ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ ಫುಟ್ಬಾಲ್ ಫೈನಲ್ಸ್, ಕಪ್ ವಿನ್ನರ್ಸ್ ಪಟ್ಟಿ

By Mahesh
|
Google Oneindia Kannada News

ಬೆಂಗಳೂರು, ಜೂ.8: ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಗೆ 84 ವರ್ಷ ತುಂಬಿಬಂದಿದೆ. 1930 ರಲ್ಲಿ ಆರಂಭವಾದ ವಿಶ್ವಕಪ್ ಫುಟ್ ಬಾಲ್ ಟೂರ್ನಿ ಈ ಬಾರಿ ಜೂನ್ 12 ರಿಂದ ಜುಲೈ 13 ರವರೆಗೆ ಬ್ರೆಜಿಲ್ಲಿನ 12 ನಗರಗಳ 12 ಸ್ಟೇಡಿಯಂಗಳಲ್ಲಿ ನಡೆಯಲಿದೆ.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫುಟ್ ಬಾಲ್ ಹಬ್ಬ 1942 ಮತ್ತು 1946 ರಲ್ಲಿಮಾತ್ರ ನಡೆದಿರಲಿಲ್ಲ. ಇದುವರೆಗೆ ನಡೆದ 19 ವಿಶ್ವಕಪ್ ಟೂರ್ನಿಯಲ್ಲಿ ವಿಜೇತ ದೇಶದ ಪಟ್ಟಿ ನಿಮ್ಮ ಮುಂದಿದೆ. ಕಳೆದ ಬಾರಿಯ ಪ್ರಶಸ್ತಿ ವಿಜೇತ ತಂಡ ಸ್ಪೇನ್ ಈ ಬಾರಿಯೂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಉಳಿದಂತೆ ಅತಿಥೇಯ ದೇಶ ಬ್ರೆಜಿಲ್, ಜರ್ಮನಿ, ಅರ್ಜೆಂಟೀನಾ, ಪೋರ್ಚುಗಲ್ ಟಾಪ್ ಫೇವರೀಟ್ಸ್ ಎನಿಸಿರುವ ದೇಶಗಳಾಗಿವೆ. [ವಿಶ್ವಕಪ್ 2014 ಟೂರ್ ಗೈಡ್]

ಇದುವರೆವಿಗೂ ಬ್ರೆಜಿಲ್ 7 ಬಾರಿ ಫೈನಲ್ ಪ್ರವೇಶಿಸಿದ್ದು 5 ಬಾರಿ ಗೆದ್ದು 2 ಬಾರಿ ರನ್ನರ್ ಅಪ್ ಆಗಿದೆ. ಇಟಲಿ 6 ಬಾರಿ ಫೈನಲ್ ಪ್ರವೇಶಿಸಿ 4 ಬಾರಿ ಗೆದ್ದು 2 ಬಾರಿ ರನ್ನರ್ ಅಪ್ ಆಗಿ ಎರಡನೇ ಸ್ಥಾನದಲ್ಲಿದೆ. ಮಿಕ್ಕಂತೆ, ಜರ್ಮನಿ 7 ಬಾರಿ ಫೈನಲ್ ಹಂತಕ್ಕೇರಿದರೂ 3 ಬಾರಿ ಮಾತ್ರ ಜಪ್ ಎತ್ತಿ 4 ಬಾರಿ ರನ್ನರ್ ಅಪ್ ಆಗಿದೆ. ಇಂಗ್ಲೆಂಡ್ ತಂಡ ಒಮ್ಮೆ ಮಾತ್ರ(1966) ರಲ್ಲಿ ಫೈನಲ್ ಪ್ರವೇಶಿಸಿ ಕಪ್ ಎತ್ತಿದ್ದು ಮತ್ತೆ ಆ ಮ್ಯಾಜಿಕ್ ಪ್ರದರ್ಶನಕ್ಕಾಗಿ ಫುಟ್ಬಾಲ್ ಪ್ರೇಮಿಗಳು ಕಾಯುತ್ತಲೇ ಇದ್ದಾರೆ.

ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆದ್ದ ತಂಡ ವಿಶ್ವ ಚಾಂಪಿಯನ್ ಎನಿಸಲಿದೆ. 90 ನಿಮಿಷಗಳ ನಿಗದಿತ ಆಟದ ವೇಳೆ ಫಲಿತಾಂಶ ಹೊರಬೀಳದೆ ಡ್ರಾ ಆಗಿದ್ದರೆ, ಹೆಚ್ಚುವರಿ 30 ಸಮಯ ನೀಡಲಾಗುತ್ತದೆ. ಆದರೂ ಫಲಿತಾಂಶ ಸಿಗದಿದ್ದಾಗ ಪೆನಾಲ್ಟಿ ಶೂಟೌಟ್ ಮೂಲಕ ಪಂದ್ಯದ ಫಲಿತಾಂಶ ನಿರ್ಣಯವಾಗಲಿದೆ.[ಗೋಲ್ಡನ್ ಬೂಟ್ ವಿಜೇತರು]

List of FIFA World Cup finals and Winners 1930 -2010
ಸಂಖ್ಯೆ ಇಸವಿ ಚಾಂಪಿಯನ್ ತಂಡ ರನ್ನರ್ ಅಪ್ ಗೆಲುವಿನ ಅಂತರ
1 1930 ಉರುಗ್ವೆ ಅರ್ಜೆಂಟಿನಾ 4 -2
2 1934 ಇಟಲಿ ಚೆಕೊಸ್ಲೋವಾಕಿಯಾ 2 -1 ಹೆಚ್ಚುವರಿ ಅವಧಿ
3 1938 ಇಟಲಿ ಹಂಗೇರಿ 4 -2
4
1950 ಉರುಗ್ವೆ ಬ್ರೆಜಿಲ್ 2 -1
5 1954 ಜರ್ಮನಿ ಹಂಗೇರಿ 3 -2
6
1958 ಬ್ರೆಜಿಲ್
ಸ್ವೀಡನ್ 5 -2
7 1962 ಬ್ರೆಜಿಲ್
ಜೆಕೊಸ್ಲೋವಾಕಿಯಾ 3 -1
8
1966
ಇಂಗ್ಲೆಂಡ್
ಜರ್ಮನಿ
4 -2 ಹೆಚ್ಚುವರಿ ಅವಧಿ
9
1970 ಬ್ರೆಜಿಲ್ ಇಟಲಿ 4 -2
10
1974 ಜರ್ಮನಿ ಹಾಲೆಂಡ್ 2 -1
11 1978 ಅರ್ಜೆಂಟಿನಾ ಹಾಲೆಂಡ್ 3 -1 ಹೆಚ್ಚುವರಿ ಅವಧಿ
12
1982 ಇಟಲಿ ಜರ್ಮನಿ 3 -1
13 1986 ಅರ್ಜೆಂಟಿನಾ ಜರ್ಮನಿ 3 -2
14
1990 ಜರ್ಮನಿ ಅರ್ಜೆಂಟಿನಾ 1 -0
15
1994 ಬ್ರೆಜಿಲ್ ಇಟಲಿ 3 -2 ಪೆನಾಲ್ಟಿ ಶೂಟೌಟ್
16
1998 ಫ್ರಾನ್ಸ್ ಬ್ರೆಜಿಲ್ 3 -0
17
2002 ಬ್ರೆಜಿಲ್ ಜರ್ಮನಿ 2 -0
18
2006 ಇಟಲಿ ಫ್ರಾನ್ಸ್ 5 -3 ಪೆನಾಲ್ಟಿ ಶೂಟೌಟ್
19
2010 ಸ್ಪೇನ್ ನೆದರ್ಲೆಂಡ್ಸ್ 1-0 ಹೆಚ್ಚುವರಿ ಅವಧಿ
English summary
The FIFA World Cup is an international association football competition established in 1930. It is contested by the men's national teams of the members of Fédération Internationale de Football Association (FIFA). Here are the World Cup Finals and Winners details from 1930-2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X