ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯದ ಬಾಟ್ಲಿ ಮೇಲೆ ಹಿಂದೂ ದೇವತೆಗಳ ಚಿತ್ರ!

By Mahesh
|
Google Oneindia Kannada News

ನೆವಾಡ, ನ.10: ಆಸ್ಟ್ರೇಲಿಯಾ ಮೂಲದ ಮದ್ಯ ತಯಾರಿಕಾ ಕಂಪೆನಿಯೊಂದು ತನ್ನ ಬಿಯರ್ ಬಾಟಲಿಗಳ ಮೇಲೆ ಹಿಂದೂ ದೇವತೆಗಳಾದ ಗಣೇಶ ಮತ್ತು ಲಕ್ಷ್ಮಿ ಚಿತ್ರಗಳನ್ನು ಮುದ್ರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂಗಳು, ಇದು ಔಚಿತ್ಯಪೂರ್ಣವಾಗಿಲ್ಲ ಎಂದು ಹೇಳಿದ್ದಾರೆ. ವಿವಾದ ಬಿಸಿಯಾಗಿರುವ ಬೆನ್ನಲ್ಲೇ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಚಿತ್ರ ಕೂಡಾ ಬಳಸಲಾಗಿದೆ ಎಂಬ ವಿಷಯ ಹೊರ ಬಿದ್ದಿದೆ.

ಹಿಂದೂ ದೇವರುಗಳನ್ನು ಅಥವಾ ಆ ರೀತಿಯ ಕಲ್ಪನೆಗಳನ್ನು ಅಥವಾ ಸಂಕೇತಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಕೆಟ್ಟ ರೀತಿಯಲ್ಲಿ ಬಳಸಿಕೊಳ್ಳುವುದು ಸ್ವೀಕಾರಾರ್ಹವಲ್ಲ, ಯಾಕೆಂದರೆ ಅದು ಭಕ್ತರ ಭಾವನೆಗಳಿಗೆ ನೋವು ಮಾಡುತ್ತದೆ ಎಂದು ಹಿಂದೂ ನಾಯಕ ರಜಹ್ ಝೇದ್ ಪ್ರತಿಕ್ರಿಯೆ ನೀಡಿದ್ದಾರೆ.

ಹಿಂದೂ ಧರ್ಮದಲ್ಲಿ ದೇವರುಗಳಾದ ಗಣೇಶ ಮತ್ತು ಲಕ್ಷ್ಮಿಯರನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತಿದೆ. ಅವರನ್ನು ದೇವಸ್ಥಾನಗಳು ಅಥವಾ ಮನೆಯ ಪೂಜಾಗೃಹಗಳಲ್ಲಿ ಪೂಜಿಸಬೇಕೇ ಹೊರತು ವಾಣಿಜ್ಯ ದುರಾಶೆಯಿಂದ ಬಿಯರ್ ಮಾರಾಟದಲ್ಲಿ ಬಳಸಬಾರದು' ಎಂದು ಝೇದ್ ಅಭಿಪ್ರಾಯಪಟ್ಟರು. ಝೇದ್ ಯೂನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂನ ಅಧ್ಯಕ್ಷರಾಗಿದ್ದಾರೆ.

ಯಾವುದೇ ಧರ್ಮದ ಸಂಕೇತಗಳನ್ನು ದುರ್ಬಳಕೆ ಮಾಡಬಾರದು ಎಂದ ಅವರು, ದೇವರುಗಳ ಚಿತ್ರಗಳನ್ನು ಹೊಂದಿರುವ ಬಿಯರ್ ಬಾಟಲಿಗಳನ್ನು ಕಂಪೆನಿ ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ರಜಹ್ ಝೇದ್ ಒತ್ತಾಯಿಸಿದರು.ಏನಿದೆ ಬಾಟ್ಲಿ ಮೇಲೆ? ಸಚಿನ್ ತೆಂಡೂಲ್ಕರ್ ಚಿತ್ರ ಬಳಕೆ ಏಕೆ? ಮುಂತಾದ ವಿವರ ಮುಂದೆ ಓದಿ...(ಐಎಎನ್ಎಸ್)

