ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೀಫಾ ವಿಶ್ವಕಪ್ : ಗೋಲ್ಡನ್ ಬೂಟ್ ವಿಜೇತರು

By Mahesh
|
Google Oneindia Kannada News

ಬೆಂಗಳೂರು, ಜೂ.5: ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸುವ ಆಟಗಾರನಿಗೆ 'ಗೋಲ್ಡನ್ ಬೂಟ್' ಪುರಸ್ಕಾರ ನೀಡಲಾಗುತ್ತದೆ. 1930ರ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಯಿಂದಲೇ ಇದು ಆರಂಭವಾಗಿದೆ.

ವಿಶ್ವಯುದ್ಧದ ಕಾರಣ 1942 ಮತ್ತು 1946 ರಲ್ಲಿ ಈ ಪಂದ್ಯಾವಳಿ ನಡೆದಿರಲಿಲ್ಲ. ಕಳೆದ ಬಾರಿ 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವಿಶ್ವಕಪ್ ಪಂದ್ಯಾವಳಿಗಳು ನಡೆದಿತ್ತು. ಸ್ಪೇನ್ ಶಿಸ್ತಿನ ಆಟವಾಡಿ ಕಪ್ ಗೆದ್ದು ಎಲ್ಲರ ಮನಸೂರೆ ಮಾಡಿತ್ತು.

ವಿಶ್ವಕಪ್ ಟೂರ್ನಿಯ ಅತ್ಯುತ್ತಮ ಆಟಗಾರನಾಗಿ ಉರುಗ್ವೆ ತಂಡದ ಡಿಯಾಗೊ ಫೊರ್ಲಾನ್ ಆಯ್ಕೆಯಾಗಿದ್ದರು. ಫೊರ್ಲಾನ್ ಗೆ ಹಾಲೆಂಡ್ ನ ಸ್ನೈಡರ್ ಹಾಗೂ ಸ್ಪೇನ್ ನ ಡೇವಿಡ್ ವಿಲ್ಲಾ ಭಾರಿ ಪೈಪೋಟಿ ನೀಡಿದ್ದರು.[ವಿಶ್ವಕಪ್ ಚಿನ್ನದ ಬೂಟಿನ ಬೇಟೆ : ಯಾರು ಮುಂದೆ?]

ಫೊರ್ಲಾನ್ ಟೂರ್ನಿಯಲ್ಲಿ 5 ಗೋಲುಗಳನ್ನು ಬಾರಿಸಿದ್ದೆ ಅಲ್ಲದೆ ಟೂರ್ನಿಯಲ್ಲಿ ಉರುಗ್ವೆ ನಾಲ್ಕನೇ ಸ್ಥಾನ ಗಳಿಸಲು ಕಾರಣರಾದರು. ಸಹಜವಾಗಿ ಮಾಧ್ಯಮದವರು ಚಿನ್ನದ ಚೆಂಡು ಪಡೆಯುವ ಅರ್ಹತೆ ಫೊರ್ಲಾನ್ ಗೆ ಮಾತ್ರ ಇದೇ ಎಂದು ಅಭಿಮತ ವ್ಯಕ್ತಪಡಿಸಿದರು.

ಚಿನ್ನದ ಬೂಟು : ಫೈನಲ್ ಪಂದ್ಯಕ್ಕೂ ಮುನ್ನ ಜರ್ಮನಿಯ ಮುಲ್ಲರ್, ಉರುಗ್ವೆಯ ಫೊರ್ಲಾನ್, ಹಾಲೆಂಡ್ ನ ಸ್ನೈಡರ್, ಸ್ಪೇನ್ ನ ಡೇವಿಡ್ ವಿಲ್ಲಾ ಕೂಡಾ ಚಿನ್ನದ ಬೂಟು ಸ್ಪರ್ಧೆಯಲ್ಲಿದ್ದರು. ಆದರೆ, ಮುಲ್ಲರ್ ಉರುಗ್ವೆಯ ವಿರುದ್ಧದ ಪಂದ್ಯದಲ್ಲಿ ಮಹತ್ವದ ಗೋಲು ಗಳಿಸಿದ್ದು ಚಿನ್ನದ ಬೂಟು ಗೆಲ್ಲಲು ಕಾರಣವಾಯಿತು. 1930 ರಿಂದ 2010ರ ತನಕ ಚಿನ್ನದ ಬೂಟು ಧರಿಸಿದ ಆಟಗಾರರು ಹಾಗೂ ಗಳಿಸಿದ ಗೋಲುಗಳ ವಿವರ ಹೀಗಿದೆ:

