ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೆ ರಜನಿ ಸೇರಿ, ಎಲ್ಲ ದಿಕ್ಕುಗಳಿಂದ ಜೈಕಾರ

By Mahesh
|
Google Oneindia Kannada News

ನವದೆಹಲಿ, ಮೇ.16: ವಾರಣಾಸಿ ಹಾಗೂ ವಡೋದರ ಕ್ಷೇತ್ರದಲ್ಲಿ ಜಯಗಳಿಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಮೂಲಕ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಶುಕ್ರವಾರ ಅಭಿನಂದನೆ ತಿಳಿಸಿದ್ದಾರೆ. ಸೂಪರ್ ಸ್ಟಾರ್ ರಜನಿ ಟ್ವೀಟ್ ಮಾಡಿ, ಕರೆ ಮಾಡಿ ಶುಭ ಹಾರೈಸಿದ್ದರೆ, ದೇಶ, ವಿದೇಶಗಳ ಮಾಧ್ಯಮಗಳು, ವಿಶ್ವಮಟ್ಟದ ನಾಯಕರು ಬಿಜೆಪಿ ಗೆಲುವಿಗೆ, ಮೋದಿ ನಾಯಕತ್ವಕ್ಕೆ ಶುಭ ಕೋರಿದ್ದಾರೆ.

1984ರ ನಂತರ ಭಾರತದಲ್ಲಿ ಏಕ ಪಕ್ಷ ಅಧಿಕಾರಕ್ಕೆ ಬಂದಿರುವುದು ಅನೇಕ ರಾಷ್ಟ್ರಗಳಲ್ಲಿ ಸಂತಸ ತಂದಿದೆ ಎಂದು ಯುಕೆ ಪ್ರಧಾನಿ ಡೇವಿಡ್ ಕೆಮರೂನ್ ಅವರು ನರೇಂದ್ರ ಮೋದಿ ಅವರಿಗೆ ಶುಭ ಹಾರೈಸಿದ್ದಾರೆ. ವಿದೇಶಿ ಪ್ರತಿನಿಧಿಗಳ ಪೈಕಿ ಶ್ರೀಲಂಕಾದ ರಾಯಭಾರಿ ಪ್ರಸಾದ್ ಕರಿಯವಾಸಮ್ ಅವರು ಶುಭ ಹಾರೈಸಿ, ಬಿಜೆಪಿ ವಿಜಯವನ್ನು ಶ್ರೀಲಂಕಾ ಸ್ವಾಗತಿಸುತ್ತದೆ, ಶೀಘ್ರದಲ್ಲೇ ಅಧ್ಯಕ್ಷ ರಾಜಪಕ್ಸಾ ಅವರು ಪ್ರಧಾನಿಯಾಗಲಿರುವ ಮೋದಿ ಅವರಿಗೆ ಶುಭ ಹಾರೈಸುತ್ತಾರೆ ಎಂದಿದ್ದಾರೆ.

ಮೋದಿಗೆ ದೇಶ ವಿದೇಶಗಳಿಂದ ಶುಭ ಹಾರೈಕೆ

ಮೋದಿಗೆ ದೇಶ ವಿದೇಶಗಳಿಂದ ಶುಭ ಹಾರೈಕೆ

ವಿದೇಶಿ ಪ್ರತಿನಿಧಿಗಳ ಪೈಕಿ ಶ್ರೀಲಂಕಾದ ರಾಯಭಾರಿ ಪ್ರಸಾದ್ ಕರಿಯವಾಸಮ್ ಅವರು ಶುಭ ಹಾರೈಸಿ, ಬಿಜೆಪಿ ವಿಜಯವನ್ನು ಶ್ರೀಲಂಕಾ ಸ್ವಾಗತಿಸುತ್ತದೆ, ಶೀಘ್ರದಲ್ಲೇ ಅಧ್ಯಕ್ಷ ರಾಜಪಕ್ಸಾ ಅವರು ಪ್ರಧಾನಿಯಾಗಲಿರುವ ಮೋದಿ ಅವರಿಗೆ ಶುಭ ಹಾರೈಸುತ್ತಾರೆ ಎಂದಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ರಾಜೀನಾಮೆ

