ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮಾವಿನ ಹಣ್ಣಿಗೆ ಯುರೋಪಿನಲ್ಲಿ ನಿಷೇಧ

By Mahesh
|
Google Oneindia Kannada News

ಲಂಡನ್, ಏ.28: ಭಾರತದಿಂದ ಆಮದಾಗುತ್ತಿರುವ ಅಲ್ಫಾನ್ಸೋ ತಳಿಯ ಮಾವಿನ ಹಣ್ಣು ಸೇರಿದಂತೆ ಕೆಲವು ತರಕಾರಿಗಳಿಗೆ ತಾತ್ಕಾಲಿಕ ನಿಷೇಧ ಹೇರಲಾಗಲಿದೆ ಎಂದು ಯುರೋಪಿಯನ್ ಯೂನಿಯನ್ ಸೋಮವಾರ ಪ್ರಕಟಿಸಿದೆ. ಮೇ.1 ರಿಂದ ಯುರೋಪಿನಲ್ಲಿ ಹಣ್ಣುಗಳ ರಾಜ ಮಾವು ಬಳಕೆ ಸಾಧ್ಯವಿಲ್ಲ.

ಯುರೋಪಿಯನ್ ಯೂನಿಯನ್ ನ 28 ಜನ ಸದಸ್ಯರ ತಂಡ ಈ ರೀತಿ ನಿರ್ಣಯ ಕೈಗೊಂಡಿದ್ದು ಮೇ 1ರಿಂದ ಮಾವಿನ ಹಣ್ಣು ಸೇರಿದಂತೆ ನಾಲ್ಕು ತರಕಾರಿಗಳ ಮೇಲೆ ಆಮದು ನಿರ್ಬಂಧ ಹೇರಲಾಗಿದೆ. ಭಾರತೀಯ ಸಮುದಾಯ, ಉದ್ಯಮಿಗಳ ಪ್ರತಿಭಟನೆ ಹೊರತಾಗಿಯೂ ಈ ನಿರ್ಣಯ ಕೈಗೊಳ್ಳಲಾಗಿದೆ. ಸುಮಾರು 207ಕ್ಕೂ ಅಧಿಕ ತಳಿ ಹಣ್ಣು, ತರಕಾರಿ ಭಾರತದಿಂದ ಯುರೋಪಿನ ವಿವಿಧ ದೇಶಗಳಿಗೆ ರಫ್ತಾಗುತ್ತಿದೆ. ಆದರೆ, ಇದರಲ್ಲಿ ಹಲವು ರಾಸಾಯನಿಕಗಳಿಂದ ಮುಕ್ತವಾಗಿಲ್ಲದಿರುವುದು ಯುರೋಪಿನಲ್ಲಿ ಚರ್ಚೆಗೆ ಕಾರಣವಾಗಿದೆ.

EU bans Indian Alphonso mangoes, 4 vegetables from May 1

ಹೀಗಾಗಿ ಆಲ್ಫಾನ್ಸೋ ಮಾವು, ಬದನೆಕಾಯಿ, ಹಾಗಲಕಾಯಿ, ಸೋರೆಕಾಯಿ, ಕೆಸುವಿನ ಎಲೆ ಮುಂತಾದವುಗಳನ್ನು ಆಮದು ಮಾಡಿಕೊಳ್ಳುವಂತಿಲ್ಲ ಎಂದು ಯುತೋಪ್ ರಾಷ್ಟ್ರಗಳಿಗೆ ಸಮಿತಿ ನಿರ್ದೇಶನ ನೀಡಿದೆ. ಯುಕೆ ಸುಮಾರು 16 ಮಿಲಿಯನ್ ಮಾವುಗಳನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ್ದು ವಾರ್ಷಿಕ 6 ಮಿಲಿಯನ್ GBP ಗಳಿಕೆ ಹೊಂದಿದೆ. ಯುಕೆ ಪರಿಸರ ಸಚಿವ ಲಾರ್ಡ್ ಡಿ ಮಾಲೆ ಅವರು ನಿಷೇಧ ಹಿಂಪಡೆಯುವ ಬಗ್ಗೆ ಮಾತನಾಡಿ ಯೂನಿಯನ್ ನ ಕೋಪಕ್ಕೆ ತುತ್ತಾಗಿದ್ದಾರೆ.

Reverse Mango Import Ban ಎಂಬ ಹೆಸರಿನಲ್ಲಿ ಆನ್ ಲೈನ್ ಪಿಟೀಷನ್ ಹಾಕಲಾಗಿದ್ದು, ಯುರೋಪಿಯನ್ ಯೂನಿಯನ್ ತನ್ನ ನಿರ್ಣಯ ಬದಲಿಸುವಂತೆ ಒತ್ತಡ ಹೇರಲಾಗುತ್ತಿದೆ. ಆದರೆ, ಪರಿಸರಕ್ಕೆ, ಆರೋಗ್ಯಕ್ಕೆ ಹಾನಿಕರವಾಗಿರುವ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುವುದಿಲ್ಲ. ರಾಸಾಯನಿಕ ಮುಕ್ತ ಪ್ರಮಾಣ ಪತ್ರ ಪಡೆದರೆ ಮಾತ್ರ ನಿಷೇಧ ಹಿಂಪಡೆಯುವ ಬಗ್ಗೆ ಯೋಚಿಸಬಹುದು ಎಂದು ಯುರೋಪಿಯನ್ ಯೂನಿಯನ್ ಹೇಳಿದೆ. ಒಟ್ಟಾರೆ ಯುರೋಪಿನಲ್ಲಿ ಮಾವು ಲಭ್ಯತೆ ಸದ್ಯಕ್ಕಂತೂ ಸಾಧ್ಯವಿಲ್ಲ.(ಪಿಟಿಐ)

English summary
The 28-member European Union has temporarily banned the import of Alphonso mangoes, the king of fruits, and four vegetables from India from May 1, sparking protests from the Indian community, lawmakers and traders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X