ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಚನೆ : ಎನ್ನಾರೈ ವೈದ್ಯ ದಂಪತಿ ಬಂಧನ

By Mahesh
|
Google Oneindia Kannada News

ವಾಷಿಂಗ್ಟನ್, ಜೂ.10: ಆರೋಗ್ಯದ ವಿಷಯದಲ್ಲಿ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಭಾರತ ಮೂಲದ ವೈದ್ಯ ದಂಪತಿಯನ್ನು ಬಂಧಿಸಿ ನಂತರ ಭಾರಿ ಮೊತ್ತದ ದಂಡ ಕಟ್ಟಿಸಿಕೊಂಡು ಬಿಡುಗಡೆ ಮಾಡಲಾಗಿದೆ.

ನೀತಾ ಕೆ.ಪಟೇಲ್(51) ಹಾಗೂ ಕೀರ್ತೀಶ್.ಎನ್ ಪಟೇಲ್(51) ಅವರು ತಮ್ಮ ಡಯೋಗ್ನಿಸ್ಟರ್ ಕೇಂದ್ರ (ರೋಗ ತಪಾಸಣೆ ಕೇಂದ್ರ)ದಲ್ಲಿ ರೋಗಿಗಳನ್ನು ತಪಾಸಣೆಗೊಳಪಡಿಸಿ ನೀಡುತ್ತಿದ್ದ ವರದಿಗಳಿಗೆ ಯಾವುದೇ ಅಧಿಕೃತ ವೈದ್ಯನ ಸಹಿ ಇಲ್ಲದಿರುವುದು ಸಾಬೀತಾಗಿದೆ.

ತಾವೇ ತಯಾರಿಸಿದ ಸಹಿಯ ಮಾದರಿಯೊಂದನ್ನು ಮೆಡಿಕಲ್ ರಿಪೋರ್ಟ್‌ಗೆ ಹಚ್ಚಿಕೊಡುತ್ತಿದ್ದರು ಎಂಬ ಆರೋಪವನ್ನು ಈ ದಂಪತಿ ಎದುರಿಸುತ್ತಿದ್ದ. ಬಂಧನದ ನಂತರ ಒಂದು ಲಕ್ಷ ಡಾಲರ್ ಭದ್ರತಾ ಠೇವಣಿ ಪಡೆದು ಬಿಡುಗಡೆ ಮಾಡಲಾಗಿದೆ.

Indian-American couple arrested on charges of healthcare fraud

ಈ ದಂಪತಿ ನಡೆಸುತ್ತಿದ್ದ ಬಯೋ ಸೌಂಡ್ ಮೆಡಿಕಲ್ ಸರ್ವೀಸಸ್ ಮತ್ತು ಹಾರ್ಟ್ ಸಲ್ಯೂಷನ್ಸ್ ಆಫ್ ಪರ್ಸಿಪನಿ ಕೇಂದ್ರದಲ್ಲಿ ನೂರಾರು ರೋಗಿಗಳು ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ನರ್ಸಿಂಗ್ ಹೋಂನಲ್ಲಿ ರೋಗಿಗಳಿಗೆ ನೀಡಲಾಗುತ್ತಿದ್ದ ವರದಿಗಳಿಗೆ (ರಿಪೋರ್ಟ್) ಪರಿಶೀಲಿಸಿ ಸಹಿ ಮಾಡುವ ಯಾವುದೇ ತಜ್ಞ ವೈದ್ಯನೂ ಇರಲಿಲ್ಲ.

ಕಳೆದ ಎರಡು ವರ್ಷಗಳಿಂದಲೂ ತಾವು ರೋಗಿಗಳ ತಪಾಸಣೆ ನಡೆಸಿ ನೀಡುತ್ತಿದ್ದ ರಿಪೋರ್ಟ್ ತಾವೇ ಸೃಷ್ಟಿಸಿದ್ದ ಸಹಿಯ ಮಾದರಿಯೊಂದನ್ನು ಕಂಪ್ಯೂಟರ್‌ನಲ್ಲಿ ಸಿದ್ಧಪಡಿಸಿ ಅದನ್ನು ವರದಿಗೆ ಕಟ್ ಅಂಡ್ ಪೇಸ್ಟ್ ಮಾಡಲಾಗುತ್ತಿತ್ತು. ಈ ಮೋಸ, ವಂಚನೆ, ಅಪರಾಧಕ್ಕೆ ಆರೋಪಿಗಳಿಗೆ ಕನಿಷ್ಠ 10 ವರ್ಷ ಕಾರಾಗೃಹ ವಾಸ ಮತ್ತು 2.50 ಲಕ್ಷ ಡಾಲರ್ ದಂಡ ವಿಧಿಸಬಹುದಾಗಿದೆ.

ನಿನ್ನೆ ರಾತ್ರಿ ಬಂಧಿಸಲಾಗಿದ್ದ ದಂಪತಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ಷರತ್ತು ಬದ್ಧ ಜಾಮೀನು ನೀಡಿದ್ದಾರೆ. ನ್ಯೂಜರ್ಸಿ ನಿವಾಸಿಗಳಾಗಿರುವ ಈ ದಂಪತಿಗೆ ನ್ಯೂಜೆರ್ಸಿ ಬಿಟ್ಟು ಹೊರ ಹೋಗದಂತೆ ಹಾಗೂ ಪಾರ್ಸ್‌ಪೋರ್ಟ್‌ಗಳನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಸೂಚಿಸಲಾಗಿದೆ.

ಇವರ ಕ್ಲಿನಿಕ್‌ನಲ್ಲಿ ಈ ವರದಿಗಳನ್ನು ನೀಡುತ್ತಿದ್ದುದು ಕೇವಲ ಒಬ್ಬ ಸಿಬ್ಬಂದಿ. ಆ ವರದಿಗೆ ಆಧುನಿಕ ತಂತ್ರಜ್ಞಾನ ಬಳಸಿ ಫಿಸಿಷಿಯನ್ ಸಹಿಯನ್ನು ಜೋಡಣೆ ಮಾಡುತ್ತಿದ್ದರು. (ಪಿಟಿಐ)

English summary
An Indian-American couple was arrested in New Jersey on charges of healthcare fraud and later released on a USD 100,000 bond, a US attorney said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X