ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಗೂಢ 'ಕಪ್ಪು ರಂಧ್ರ' ಪತ್ತೆ ಹಚ್ಚಿದ ವಿದ್ಯಾರ್ಥಿ

By Mahesh
|
Google Oneindia Kannada News

ಕ್ಯಾಲಿಫೋರ್ನಿಯ, ಆ. 18: ಖಗೋಳ ವಿಜ್ಞಾನದ ಅತ್ಯಂತ ಕುತೂಹಲಕಾರಿ ಆಕಾಶ ಕಾಯ, ವಿಶ್ವದ ಅತ್ಯಂತ ಅಗೋಚರ ಹಾಗೂ ನಿಗೂಢ ಪ್ರದೇಶಗಳಲ್ಲಿ ಒಂದೆನಿಸಿರುವ ಕಪ್ಪು ರಂಧ್ರ(ಬ್ಲಾಕ್ ಹೋಲ್) ವನ್ನು ಭಾರತೀಯ ಮೂಲದ ಖಗೋಳ ವಿಜ್ಞಾನ ವಿದ್ಯಾರ್ಥಿಯೊಬ್ಬರು ಪತ್ತೆ ಹಚ್ಚಿದ್ದಾರೆ.

ಭೂಮಿಯಿಂದ ಸುಮಾರು 1.2 ಕೋಟಿ ಜ್ಯೋತಿರ್ವರ್ಷ (ಒಂದು ವರ್ಷದಲ್ಲಿ ಬೆಳಕು ಸಾಗುವ ದೂರ ಒಂದು ಜ್ಯೋತಿರ್ವರ್ಷ) ದೂರದಲ್ಲಿರುವ, ನಮಗೆ ಕಾಣುವ ಸೂರ್ಯನಿಗಿಂತ 400 ಪಟ್ಟು ದೊಡ್ಡ ಗಾತ್ರದ, ನಮಗೆ ಚಿರಪರಿಚಿತ ಆಕಾಶಗಂಗೆ (ಗ್ಯಾಲಕ್ಸಿ) 'ಎಂ82'ನಲ್ಲಿ ಈ ಅಪರೂಪದ ಕಪ್ಪು ರಂಧ್ರ ಅಡಗಿಕೊಂಡಿತ್ತು ಎನ್ನಲಾಗಿದೆ.

ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದ ಖಗೋಳಶಾಸ್ತ್ರ ಪದವೀಧರ ವಿದ್ಯಾರ್ಥಿ ಧೀರಜ್ ಪಾಶಂ ಮತ್ತು ಇಬ್ಬರು ಸಹಪಾಠಿಗಳು ಈ ಅಪರೂಪದ ಖಗೋಳ ಪ್ರದೇಶವನ್ನು ಗುರುತಿಸಿ, ಅದರ ಗಾತ್ರವನ್ನು ಅಳೆತ ಮಾಡಿದ್ದಾರೆ. 'ನೇಚರ್' ಪತ್ರಿಕೆಯಲ್ಲಿ ಆಗಸ್ಟ್ 17ರಂದು ಅವರ ಸಂಶೋಧನೆ ಆನ್‌ಲೈನ್‌ನಲ್ಲಿ ಪ್ರಕಟಗೊಂಡಿದೆ.[ಭೂಮಿಯಲ್ಲಿ ಜೀವ ಉಗಮ ಹೇಗಾಯ್ತು?]

In a rare feat, Indian-origin scientist measures black hole

ಈ ಮಧ್ಯಮ ದ್ರವ್ಯರಾಶಿಯ ಕಪ್ಪುರಂಧ್ರಗಳ ಗಾತ್ರವನ್ನು ಅಳೆಯುವುದು ತುಂಬಾ ಕಷ್ಟ ಹಾಗೂ ಕೆಲವೊಮ್ಮೆ ಇವುಗಳ ಅಸ್ತಿತ್ವವೂ ವಿವಾದಕ್ಕೀಡಾಗಿದೆ. ಹಾಗಾಗಿ, ಈ ಸಂಶೋಧನೆ ಮಹತ್ವ ಪಡೆದುಕೊಂಡಿದೆ. ವಿಶ್ವದಲ್ಲಿ ಅಸಂಖ್ಯ ಕಪ್ಪುರಂಧ್ರಗಳಿವೆ ಹಾಗೂ ನಮ್ಮ ಆಕಾಶಗಂಗೆ 'ಕ್ಷೀರಪಥ' (ಮಿಲ್ಕಿ ವೇ ಗ್ಯಾಲಕ್ಸಿ)ವೊಂದರಲ್ಲೇ 10 ಕೋಟಿ ಇಂಥ ಕಪ್ಪುರಂಧ್ರಗಳಿವೆ ಎಂದು ಅಂದಾಜು ಮಾಡಲಾಗಿದೆ.

ಮರಳುಗಾಡಿನಲ್ಲಿ ಓಯಸೀಸ್ ರೀತಿಯಲ್ಲಿ ವ್ಯೋಮಪ್ರಪಂಚದಲ್ಲಿ ಕಪ್ಪು ರಂಧ್ರಗಳು ಇಂದಿಗೂ ವಿಜ್ಞಾನಿಗಳಿಗೆ ಸವಾಲಾಗಿ ಕಾಡುತ್ತಿವೆ. ಕಪ್ಪು ರಂಧ್ರ ಗಳೆಂದರೆ ಖಗೋಳದಲ್ಲಿ ಇರುವ ಒಂದು ವ್ಯಾಪ್ತಿ ಪ್ರದೇಶ ಇದರ ಗಾತ್ರ ಶಕ್ತಿ ಎಷ್ಟಿರುತ್ತದೆ ಎಂದರೆ, ಬೆಳಕು ಕೂಡಾ ಇದರಿಂದ ತಪ್ಪಿಸಿಕೊಳ್ಳಲಾಗದು, ಎಲ್ಲವನ್ನು ತನ್ನೊಳಗೆ ಸೆಳೆದುಕೊಳ್ಳಬಲ್ಲ ಸಾಮರ್ಥ್ಯ ಹೊಂದಿರುತ್ತದೆ. ಕಪ್ಪು ರಂಧ್ರಗಳು ಸಾಮಾನ್ಯವಾಗಿ ಗೋಚರಿಸುವುದಿಲ್ಲ. ಅವುಗಳ ಗುರುತ್ವಾಕರ್ಷಣೆ ಶಕ್ತಿಯ ಮೂಲಕ ಅವುಗಳ ಪ್ರದೇಶ ವ್ಯಾಪ್ತಿಯನ್ನು ಅಳೆಯಲಾಗುತ್ತದೆ. [ಹೆಚ್ಚಿನ ಓದಿಗೆ ಕ್ಲಿಕ್ಕಿಸಿ]

English summary
A team of astronomers led by an Indian-origin astrophysicist has succeeded in accurately measuring - and thus confirming the existence of - a black hole about 400 times the mass of our sun in a galaxy 12 million light years from Earth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X