ಸಂಖ್ಯೆ ಇಸವಿ ಆಟಗಾರ ದೇಶ ಗಳಿಸಿದ ಗೋಲು
1 1930 ಗುಲ್ಲಿರ್ಮೋ ಸ್ಟಾಬಿಲ್ ಅರ್ಜೆಂಟಿನಾ 8
2 1934 ಒಲ್ದರಿಚ್ ನೆಜೆಡ್ಲೆ ಚೆಕೊಸ್ಲೋವಾಕಿಯಾ 5
3 1938 ಲಿಯೋನಿಡಾಸ್ ಡ ಸಿಲ್ವಾ ಬ್ರೆಜಿಲ್ 7
4
1950 ಅಡೆಮಿರ್ ಮರ್ಕೂಸ್ ಡಿ ಮೆಂಜಿಸ್ ಬ್ರೆಜಿಲ್ 9
5 1954 ಸ್ಯಾ ನ್ಡೊರ್ ಕೊಸಿಸ್ ಹಂಗೇರಿ 11
6
1958 ಜಸ್ಟ್ ಫಾನ್ ಟೆನ್
ಫ್ರಾನ್ಸ್ 13
7 1962 ಫ್ಲೋರಿಯನ್ ಆಲ್ಬರ್ಟ್ (ಹಂಗೇರಿ), ವಾಲೆಂಟಿನ್ ಇವನಾವ್ ( ಸೋವಿಯತ್ ಒಕ್ಕೂಟ), ಗರಿಂಚಾ ಮತ್ತು ವಾವಾ ( ಬ್ರೆಜಿಲ್), ಡ್ರೆಜನ್ ಜೆರ್ಕೊವಿಕ್ (ಯುಗೋಸ್ಲಾವಿಯಾ), ಲಿಯೋನೆಲ್ ಸಾಂಚೆಸ್ (ಚಿಲಿ)
ತಲಾ 4
8
1966
ಯೂಸೆಬಿಯೋ ಸಿಲ್ವಾ ಫೆರಿರಾ
ಪೋರ್ಚುಗಲ್
9
9
1970 ಗೆರ್ಡ್ ಮುಲ್ಲರ್ ಜರ್ಮನಿ 10
10
1974 ಗ್ರೆಗೊರ್ಜ್ ಲ್ಯಾಟೋ ಪೋಲಂಡ್ 7
11 1978 ಮಾರಿಯೋ ಕೆಂಪ್ಸ್ ಅರ್ಜೆಂಟಿನಾ 6
12
1982 ಪಾಲೋ ರೋಸಿ ಇಟಲಿ 6
13 1986 ಗ್ಯಾರಿ ಲಿನೆಕೆರ್ ಇಂಗ್ಲೆಂಡ್ 6
14
1990 ಸಾಲ್ವಟಾರ್ ಸ್ಕಿಲಾಚಿ ಇಟಲಿ 6
15
1994 ಒಲೆಗ್ ಸಲೆಂಕೋ (ರಷ್ಯಾ), ಹ್ರಿಸ್ಟೋ ಸ್ಟಾಚಿಕೊವ್ (ಬಲ್ಗೇರಿಯಾ) ತಲಾ 6
16
1998 ಡೆವರ್ ಸುಕರ್ ಕ್ರೋಷಿಯಾ 6
17
2002 ರೋನಾಲ್ಡೋ ಡಿ ನಿಮಾ ಬ್ರೆಜಿಲ್ 8
18
2006 ಮಿರೊಸ್ಲಾವ್ ಕ್ಲೋಸ್ ಜರ್ಮನಿ 5
19
2010 ಥಾಮಸ್ ಮುಲ್ಲರ್ ಜರ್ಮನಿ 5
English summary
Oneindia.in takes a look at the footballers who've won the FIFA Golden Boot award for the most goals at a World Cup over the years from 1930-2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X