ಹೈಜಾಕ್ ಮಾಡಿ ಭಾರತದ ಮೇಲೆ ದಾಳಿ?)

ಕರಾಚಿ ವಿಮಾನದ ನಿಲ್ದಾಣಕ್ಕೆ ಅಂಟಿಕೊಂಡಂತಿರುವ ಸೇನಾ ಹಾಸ್ಟೆಲ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಉಗ್ರರು ಮತ್ತು ಪಾಕಿಸ್ತಾನದ ಭದ್ರತಾ ಪಡೆಗಳ ಮಧ್ಯೆ ಭಾರಿ ಪ್ರಮಾಣದ ಗುಂಡಿನ ಚಕಮಕಿ ನಡೆಯುತ್ತಿದೆ. ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ.

Airport Security Force hostel ಒಳಗೆ 5-10 ಉಗ್ರರು ಅಡಗಿರುವ ಸಾಧ್ಯತೆಯಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ತೆರಳುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ನಿನ್ನೆ ಮಂಗಳವಾರವಷ್ಟೇ ಭದ್ರತಾ ಪಡೆಗಳು ಜಿನ್ನಾ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದರು.

English summary
After a huge terrorist attack on Sunday night on Karachi Jinnah International airport in Pakistan again the terrorists have attacked the Airport a short while ago today (June 10 at 1 pm)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X