ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ತದ ನದಿಯಲ್ಲಿ ಮುಳುಗಿಸಿಬಿಡ್ತೀವಿ, ಹುಷಾರ್!

By Mahesh
|
Google Oneindia Kannada News

ಬಾಗ್ದಾದ್, ಆ.19: 'ಒಂದು ವೇಳೆ ನೀವು ನಮ್ಮ ಸಂಘಟನೆಯ ಉಗ್ರರ ಮೇಲೆ ದಾಳಿ ನಡೆಸಿದ್ದೇ ಆದಲ್ಲಿ, ನಾವು ಪ್ರತಿಯೊಬ್ಬ ಅಮೆರಿಕ ಪ್ರಜೆಯನ್ನೂ ಕಂಡಲ್ಲಿ ಕೊಲ್ಲುತ್ತೇವೆ ಮತ್ತು ನಿಮ್ಮನ್ನೆಲ್ಲ ರಕ್ತದ ಮಡುವಿನಲ್ಲಿ ಮುಳುಗಿಸುತ್ತೇವೆ ಹುಷಾರ್' ಎಂದು ಇಸ್ಲಾಮಿ ರಾಜ್ಯಗಳ ಭಯೋತ್ಪಾದಕರ ತಂಡ ಅಮೆರಿಕಕ್ಕೆ ಬೆದರಿಕೆ ಸಂದೇಶ ಕಳಿಸಿದೆ.

2011ರಿಂದಲೂ ನಿರಂತರವಾಗಿ ಅಮೆರಿಕ ಪಡೆಗಳ ವೈಮಾನಿಕ ದಾಳಿಗಳನ್ನು ಈ ಸಂಘಟನೆ ಎದುರಿಸುತ್ತಿದೆ.. ಈಗಾಗಲೇ ಇರಾಕಿನ ಬಹುತೇಕ ಭಾಗಗಳನ್ನು ಐಎಸ್‍ಐಎಸ್ ಉಗ್ರವಾದಿಗಳು ಸ್ವಾಧೀನ ಪಡಿಸಿಕೊಂಡಿದ್ದಾರೆ. ಅಮೆರಿಕ ಯೋಧನೊಬ್ಬನನ್ನು ಭೀಕರವಾಗಿ ಶಿರಚ್ಛೇದನ ಮಾಡುತ್ತಿರುವ ಘಟನೆಯನ್ನು ಸೆರೆ ಹಿಡಿದಿರುವ ವೀಡಿಯೋ ಟೇಪ್ ಒಂದನ್ನು ಅಮೆರಿಕಕ್ಕೆ ರವಾನಿಸಿರುವ ಉಗ್ರರು, ಅದರಲ್ಲಿ ನಿಮ್ಮನ್ನೆಲ್ಲ ರಕ್ತದ ಮಡುವಿನಲ್ಲಿ ಮುಳುಗಿಸುತ್ತೇನೆ ಎಂಬ ಸಂದೇಶವನ್ನು ಇಂಗ್ಲೀಷ್ ನಲ್ಲಿ ಕಳುಹಿಸಿದ್ದಾರೆ.

Islamic State message to America: 'We will drown all of you in blood'

ಉತ್ತರ ಇರಾಕಿನಲ್ಲಿರುವ ಪ್ರಮುಖ ಡ್ಯಾಂ ವಶಪಡಿಸಿಕೊಂಡಿದ್ದ ಐಎಸ್‍ಐಎಸ್ ಉಗ್ರರ ವಿರುದ್ಧ ಅಮೆರಿಕ ಪಡೆಗಳು ವೈಮಾನಿಕ ದಾಳಿ ನಡೆಸಿದ್ದವು. ವಿದ್ಯುತ್ ಉತ್ಪಾದನೆ ಸೇರಿದಂತೆ ವಿವಿಧೋದ್ದೇಶದ ಈ ಮೊಸೂಲ್ ಅಣೆಕಟ್ಟೆಯನ್ನು ಮರು ವಶಪಡಿಸಿಕೊಳ್ಳಲು ಅಮೆರಿಕ ಪಡೆಗಳು ಕುರ್ದಿಷ್ ಸೈನಿಕರಿಗೆ ನೆರವು ನೀಡಿ ಉಗ್ರರ ನೆಲೆಗಳ ವಿರುದ್ಧ ವೈಮಾನಿಕ ದಾಳಿ ನಡೆಸಲಾಗಿತ್ತು.

ಒಟ್ಟಾರೆ ಇದೀಗ ಈ ಅಣೆಕಟ್ಟೆಯನ್ನು ಕುರ್ದಿಷ್ ಪಡೆಗಳು ಸ್ವಾಧೀನ ಪಡಿಸಿಕೊಂಡಿವೆ. ಇಸ್ಲಾಮಿಕ್ ರಾಜ್ಯಗಳ ಭಯೋತ್ಪಾದಕ ಒಕ್ಕೂಟವಾದ ಅಲ್ ಖೈದಾ ಆಕ್ರಮಣದಿಂದ ತತ್ತರಿಸಿ ಹೋಗಿರುವ ಉತ್ತರ ಇರಾಕಿನಲ್ಲಿ ಯಜಿದಿ ಅಲ್ಪಸಂಖ್ಯಾತರು, ಕ್ರೈಸ್ತರು ಸಾವಿರಾರು ಸಂಖ್ಯೆಗಳಲ್ಲಿ ಮನೆಗಳನ್ನು ತೊರೆದು ಜೀವ ರಕ್ಷಣೆಗಾಗಿ ಸಿಕ್ಕ ಸಿಕ್ಕ ಕಡೆಗೆ ಪಲಾಯನ ಮಾಡುತ್ತಿದ್ದಾರೆ. ಒಟ್ಟಾರೆ ಮೈಸೂಲ್ ಡ್ಯಾಂ ವಶಪಡಿಸಿಕೊಳ್ಳುವ ಮೂಲಕ ಅಮೆರಿಕ ಪಡೆಗೆ ಇರಾಕ್ ಉಗ್ರರ ವಿರುದ್ಧದ ಸಮರದಲ್ಲಿ ಮೊದಲ ಜಯ ಸಿಕ್ಕಂತಾಗಿದೆ.

ಆದರೆ, ಅಲ್ ಖೈದಾಕ್ಕಿಂತ ಭಿನ್ನವಾದ ಹೋರಾಟ ತಂತ್ರ ಅನುಸರಿಸುತ್ತಿರುವ ಇಸ್ಲಾಮಿಕ್ ರಾಜ್ಯ ಒಕ್ಕೂಟ, ಇರಾಕ್ ಹಾಗೂ ಸಿರಿಯಾದಲ್ಲಿನ ಭೂಮಿಗಳನ್ನು ಒಂದೊಂದಾಗಿ ವಶಕ್ಕೆ ತೆಗೆದುಕೊಳ್ಳುವುದನ್ನು ಪ್ರಮುಖ ಉದ್ದೇಶವನ್ನಾಗಿಸಿಕೊಂಡಿವೆ. ಅದರೆ, ಅಮೆರಿಕ ಏನಾದರೂ ದಾಳಿ ನಡೆಸಿದರೆ, ಅಲ್ ಖೈದಾಕ್ಕಿಂತ ಉಗ್ರವಾಗಿ ತಿರುಗಿ ಬೀಳುವುದಾಗಿ ಎಚ್ಚರಿಸಿದೆ.

English summary
The Islamic State militant group that has seized large parts of Iraq and drawn the first American air strikes since the end of the occupation in 2011 has warned the United States it will attack Americans "in any place" if the raids hit its militants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X