ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ದಾಂಗೆ ಗಲ್ಲುಶಿಕ್ಷೆ ವಿಧಿಸಿದ್ದ ನ್ಯಾಯಾಧೀಶರ ಹತ್ಯೆ?

By Srinath
|
Google Oneindia Kannada News

judge-abdul-rahman-who-sentenced-saddam-hussein-is-executed-by-isis
ಬಾಗ್ದಾದ್, ಜೂನ್ 23: ಇರಾಕಿನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ ಗೆ ಗಲ್ಲುಶಿಕ್ಷೆ ವಿಧಿಸಿದ್ದ ನ್ಯಾಯಾಧೀಶ ರೌಫ್ ಅಬ್ದುಲ್ ರಹಮಾನ್ ಅವರನ್ನು ಇಸಿಸ್ (ISIS) ಉಗ್ರರು ಹತ್ಯೆಗೈದಿರುವ ಸಾಧ್ಯತೆಯಿದೆ.

ಕಳೆದ ವಾರವಷ್ಟೇ ಸುನ್ನಿ ಉಗ್ರಗಾಮಿ ಸಂಘಟನೆಯು ನ್ಯಾಯಾಧೀಶರನ್ನು ಅಪಹರಿಸಿತ್ತು. ಕೆಲ ಮೂಲಗಳ ಪ್ರಕಾರ, ಸದ್ದಾಂ ಹುಸೇನ್ ಸಾವಿಗೆ ಪ್ರತೀಕಾರವಾಗಿ ಉಗ್ರರು ಇವರನ್ನು ಹತ್ಯೆಗೈದಿದ್ದಾರೆ.

ಜೂನ್ 18ರಂದೇ ಜಡ್ಜ್ ರೌಫ್ ಅಬ್ದುಲ್ ರಹಮಾನ್ (Raouf Abdul Rahman) ಸಾವನ್ನಪ್ಪಿರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಇರಾಕ್ ಸರಕಾರ ಈ ಸುದ್ದಿಯನ್ನು ದೃಢಪಡಿಸಿಯೂ ಇಲ್ಲ ಅಥವಾ ನಿರಾಕರಿಸಿಯೂ ಇಲ್ಲ.

ಸದ್ದಾಂ ಹುಸೇನ್ ಸರ್ವಾಧಿಕಾರ ಪತನಗೊಂಡ ಬಳಿಕ, 69 ವರ್ಷದ ಸದ್ದಾಂಗೆ 2006ರಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಇರಾಕ್ ಬಂಡುಕೋರರ ಕೈಗೆ ಸಿಲುಕುವ ಮುನ್ನ ನ್ಯಾ. ರೆಹಮಾನ್ ಅವರು ಡ್ಯಾನ್ಸರ್ ವೇಷ ತೊಟ್ಟು ಬಾಗ್ದಾದ್ ನಗರದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು.

ಆದರೆ ಜೋರ್ಡಾನಿನ ಸಂಸದ ಖಲೀಲ್ ಅತಿಯಾ ಅವರು ಫೇಸ್ ಬುಕ್ ನಲ್ಲಿ ಈ ಬಗ್ಗೆ ಬರೆದಿದ್ದು, ಹುಸೇನ್ ವಿಚಾರಣೆಗಾಗಿ ಸ್ಥಾಪಿಸಲ್ಪಟ್ಟಿದ್ದ ಇರಾಕಿನ ಅತ್ಯುನ್ನತ ಅಪರಾಧ ನ್ಯಾಯಮಂಡಳಿಯ ಪ್ರಧಾನ ನ್ಯಾಯಾಧೀಶರಾಗಿದ್ದರು. ಹಾಗಾಗಿ ಇರಾಕಿ ಕ್ರಾಂತಿಕಾರಿಗಳು ಅವರನ್ನು ಬಂಧಿಸಿ, ಮರಣದಂಡನೆಗೆ ಗುರಿಪಡಿಸಿದ್ದಾರೆ ಎಂದು ಬರೆದಿದ್ದಾರೆ.

English summary
Judge Raouf Abdul Rahman who sentenced dictator Saddam Hussein to death 'is captured and executed by ISIS. He is believed to have been arrested on June 16, and died two days later. But His death has not been confirmed by the Iraqi government, but officials had not denied reports of his capture last week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X