ಏನಿದೆ ಬಾಟ್ಲಿ ಮೇಲೆ

ಏನಿದೆ ಬಾಟ್ಲಿ ಮೇಲೆ

ಆಸ್ಟ್ರೇಲಿಯಾದ ನ್ಯೂ ಸೌಥ್ ವೇಲ್ಸ್ ನ ಬ್ರೂಕ್ ವೇಲ್ ಯೂನಿಯನ್ ಕಂಪನಿಯ ಜಿಂಜರ್ ಬೀರ್ ಜಾಹೀರಾತಿನಲ್ಲಿ ಜಗನ್ಮಾತೆ ಲಕ್ಷ್ಮಿದೇವಿಯ ದೇಹಕ್ಕೆ ಪ್ರಥಮ ಪೂಜಿತ ಗಣೇಶನ ರುಂಡವನ್ನು ಜೋಡಿಸಿದ ಚಿತ್ರ ಬಳಸಲಾಗಿದೆ. ಮಿಕ್ಕಂತೆ ಸಾಮಾನ್ಯ ಬೀರ್ ಬಾಟಲಿಗಳ ಪ್ರಚಾರಕ್ಕೆ ಬಳಸುವ ಸಾಲುಗಳನ್ನು ಕಾಣಬಹುದು.

ಇದರ ಜತೆಗೆ ಗಣೇಶ ತಲೆ, ಲಕ್ಷ್ಮಿ ದೇಹವಿರುವ ಚಿತ್ರ ಕಂಪನಿಯ ವೆಬ್ ಸೈಟ್ ನಲ್ಲಿ ಕಾಣಿಸಿಕೊಂಡಿದ್ದು ಅದನ್ನು ಕ್ಲಿಕ್ ಮಾಡಿದರೆ ಗಣೇಶ ತಲೆ ಜಾಗದಲ್ಲಿ ಸಚಿನ್ ತಲೆ ಕಾಣಿಸಿಕೊಳ್ಳುತ್ತದೆ.

ಹಿಂದೂ ಪುರಾಣದ ಕಲ್ಪನೆ

ಹಿಂದೂ ಪುರಾಣದ ಕಲ್ಪನೆ

ಬೀರ್ ಬಾಟಲಿ ಪ್ರಚಾರಕ್ಕೆ ಹಿಂದೂ ಪುರಾಣದ ಪಾತ್ರಗಳನ್ನು ಬಳಸಲಾಗಿದೆ. ಹಿಂದೂ ಧರ್ಮದ ಸಂಕೇತಗಳನ್ನು ಯಥೇಚ್ಛವಾಗಿ ಬಳಸಲಾಗಿದೆ. ಕಾಮಧೇನು, ಐರಾವತ, ಕಮಲ, ಗಣೇಶನ ತಲೆ ಮೇಲೆ ಅಗ್ನಿ, ಹುಲಿ ಮುಂತಾದವುಗಳನ್ನು ನೋಡಬಹುದು.

ವೆಬ್ ಸೈಟ್ ನಲ್ಲಿ ಸುಮೋ ಕುಸ್ತಿಪಟು ಕೂಡಾ ಇದ್ದು ಸಿಕ್ಸ್ ಪ್ಯಾಕ್ ಕಲ್ಪನೆಯಲ್ಲಿ ನಿಂತಿದ್ದಾನೆ, ಅತ್ತಿಂದ ಇತ್ತ ಸಾಗುವ ಚಂದ್ರನ ಅನಿಮೇಟೆಡ್ ಮುಖ, ನಾನು ಪ್ಯಾರಚೂಟ್ ನಿಂದ ಕೆಳಗಿಳಿಯುವ ವ್ಯಕ್ತಿ. ಬಲತುದಿ ಕೊನೆಯಲ್ಲಿ ಬೀರ್ ಹಿಡಿದು ನಿಂತ ನಟ ಜಾನಿ ಡೆಪ್ ಚಿತ್ರ..ಇತ್ಯಾದಿ ಚಿತ್ರಗಳಿವೆ. ಬ್ರೂಕ್ ವೆಲ್ ಯೂನಿಯನ್ ಸಂಸ್ಥೆ ಟ್ಯಾಗ್ ಲೈನ್ Quality Nonsense

ಇದೇ ಮೊದಲಲ್ಲ

ಇದೇ ಮೊದಲಲ್ಲ

ಕಳೆದ ವರ್ಷ ಕಾಳಿ ದೇವಿಯ ಹೆಸರಿನಲ್ಲಿ ಬಿಯರ್ ಉತ್ಪನ್ನ ಮಾರಾಟ ಮಾಡುವ ಅಮೆರಿಕದ ಕಂಪೆನಿಯೊಂದು ತನ್ನ ಜಾಹೀರಾತಿನಲ್ಲಿ ಕಾಳಿ ದೇವಿಯ ಚಿತ್ರ ಬಳಸಿತ್ತು.

