ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಯುಎಸ್ ಪತ್ರಕರ್ತನ ರುಂಡ ಕತ್ತರಿಸಿದ ಉಗ್ರರು

By Mahesh
|
Google Oneindia Kannada News

ವಾಷಿಂಗ್ಟನ್, ಸೆ.3: ಅಮೆರಿಕ ಮೂಲದ ಪತ್ರಕರ್ತನ ರುಂಡ ಚೆಂಡಾಡಿದ್ದ ಇರಾಕಿ ಉಗ್ರರು ಮತ್ತೊಮ್ಮೆ ತಮ್ಮ ಘೋರ ಕೃತ್ಯವನ್ನು ಪುನರಾವರ್ತನೆ ಮಾಡಿದ್ದಾರೆ. ISIS ಉಗ್ರರು ಯುಎಸ್ ಮೂಲದ ಮತ್ತೊಬ್ಬ ಪತ್ರಕರ್ತರ ರುಂಡ ಚೆಂಡಾಡಿರುವುದನ್ನು ಕಂಡು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಸಿಟ್ಟಿಗೆದ್ದಿದ್ದಾರೆ. ಕೂಡಲೇ 350ಕ್ಕೂ ಹೆಚ್ಚುವರಿ ಪಡೆಗಳನ್ನು ಇರಾಕಿಗೆ ತೆರಳುವಂತೆ ಆದೇಶಿಸಿದ್ದಾರೆ.

'ಅಮೆರಿಕ ನಮ್ಮ ನೆಲೆಗಳ ಮೇಲೆ ದಾಳಿ ನಡೆಸಿದರೆ ಅಮೆರಿಕ ಪ್ರಜೆಗಳನ್ನು ಕಂಡಲ್ಲಿ ಕೊಲ್ಲುತ್ತೇವೆ' ಎಂದು ಬೆದರಿಕೆ ಒಡ್ದಿದ್ದ ಇರಾಕಿನ ಉಗ್ರರು, ತಮ್ಮ ಹೀನಾಯ ಕೃತ್ಯವನ್ನು ಮುಂದುವರೆಸಿದ್ದು, ಫ್ಲೋರಿಡಾ ಮೂಲದ ಪತ್ರಕರ್ತ ಸೊಟ್ಲೊಫ್ (31) ಬಲಿ ಪಡೆದಿದ್ದಾರೆ. ಕಳೆದ ಒಂದು ವರ್ಷದಿಂದ ಉತ್ತರ ಸಿರಿಯಾದಿಂದ ನಾಪತ್ತೆಯಾಗಿದ್ದ ಸೊಟ್ಲೊಫ್ ಅವರು ಸಾಯುವ ಮುನ್ನ 'ಇರಾಕ್ ಮೇಲೆ ದಾಳಿ ಮಾಡುವ ಒಬಾಮಾ ಅವರ ನಿರ್ಧಾರಕ್ಕೆ ನಾನು ಬಲಿ' ಎಂದಿದ್ದಾರೆ.

ಇರಾಕ್ ಹಾಗೂ ಸಿರಿಯಾದ ಬಂಡುಕೋರರ ಗುಂಪು(ISIS) ಯುಎಸ್ ಜನರ್ಲಿಸ್ಟ್ ಒಬ್ಬರ ತಲೆ ಕತ್ತರಿಸಿ, ಮತ್ತೊಬ್ಬನಿಗೆ ಜೀವ ಬೆದರಿಕೆ ಒಡ್ಡಿದ ವಿಡಿಯೋವನ್ನು ಸಿಎನ್ ಎನ್ ಪ್ರಸಾರ ಮಾಡಿದೆ. ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಅಮೆರಿಕ ಇಸ್ ಹಿಸ್ ರಿಯಲ್ ಕಿಲ್ಲರ್ ಎಂಬ ಸಂದೇಶ ಹೇಳುತ್ತಾ ಪತ್ರಕರ್ತನ ಹತ್ಯೆ ಮಾಡುತ್ತಾನೆ. [ರಕ್ತದ ನದಿಯಲ್ಲಿ ಮುಳುಗಿಸಿಬಿಡ್ತೀವಿ, ಹುಷಾರ್!]

