ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ಮಾವು ಮೇಳ: ಮಂಡ್ಯ ಮಾವಿಗೆ ಬೇಡಿಕೆ

By Ashwath
|
Google Oneindia Kannada News

ದುಬೈ.ಮೇ 28: ಯುರೋಪಿಯನ್‌ ಒಕ್ಕೂಟ ಭಾರತೀಯ ಮಾವಿನ ಹಣ್ಣುಗಳಿಗೆ ನಿಷೇಧ ಹೇರಿದರೆ ಇತ್ತ ಸೌದಿ ಅರೇಬಿಯಾದಲ್ಲಿ ದೇಶಿಯ ಮಾವಿನ ಹಣ್ಣುಗಳಿಗೆ ಭಾರಿ ಗೌರವ ಸಿಕ್ಕಿದೆ.

ಸೌದಿಯಲ್ಲಿ ಕಳೆದ ಒಂದು ವಾರಗಳಿಂದ ಮಾವು ಮೇಳ ನಡೆಯುತ್ತಿದ್ದು ವಿಶೇಷವಾಗಿ ದೇಶದ ಹತ್ತು ಮಾವಿನ ಹಣ್ಣಿನ ತಳಿಗಳು ಇದರಲ್ಲಿ ಭಾಗವಹಿಸಿವೆ. ಇದರಲ್ಲಿ ರಾಜ್ಯದ ಮಂಡ್ಯದಲ್ಲಿ ಬೆಳೆದ ಮಾವಿನ ಹಣ್ಣು ಸೌದಿ ಜನರ ಪ್ರೀತಿಗೆ ಪಾತ್ರವಾಗಿದೆ.[ಮಾವು ಬೇಕೆ? ಲಾಲ್‌‌ಬಾಗ್‌ಗೆ ಭೇಟಿ ನೀಡಿ]

ಸೌದಿ ಸರಕಾರ ಪ್ರತಿವರ್ಷ‌ ಮಾವು ಬೆಳೆಯುವ ದೇಶಗಳಿಂದ ಮಾವನ್ನು ಅಮದು ಮಾಡಿಕೊಂಡು ರಿಯಾದ್‌ ಸೇರಿದಂತೆ ಹಲವು ಕಡೆ ಮೇಳವನ್ನು ಆಯೋಜಿಸುತ್ತಿದೆ. ದೇಶದ ಆಲ್ಫಾನ್ಸೊ, ಕೆಸರ್‌‌, ಬಾದಾಮಿ, ರಜಪುರಿ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ.

Indian Mangoes

ವಿಶ್ವದಲ್ಲಿ ಅತಿ ಹೆಚ್ಚು ಮಾವಿನ ಹಣ್ಣನ್ನು ಆಮದು ಮಾಡುವ ದೇಶಗಳಲ್ಲಿ ಸೌದಿ ಅರೇಬಿಯಾ ಒಂದಾಗಿದ್ದು, ಭಾರತ ಮತ್ತು ಪಾಕಿಸ್ತಾನದಿಂದ ಹೆಚ್ಚಾಗಿ ಸೌದಿ ಮಾವಿನ ಹಣ್ಣುಗಳನ್ನು ಆಮದು ಮಾಡಿಕೊಳ್ಳುತ್ತಿದೆ.[ಭಾರತದ ಕೆಂಪು ಮೆಣಸಿಗೆ ಸೌದಿ ಸರ್ಕಾರ ನಿಷೇಧ]

ಭಾರತದ ಆಲ್ಫಾನ್ಸೊ ಮಾವು ಸೇರಿದಂತೆ ಕೆಸವುಗೆಡ್ಡೆ, ಹಾಗಲಕಾಯಿ, ಪಡುವಲಕಾಯಿ, ಬದನೆ ಆಮದಿಗೆ ಯುರೋಪಿಯನ್‌ ಯುನಿಯನ್‌ ತಾತ್ಕಾಲಿಕ ನಿಷೇಧ ಹಾಕಿದೆ. ನಿಷೇಧ ಮೇ 1ರಿಂದ ಜಾರಿಗೆ ಬಂದಿದ್ದು 2015ರ ಡಿಸೆಂಬರ್‌ 31ರವರೆಗೆ ಈ ನಿಷೇಧ ಜಾರಿಯಲ್ಲಿ ಇರಲಿದೆ. ಭಾರತ ಸರ್ಕಾರ ಈಗಾಗಲೇ ಯುರೋಪಿಯನ್‌ ಒಕ್ಕೂಟದೊಂದಿಗೆ ನಿಷೇಧ ತೆರವಿಗೆ ಮಾತುಕತೆ ನಡೆಸುತ್ತಿದ್ದರೂ ಇಲ್ಲಿಯವರೆಗೆ ಯಾವುದೇ ಫಲ ಸಿಕ್ಕಿಲ್ಲ.

mango graphics
English summary
More than 10 mango varieties from India are on display at a week-long mango festival in Saudi Arabia, also featuring a wide range of mango products. Mangoes from Karnataka's Mandya district are on display during the week-long festival that ends on May 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X