ಪೋರ್ಟ್ ಲೆಂಡ್ ಮೂಲದ ಬರ್ನ್ ಸೈಡ್ ಬ್ರೀವಿಂಗ್ ಕಂಪೆನಿಯು 'ಕಾಳಿ-ಮಾ~ ಹೆಸರಿನ ಬಿಯರ್ ನ್ನು ಮಾರುಕಟ್ಟೆಗೆ ಬಿಡುಗಡೆಗೆ ಸಿದ್ಧವಾಗಿತ್ತು. ಹಿಂದೂ ಸಮುದಾಯದವರ ಮನವಿಯ ಮೇರೆಗೆ ಈ ಬಿಯರ್ ಮಾರುಕಟ್ಟೆಗೆ ಬಿಡುಗಡೆ ಮಾಡದೆ ಸಂಸ್ಥೆ ಕ್ಷಮೆಯಾಚಿಸಿತ್ತು.

ಈ ಹಿಂದೆ ಶೌಚಾಲಯದಲ್ಲಿ ಲಕ್ಷ್ಮಿಯ ಚಿತ್ರವನ್ನು ಪ್ರದರ್ಶಿಸಲಾಗಿತ್ತು.. ಬ್ರಾದಲ್ಲಿ ದೇವರ ಚಿತ್ರವನ್ನು ಚಿತ್ರಿಸಲಾಗಿತ್ತು. ಟಾಕ್ ಶೋ ಒಂದರಲ್ಲಿ ಗಣೇಶನನ್ನು ಲೈಂಗಿಕ ವಸ್ತು ಎಂಬಂತೆ ಚಿತ್ರಿಸಲಾಗಿತ್ತು

ಬೀರ್ ಪ್ರಾಬ್ಲಮ್

ಬೀರ್ ಪ್ರಾಬ್ಲಮ್

ಯುರೋಪ್, ಯುಎಸ್, ಲ್ಯಾಟಿನ್ ಅಮೆರಿಕ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಮುಂತಾದ ದೇಶಗಳಿಂದ ಭಾರತ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಆಮದು ಮಾಡಿಕೊಳ್ಳುತ್ತದೆ. ರುಪಾಯಿ ಮೌಲ್ಯ ಕ್ಷಣ ಕ್ಷಣಕ್ಕೂ ಕುಸಿಯುತ್ತಿರುವುದರಿಂದ ಮದ್ಯದ ಬ್ರಾಂಡ್ ಗಳ ಬೆಲೆ ಏರಿಕೆ ಕಂಡಿದ್ದು ಆಮದು ವೆಚ್ಚ, ಸುಂಕ ಎಂಆರ್ ಪಿ ದರ ಏರಿಕೆ ಮಾಡಲು ಬೇಡಿಕೆ ಬಂದಿದೆ.

ವಿದೇಶಿ ಮದ್ಯದ ಎಂಆರ್ ಪಿ ಬೆಲೆ ಶೇ 25-30ರಷ್ಟು ಏರಿಕೆ ಕಾಣಲಿದೆ. ರೀಟೇಲ್ ಮಾರುಕಟ್ಟೆಯಲ್ಲಿ ಶೇ 40ರಷ್ಟು ಆಮದು ಮದ್ಯಗಳು ಪಾಲು ಹೊಂದಿವೆ. ಸಂಸ್ಥೆಗಳು ವಿಭಿನ್ನ ಜಾಹೀರಾತುಗಳ ಮೂಲಕ ಪ್ರಚಾರ ಗಿಟ್ಟಿಸಿಕೊಂಡು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ವ್ಯಾಪಾರ ಮಾಡಲು ಮುಂದಾಗಿವೆ.

English summary
Hindus are upset over having images of their deities Ganesha and Lakshmi on beer bottles by an Australian brewery, calling it highly inappropriate. Even God of Cricket Sachin face also morphed into the controversial image and used in brookvaleunion website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X