ಪ್ರಧಾನಿ ಮನಮೋಹನ್ ಸಿಂಗ್ ರಾಜೀನಾಮೆ

ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಕಂಡ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್‌ ಸಿಂಗ್‌ ಶನಿವಾರ ಮಧ್ಯಾಹ್ನ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ರಾಜೀನಾಮೆ ಸಲ್ಲಿಸಿದ ಬಳಿಕ ಅವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈಗಾಗಲೇ ಮನಮೋಹನ್ ಸಿಂಗ್ ಅವರಿಗೆ ಹೊಸ ನಿವಾಸ ಸಿದ್ದವಾಗಿದೆ.

1984ರಿಂದ 2014ರ ಫಲಿತಾಂಶ

1984ರಿಂದ 2014ರ ಫಲಿತಾಂಶ ಕಾಂಗ್ರೆಸ್ ಹಾಗೂ ಬಿಜೆಪಿ ಸ್ಥಿತಿ ಗತಿ

ನವಾಜ್ ಷರೀಫ್ ರಿಂದ ಕೂಡಾ ಶುಭ ಹಾರೈಕೆ

ಪಾಕಿಸ್ತಾನ ಮುಖಂಡ ನವಾಜ್ ಷರೀಫ್ ರಿಂದ ಕೂಡಾ ಮೋದಿಗೆ ಶುಭ ಹಾರೈಕೆ

ಸೊಲೊಪ್ಪಿಕೊಂಡ ಕಾಂಗ್ರೆಸ್ :ಬಿಬಿಸಿ ನ್ಯೂಸ್

ಸೊಲೊಪ್ಪಿಕೊಂಡ ಕಾಂಗ್ರೆಸ್ :ಬಿಬಿಸಿ ನ್ಯೂಸ್

ಸೊಲೊಪ್ಪಿಕೊಂಡ ಕಾಂಗ್ರೆಸ್ ಎಂಬ ಹೆಡ್ ಲೈನ್ ಮೂಲಕ ಬಿಬಿಸಿ ನ್ಯೂಸ್ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಜಯ ಗಳಿಸಿದೆ ಎಂದು ವರದಿ ಮಾಡಲಾಗಿದೆ.
* ಡೈಲಿ ಸ್ಟಾರ್/ ರಾಯಿಟರ್ಸ್ : "Modi wins landslide victory in Indian election" ಹೆಡ್ ಲೈನ್ ನೀಡಿದ್ದು, ಕಳೆದ ದಶಕದಲ್ಲಿ ಭಾರತ ಆಳಿದ ಗಾಂಧಿ ಕುಟುಂಬ ಅತ್ಯಂತ ಕಳಪೆ ಸಾಧನೆ ಮಾಡಿದೆ ಎಂದು ಹೇಳಿದೆ.

ನ್ಯೂಯಾರ್ಕ್ ಟೈಮ್ಸ್, wire ವರದಿ

ನ್ಯೂಯಾರ್ಕ್ ಟೈಮ್ಸ್, wire ವರದಿ

'ಭಾರತದ ಮುಂದಿನ ನಾಯಕ ಮೋದಿ' ಎಂದು Wire, ಕಾಂಗ್ರೆಸ್ ಸೋಲು,ರಾಹುಲ್ ಗಾಂಧಿಗೆ ತೀವ್ರ ಮುಖಭಂಗ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 'ಪ್ರಿಯಾಂಕಾ ಕರೆತನ್ನಿ, ಪಕ್ಷ ಉಳಿಸಿ' ಎಂಬ ಮಂತ್ರ ಕಾಂಗ್ರೆಸ್ ಕಚೇರಿಯಲ್ಲಿ ಕೇಳಿ ಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

English summary
As the Bharatiya Janata Party and its allies surge towards a record win in the 16th Lok Sabha elections, the foreign media joins others in congratulating Narendra Modi, who led NDA's poll campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X