ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ ಗಾಗಿ ಕೆಲ್ಸ ತೊರೆದ ಟೆಕ್ಕಿ ಮಾಡಿದ್ದೇನು?

By Mahesh
|
Google Oneindia Kannada News

ರಿಯೋ ಡಿ ಜುನೈರೊ, ಜೂ.11: ಬ್ರೆಜಿಲ್ಲಿನಲ್ಲಿ ನಡೆಯಲಿರುವ ಫೀಫಾ ವಿಶ್ವಕಪ್ ಪಂದ್ಯಾವಳಿಯನ್ನು ಕಣ್ಣಾರೆ ನೋಡುವ ಆಸೆಯಿಂದ ಐಟಿ ಸಂಸ್ಥೆಯೊಂದರ ಉದ್ಯೋಗವನ್ನು ತೊರೆದು ರಿಯೋ ತಲುಪಿರುವ ಟೆಕ್ಕಿ ಈಗ ಎಲ್ಲರ ಕುತೂಹಲದ ಕೇಂದ್ರ ಬಿಂದುವಾಗಿದ್ದಾರೆ.

ಇಂಗ್ಲೆಂಡ್ ತಂಡದ ಫುಟ್ಬಾಲ್ ಆಟವನ್ನು ಪ್ರತ್ಯಕ್ಷವಾಗಿ ವೀಕ್ಷಿಸಲು ಫುಟ್ಬಾಲ್ ಅಭಿಯಾನಿಯೊಬ್ಬ ಕೆಲಸ ತೊರೆದು ಸ್ಕೂಟರ್ ಮೂಲಕ ನಾಲ್ಕು ತಿಂಗಳ ಪ್ರಯಾಣ ಕೈಗೊಂಡು ಬ್ರೆಜಿಲ್ ತಲುಪಿದ್ದಾರೆ.

44ರ ಹರೆಯದ ಇಂಗ್ಲೆಂಡಿನ ಐಟಿ ಸಂಸ್ಥೆಯೊಂದರ ಉದ್ಯೋಗಿ ಕ್ರಿಸ್ ಹಾಲೆಟ್ ಬ್ರೆಜಿಲ್ ತೆರಳುವುದಕ್ಕಾಗಿ ತನ್ನ ಸಂಸ್ಥೆಯಲ್ಲಿ ರಜೆ ಕೇಳಿದ್ದಾರೆ. ಅದರೆ, ರಜೆ ಸಿಕ್ಕಿಲ್ಲ. ತಕ್ಷಣವೇ ನೌಕರಿಗೆ ರಾಜೀನಾಮೆ ನೀಡಿ ತನ್ನ ಸ್ಕೂಟರ್ ಹತ್ತಿ ಬ್ರೆಜಿಲ್ ಕಡೆಗೆ ಹೊರಟು ಬಿಟ್ಟಿದ್ದಾರೆ.

Anything to watch World Cup: London to Brazil in a scooter!

ಸುಮಾರು ನಾಲ್ಕು ತಿಂಗಳ ತಿಂಗಳ ಹಿಂದೆ ಸ್ಕೂಟರ್ ಹತ್ತಿ ಪ್ರಯಾಣ ಕೈಗೊಂಡು, ಲಂಡನ್‌ನಿಂದ 24 ಸಾವಿರ ಕಿಲೋ ಮೀಟರ್(15,000 ಮೈಲು) ದೂರದ ಬ್ರೆಜಿಲ್ಲಿಗೆ ಸ್ಕೂಟರ್‌ನಲ್ಲಿ ತಲುಪಿ ಹಾಲೆಟ್ ದಾಖಲೆ ನಿರ್ಮಿಸಿದ್ದಾರೆ. 'ಈ ಪ್ರವಾಸ ಪ್ರಯಾಸದಾಯಕವಾದರೂ ಪ್ರೋತ್ಸಾಹದಾಯಕವಾಗಿತ್ತು' ಎಂದು ತಮ್ಮ ಸಾಹಸ ಯಾತ್ರೆ ನಂತರ ಹಾಲೆಟ್ ಹೇಳಿದ್ದಾರೆ.

ವೆಸ್ಪಾ ಸ್ಕೂಟರ್‌ನಲ್ಲಿ ಇಂಗ್ಲೆಂಡ್ ತಲುಪುವ ವೇಳೆಗೆ ಹಾಲೆಟ್‌ ವಿಶ್ವಕಪ್‌ನಲ್ಲಿ ಭಾಗವಹಿಸುವ 32 ದೇಶಗಳ ಪೈಕಿ 18 ದೇಶಗಳನ್ನು ದಾಟಿ ಬಂದಿದ್ದಾರೆ. ಜೂನ್ 24ರಂದು ನಡೆಯಲಿರುವ ಇಂಗ್ಲೆಂಡ್ ಮತ್ತು ಕೋಸ್ಟರಿಕಾ ತಂಡಗಳ ನಡುವಿನ ಪಂದ್ಯದ ಟಿಕೆಟ್ ಲಭಿಸಿದೆ.

ಐಟಿ ಉದ್ಯೋಗ ಕಳೆದುಕೊಂಡ ಹಾಲೆಟ್ ಅವರು ಯುನಿಸೆಫ್ ಚಾರಿಟಿಗಾಗಿ ಈ ರೀತಿ ಸಾಹಸ ಯಾತ್ರೆ ಕೈಗೊಂಡೆ ಎನ್ನುತ್ತಾರೆ. ಇಂಗ್ಲೀಷ್ ಪ್ರೀಮಿಯರ್ ಲೀಗ್ ನಲ್ಲಿ ಫುಲ್ ಹ್ಯಾಮ್ ಫ್ಯಾನ್ ಆಗಿರುವ ಹಾಲೆಟ್ ಅವರು ಇಂಗ್ಲೆಂಡ್ ತಂಡ ಸಶಕ್ತವಾಗಿದ್ದು, ಈ ಬಾರಿ ವಿಶ್ವಕಪ್ ನಾಕೌಟ್ ಹಂತ ಸುಲಭವಾಗಿ ತಲುಪಲಿದೆ ಎಂದಿದ್ದಾರೆ. (ಐಎಎನ್ಎಸ್)

English summary
An English football fan, riding a Vespa scooter, covered 24,000 kilometres (15,000 miles) to see his country take part in the FIFA World Cup in Brazil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X