Beheading of second journalist shocks US; White House in crisis mode

ಕಳೆದ ಎರಡು ವಾರಗಳ ಹಿಂದೆ ಪತ್ರಕರ್ತ ಜೇಮ್ಸ್ ಫೋಲೆ(40) ಅವರನ್ನು ಬಲಿ ಪಡೆದ ಮುಸುಕುಧಾರಿ ಜಿಹಾದಿಗಳೇ ಸೊಟ್ಲೊಫ್ ಅವರ ತಲೆ ಕತ್ತರಿಸಿದರು ಎಂದು ತಿಳಿದುಬಂದಿದೆ. ಜೇಮ್ಸ್ ಸಾವಿನ ವಿಡಿಯೋದ ಕೊನೆಗೆ ಸೊಟ್ಲೊಫ್ ತೋರಿಸಿ ಇದೇ ರೀತಿ ಉಳಿದವರಿಗೂ ಶಿಕ್ಷೆ ಕಾದಿದೆ ಎಂಬ ಎಚ್ಚರಿಕೆ ಸಂದೇಶ ಪ್ರಸಾರ ಮಾಡಲಾಗಿತ್ತು. ಅದರೆ, ಈ ಬಗ್ಗೆ ಅಮೆರಿಕ ಸರ್ಕಾರ ನಿರ್ಲಕ್ಷ್ಯ ತೋರಿದ್ದು ಪತ್ರಕರ್ತನ ಸಾವಿಗೆ ಕಾರಣವಾಯಿತು ಎಂಬ ಮಾತುಗಳು ಕೇಳಿ ಬಂದಿದೆ.

ಒಬಾಮಾ ಅವರು ಯುರೋಪ್ ಪ್ರವಾಸಕ್ಕೆ ತೆರಳಿದ್ದು ನ್ಯಾಟೋ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಉಗ್ರರಿಂದ ಪತ್ರಕರ್ತರ ಹತ್ಯೆ ತಡೆಗೆ ಯಾವುದೇ ಬಲವಾದ ಆದೇಶ ಸಿಕ್ಕಿಲ್ಲ ಎಂದು ಇರಾಕಿನಲ್ಲಿ ಬೀಡುಬಿಟ್ಟಿರುವ ಅಮೆರಿಕ ಸೇನಾಪಡೆ ಹೇಳಿದೆ. [ಇರಾಕಿನಲ್ಲಿ ಬಾಂಬ್ ಬಿದ್ರೆ, ಭಾರತದಲ್ಲೇಕೆ ನಡುಕ]

ಒಬಾಮಾ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ತುಂಬಾ ಕಷ್ಟ ಎಂದು ಇಂಡೋ ಅಮೆರಿಕನ್ ಗವರ್ನರ್ ಬಾಬ್ಬಿ ಜಿಂದಾಲ್ ಬೇಸರ ವ್ಯಕ್ತಪಡಿಸಿದ್ದಾರೆ. 2016ರ ಅಧ್ಯಕ್ಷೀಯ ಅಭ್ಯರ್ಥಿ ಎನಿಸಿರುವ ಜಿಂದಾಲ್ ಅವರು ಒಬಾಮಾ ಅವರ ನಿಧಾನಗತಿ ನಿಲುವನ್ನು ಖಂಡಿಸಿದ್ದಾರೆ. ಸಿರಿಯಾದಲ್ಲಿ ಕಳೆದ ಎರಡು ವರ್ಷಗಳಲ್ಲಿ ಯುದ್ಧದ ಸಂದರ್ಭದಲ್ಲಿ ಸುಮಾರು 80ಕ್ಕೂ ಅಧಿಕ ಜನರನ್ನು ಉಗ್ರರು ಅಪಹರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಐಎಎನ್ಎಸ್)

English summary
As the beheading of a second American journalist by the Islamic State (IS) terror group sent shock waves through the nation, US President Barack Obama authorised 350 additional troops be deployed to Iraq.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X