ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಹಿಂಸೆಮುಕ್ತ ರಾಷ್ಟ್ರಗಳಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

|
Google Oneindia Kannada News

ಸಿಡ್ನಿ, ಆ 18: ಗಾಜಾಪಟ್ಟಿಯಲ್ಲಿನ ಬಿಕ್ಕಟ್ಟು, ಇರಾಕ್ ನಲ್ಲಿ ಮುಸ್ಲಿಂ ಬಂಡುಕೋರರ ಪೈಶಾಚಿಕ ಕೃತ್ಯಗಳು, ಉಕ್ರೇನ್ ನಲ್ಲಿನ ಪರಿಸ್ಥಿತಿಯಿಂದಾಗಿ ವಿಶ್ವದಲ್ಲಿ ಒಟ್ಟಾರೆ ಅಶಾಂತಿಯ ವಾತಾವರಣವಿದ್ದರೂ, ಪ್ರಪಂಚದಲ್ಲಿ ಹನ್ನೊಂದು ಹಿಂಸೆಮುಕ್ತ ರಾಷ್ಟ್ರಗಳಿವೆ ಎನ್ನುವ ವರದಿಯೊಂದು ಹೊರಬಿದ್ದಿದೆ.

ಆಸ್ಟ್ರೇಲಿಯಾ ಮೂಲದ ಐಇಪಿ (Institute for Economics and Peace's) ಸಂಸ್ಥೆ 162 ರಾಷ್ಟ್ರಗಳಲ್ಲಿ ಅಧ್ಯಯನ ನಡೆಸಿ ಈ ವರದಿಯನ್ನು ಸಿದ್ದಪಡಿಸಿದೆ.

ಯುರೋಪಿನ ಇಂಡಿಪೆಂಡೆಟ್ ಅಂತರ್ಜಾಲದಲ್ಲಿ (independent.co.uk) ಪ್ರಕಟವಾದ ವರದಿಯ ಪ್ರಕಾರ, ವಿಶ್ವದ ಹನ್ನೊಂದು ರಾಷ್ಟ್ರಗಳು ಮಾತ್ರ ಹಿಂಸೆಯಿಂದ ಮುಕ್ತವಾಗಿದೆ. ಶೇ.90ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅಶಾಂತಿ ನೆಲೆಸಿದೆ ಎಂದು ವರದಿಯಾಗಿದೆ.

ವಿಷಾದದ ಸಂಗತಿ ಏನಂದರೆ 2007ರ ನಂತರ ವಿಶ್ವದಲ್ಲಿ ಅಶಾಂತಿಯ ವಾತಾವರಣ ಹೆಚ್ಚಾಗಿದೆ. ಪ್ರಮುಖವಾಗಿ ಯುರೋಪ್ ರಾಷ್ಟ್ರಗಳಲ್ಲಿ ಆಂತರಿಕ ಸಮಸ್ಯೆ ಹೆಚ್ಚಾಗಿ ಇಲ್ಲದಿದ್ದರೂ, ವಿಶ್ವದ ಇತರೆಡೆ ಶಾಂತಿ ನೆಲೆಸಲು ಈ ದೇಶಗಳು ಕೈಜೋಡಿಸುತ್ತಿರುವುದರಿಂದ ಅಲ್ಲೂ ಅಶಾಂತಿ ಹೆಚ್ಚಾಗಿರುವುದು.

162 ರಾಷ್ಟ್ರಗಳಲ್ಲಿ ಅಧ್ಯಯನ ನಡೆಸಿ ಪ್ರಕಟವಾದ ಈ ವರದಿಯಲ್ಲಿ ಭಾರತ ನೂರರೊಳಗೆ ಇಲ್ಲದೇ ಇರುವುದು ಮತ್ತೊಂದು ನೋವಿನ ಸಂಗತಿ.

