ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್ ಪ್ರಜೆ ಕತ್ತು ಕತ್ತರಿಸಿದ ಇರಾಕಿ ಉಗ್ರರು

By Mahesh
|
Google Oneindia Kannada News

ಬೈರೂತ್, ಸೆ.14: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಉಗ್ರರ ದಮನಕ್ಕೆ ಕರೆ ನೀಡಿದ ಬೆನ್ನಲ್ಲೇ ಬ್ರಿಟನ್ ಪ್ರಜೆಯೊಬ್ಬರ ಶಿರಚ್ಛೇದನ ಮಾಡುತ್ತಿರುವ ಹೇಯ ಕೃತ್ಯದ ವಿಡಿಯೋ ತಯಾರಿಸಿ ಇರಾಕಿ ಉಗ್ರರು ಬಿಡುಗಡೆ ಮಾಡಿದ್ದಾರೆ. ಉಗ್ರರ ಕೃತ್ಯವನ್ನು ಬ್ರಿಟಿಷ್ ಪ್ರಧಾನಿ ಡೇವಿಡ್ ಕೆಮರೂನ್ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ತೀವ್ರವಾಗಿ ಖಂಡಿಸಿದ್ದಾರೆ.

ಉಗ್ರರು ವಿಡಿಯೋ ಕೊನೆಯಲ್ಲಿ ಅಮೆರಿಕ ಮಿತ್ರ ರಾಷ್ಟ್ರಗಳಿಗೊಂದು ಎಚ್ಚರಿಕೆ ಎಂಬ ಸಂದೇಶ ನೀಡಿದ್ದಾರೆ. ಬ್ರಿಟನ್ ಪರವಾಗಿ ಫ್ರಾನ್ಸ್ ಸಂಸ್ಥೆಯ ಮೂಲಕ ಸುಧಾರಣಾ ಕಾರ್ಯದಲ್ಲಿ ನಿರತನಾಗಿದ್ದ ಡೇವಿಡ್ ಹೈನ್ಸ್ ಎಂಬ ವ್ಯಕ್ತಿಯ ಶಿರಚ್ಛೇದ ಮಾಡುತ್ತಿರುವ ವಿಡಿಯೋವನ್ನು ಇಸ್ಲಾಮಿಕ್ ಸ್ಟೇಟ್ ಆಪ್ ಇರಾಕ್ ಅಂಡ್ ಸಿರಿಯಾ (ಐಎಸ್‍ಐಎಸ್) ಉಗ್ರರು ಮಾಧ್ಯಮಗಳಿಗೆ ರವಾನಿಸಿದ್ದಾರೆ.

ಇಸ್ಲಾಮಿಕ್ ಉಗ್ರರ ಈ ವಿಡಿಯೋ ಚಿತ್ರಣವನ್ನು ತೀವ್ರವಾಗಿ ಖಂಡಿಸಿರುವ ಬ್ರಿಟನ್ ಪ್ರಧಾನಿ ಡೆವಿಡ್ ಕೆಮರೋನ್ ಇದೊಂದು ಅತ್ಯಂತ ಅಮಾನುಷ ಕೃತ್ಯ ಎಂದಿದ್ದಾರೆ. ಡೆವಿಡ್ ಹೈನ್ಸ್‍ನನ್ನು 2013ರಲ್ಲಿ ಉಗ್ರರು ಅಪಹರಿಸಲಾಗಿತ್ತು. ಅಮಾಯಕ ಕಾರ್ಯಕರ್ತರನ್ನು ಈ ರೀತಿ ಹತ್ಯೆ ಮಾಡುವುದು ತೀರಾ ಅನ್ಯಾಯ ಎಂದು ಬ್ರಿಟನ್ ಪ್ರಧಾನಿ ಹೇಳಿದ್ದಾರೆ.

ISIS Horror: Video shows slaying of British aid worker

44ರ ಹರೆಯದ ಡೇವಿಡ್ ಹೈನ್ಸ್ ಉಗ್ರರಿಂದ ಶಿರಚ್ಛೇದಕ್ಕೊಳಗಾದ ಮೂರನೇ ವ್ಯಕ್ತಿಯಾಗಿದ್ದಾರೆ. ಸಿರಿಯಾ-ಇರಾಕ್ ಗಳಲ್ಲಿ ಪ್ರಭುತ್ವ ಸ್ಥಾಪಿಸುವ ಹಂತ ತಲುಪಿರುವ ಉಗ್ರರು ಈ ಮುಂಚೆ ಇಬ್ಬರು ಅಮೆರಿಕ ಮೂಲದ ಪತ್ರಕರ್ತರನ್ನು ಇದೇ ರೀತಿ ಕೊಲೆ ಮಾಡಿದ್ದರು.

ಅಮೆರಿಕ ನಮ್ಮ ನೆಲೆಗಳ ಮೇಲೆ ದಾಳಿ ನಡೆಸಿದರೆ ಅಮೆರಿಕ ಪ್ರಜೆಗಳನ್ನು ಕಂಡಲ್ಲಿ ಕೊಲ್ಲುತ್ತೇವೆ' ಎಂದು ಬೆದರಿಕೆ ಒಡ್ದಿದ್ದ ಇರಾಕಿನ ಉಗ್ರರು, ತಮ್ಮ ಹೀನಾಯ ಕೃತ್ಯವನ್ನು ಮುಂದುವರೆಸುತ್ತಿದ್ದಾರೆ. [ರಕ್ತದ ನದಿಯಲ್ಲಿ ಮುಳುಗಿಸಿಬಿಡ್ತೀವಿ, ಹುಷಾರ್!]

ಮಿತ್ರರಾಷ್ಟ್ರದ ಕಾರ್ಯಕರ್ತನನ್ನು ಈ ರೀತಿ ಭೀಕರವಾಗಿ ಹತ್ಯೆ ಮಾಡಿರುವ ಉಗ್ರರ ವಿರುದ್ಧದ ಹೋರಾಟದಲ್ಲಿ ಅಮೆರಿಕದ ಎಲ್ಲಾ ಕೂಟ ರಾಷ್ಟ್ರಗಳೂ ಹೆಗಲಿಗೆ ಹೆಗಲು ನೀಡಿ ಹಿಂಸಾವಾದಿಗಳನ್ನು ದಮನ ಮಾಡಬೇಕು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕರೆ ನೀಡಿದ್ದರು.ಅಗತ್ಯಬಿದ್ದರೆ ಈ ಎರಡೂ ದೇಶಗಳಲ್ಲಿರುವ ಉಗ್ರರ ನೆಲೆಗಳ ಮೇಲೆ ಅಮೆರಿಕ ಪೂರ್ಣ ಪ್ರಮಾಣದಲ್ಲಿ ವಾಯು ದಾಳಿ ನಡೆಸಲಿದೆ ಎಂದಿದ್ದರು. [ಉಗ್ರರ ಸದೆಬಡೆಯಲು ಒಬಾಮಾ ರಣತಂತ್ರ]


English summary
Islamic State extremists released a video showing the beheading of British aid worker David Haines, who was abducted in Syria last year, and British Prime Minister David Cameron has condemned his slaying as "an act of pure evil."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X