ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತನ ರುಂಡ ಚೆಂಡಾಡಿದ ಇರಾಕ್ ಉಗ್ರರು

By Mahesh
|
Google Oneindia Kannada News

ವಾಷಿಂಗ್ಟನ್, ಆ.20: 'ಅಮೆರಿಕ ನಮ್ಮ ನೆಲೆಗಳ ಮೇಲೆ ದಾಳಿ ನಡೆಸಿದರೆ ಅಮೆರಿಕ ಪ್ರಜೆಗಳನ್ನು ಕಂಡಲ್ಲಿ ಕೊಲ್ಲುತ್ತೇವೆ' ಎಂದು ಬೆದರಿಕೆ ಒಡ್ದಿದ್ದ ಇರಾಕಿನ ಉಗ್ರರು, ತಮ್ಮ ಹೀನಾಯ ಕೃತ್ಯದ ಸ್ಯಾಂಪಲ್ ತೋರಿಸಿದ್ದಾರೆ. ಅಮೆರಿಕ ಮೂಲದ ಪತ್ರಕರ್ತನ ರುಂಡ ಚೆಂಡಾಡಿದ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

ಇರಾಕ್ ಹಾಗೂ ಸಿರಿಯಾದ ಬಂಡುಕೋರರ ಗುಂಪು(ISIS) ಯುಎಸ್ ಜನರ್ಲಿಸ್ಟ್ ಒಬ್ಬರ ತಲೆ ಕತ್ತರಿಸಿ, ಮತ್ತೊಬ್ಬನಿಗೆ ಜೀವ ಬೆದರಿಕೆ ಒಡ್ಡಿದ ವಿಡಿಯೋವನ್ನು ಸಿಎನ್ ಎನ್ ಪ್ರಸಾರ ಮಾಡಿದೆ. ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಅಮೆರಿಕ ಇಸ್ ಹಿಸ್ ರಿಯಲ್ ಕಿಲ್ಲರ್ ಎಂಬ ಸಂದೇಶ ಹೇಳುತ್ತಾ ಪತ್ರಕರ್ತನ ಹತ್ಯೆ ಮಾಡುತ್ತಾನೆ.

ಸಾವಿಗೂ ಮುನ್ನ ಪತ್ರಕರ್ತ ಫೊಲೆ, 'ನಾನು ಇನ್ನಷ್ಟು ಕಾಲ ಬದುಕಬೇಕು, ನನಗೆ ಸ್ವಾತಂತ್ರ್ಯ ಸಿಕ್ಕಿ ನನ್ನ ಕುಟುಂಬವನ್ನು ಸೇರುವ ಬಯಕೆಯಾಗುತ್ತಿದೆ' ಎಂದು ಸಂದೇಶ ಹೇಳುತ್ತಾನೆ ನಂತರ ಆತನ ತಲೆ ಕತ್ತರಿಸಲಾಗುತ್ತದೆ.[ರಕ್ತದ ನದಿಯಲ್ಲಿ ಮುಳುಗಿಸಿಬಿಡ್ತೀವಿ, ಹುಷಾರ್!]

Video posted by ISIS shows beheading of an American journalist

ಇದಾದ ಕೆಲ ನಿಮಿಷಗಳ ನಂತರ ಮತ್ತೊಬ್ಬ ಅಮೆರಿಕ ಪ್ರಜೆ ಸ್ಟೀವನ್ ಜೋಲ್ ಸೊಟ್ಲೊಫ್ ಗೆ ಮುಖವಾಡ ಧರಿಸಿದ ವ್ಯಕ್ತಿ ಜೀವ ಬೆದರಿಕೆ ಒಡ್ಡುತ್ತಾನೆ, ಇರಾಕಿನಿಂದ ಅಮೆರಿಕ ಸೈನ್ಯ ಕಾಲ್ತೆಗೆಯದಿದ್ದರೆ ಇದೇ ರೀತಿ ಶಿಕ್ಷೆ ಎಲ್ಲರಿಗೂ ಕಾದಿದೆ ಎಂದು ಐಎಸ್ಐಎಸ್ ಸಂಘಟನೆ ಎಚ್ಚರಿಕೆ ನೀಡಿದೆ.

ಇರಾಕಿ ಉಗ್ರರಿಂದ ಅಮೆರಿಕ ಪತ್ರಕರ್ತನ ಭೀಕರ ಹತ್ಯೆ ಬಗ್ಗೆ ಬರಾಕ್ ಒಬಾಮಾ ಸರ್ಕಾರ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ವಿಡಿಯೋ ನೈಜತೆ ಬಗ್ಗೆ ಕೂಡಾ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಇರಾಕಿನ ಆಗು ಹೋಗಿನ ಬಗ್ಗೆ ಕಾಲ ಕಾಲಕ್ಕೆ ಒಬಾಮಾ ಅವರಿಗೆ ಮಾಹಿತಿ ನೀಡಲಾಗುತ್ತಿದೆ ಎಂದಷ್ಟೇ ಶ್ವೇತಭವನದ ವಕ್ತಾರರು ಹೇಳಿದ್ದಾರೆ.[ಇರಾಕಿನಲ್ಲಿ ಬಾಂಬ್ ಬಿದ್ರೆ, ಭಾರತದಲ್ಲೇಕೆ ನಡುಕ]

ಮಾಧ್ಯಮಗಳ ವರದಿ ಪ್ರಕಾರ ಮೃತ ಪತ್ರಕರ್ತ ಫೊಲೆ ಅವರನ್ನು 2012 ನವೆಂಬರ್ ನಲ್ಲಿ ಸಿರಿಯಾದಿಂದ ಅಪಹರಣ ಮಾಡಲಾಗಿತ್ತು, ಈಗ ಪತ್ತೆಯಾಗಿದ್ದು ಈ ವಿಡಿಯೋ ಮೂಲಕವೇ ಎನ್ನಲಾಗಿದೆ. ವಿಡಿಯೋ ಇಲ್ಲಿದೆ ನೋಡಿ...

English summary
United States is in shock after a video posted by the Islamic State of Iraq and Syria (ISIS) showing the beheading of a US journalist and threatening the life of another American.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X