ವರದಿಯ ಪ್ರಕಾರ ಹಿಂಸೆಮುಕ್ತ ಮೊದಲ ಐದು ರಾಷ್ಟ್ರಗಳು

ವರದಿಯ ಪ್ರಕಾರ ಹಿಂಸೆಮುಕ್ತ ಮೊದಲ ಐದು ರಾಷ್ಟ್ರಗಳು

ಐವಿಪಿ ಸಂಸ್ಥೆಯ ವರದಿ ಪ್ರಕಾರ ಸ್ವಿಜರಲ್ಯಾಂಡ್, ಜಪಾನ್, ಕತಾರ್, ಮಾರಿಷಸ್ ಮತ್ತು ಉರುಗ್ವೆ ಮೊದಲ ಐದು ಸ್ಥಾನದಲ್ಲಿದೆ.

ನಂತರದ ಆರು ರಾಷ್ಟ್ರಗಳು

ನಂತರದ ಆರು ರಾಷ್ಟ್ರಗಳು

ವರದಿಯನ್ವಯ ಚಿಲಿ, ಬೋಸ್ತವಾನ, ಕೋಸ್ಟರಿಕ, ವಿಯಟ್ನಾಂ, ಪನಾಮ ಮತ್ತು ಬ್ರೆಜಿಲ್ ರಾಷ್ಟ್ರಗಳು ನಂತರದ ಸ್ಥಾನದಲ್ಲಿದೆ.

ಸ್ವಿಜರಲ್ಯಾಂಡ್ ಸ್ವರ್ಗ

ಸ್ವಿಜರಲ್ಯಾಂಡ್ ಸ್ವರ್ಗ

ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳಿಲ್ಲದೇ ಸ್ವಿಜರಲ್ಯಾಂಡ್ ಹಿಂಸೆಮುಕ್ತ ರಾಷ್ಟ್ರಗಳ ಪೈಕಿ ಮಂಚೂಣಿಯಲ್ಲಿದೆ. ಅಲ್ಲದೇ, ಈ ದೇಶದ ಯುದ್ದ ಸಾಮಗ್ರಿ ರಫ್ತುಗಳು ಕೂಡಾ ಗರಿಷ್ಠ ಮಟ್ಟದಲ್ಲಿದೆ.

ನಮ್ಮ ದೇಶಕ್ಕೆ ವರದಿಯಲ್ಲಿ ಎಷ್ಟನೇ ಸ್ಥಾನ?

ನಮ್ಮ ದೇಶಕ್ಕೆ ವರದಿಯಲ್ಲಿ ಎಷ್ಟನೇ ಸ್ಥಾನ?

162 ರಾಷ್ಟ್ರಗಳಲ್ಲಿ ಅಧ್ಯಯನ ನಡೆಸಿ ಪ್ರಕಟವಾದ ಈ ವರದಿಯಲ್ಲಿ ಭಾರತ 143ನೇ ಸ್ಥಾನದಲ್ಲಿದೆ. 2015ರ ವೇಳೆಗೆ ಬ್ರೆಜಿಲ್, ಸ್ವಿಜರಲ್ಯಾಂಡ್ ದೇಶವನ್ನು ಹಿಂದಿಕ್ಕೆ ಮೊದಲ ಸ್ಥಾನಕ್ಕೆ ಬರಬಹುದು.

ಅಶಾಂತಿಯ ರಾಷ್ಟ್ರಗಳು

ಅಶಾಂತಿಯ ರಾಷ್ಟ್ರಗಳು

ಸಿರಿಯಾದಲ್ಲಿ ಅಶಾಂತಿ ತುಂಬಿ ತುಳುಕುತ್ತಿದ್ದು, ವರದಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ನಂತರದ ಸ್ಥಾನಗಳು ಅಪಘಾನಿಸ್ಥಾನ, ಇರಾಕ್, ಸುಡಾನ್ ನಂತರದ ಸ್ಥಾನದಲ್ಲಿದೆ.

English summary
Out of 162 countries, 11 countries in the world actually free from conflict, Institute for Economics and Peace latest study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X