ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂವರು ಅಲ್ ಝಜೀರಾ ಪತ್ರಕರ್ತರು 7 ವರ್ಷ ಜೈಲಿಗೆ

By Srinath
|
Google Oneindia Kannada News

ಕೈರೊ, ಜೂನ್ 23: ಭಯೋತ್ಪಾದನೆಗೆ ನೆರವು ನೀಡಿದ ಆರೋಪದ ಮೇಲೆ ಅಲ್ ಝಜೀರಾ ಮಾಧ್ಯಮ ಸಂಸ್ಥೆಗೆ ಸೇರಿದ ಮೂವರು ಪತ್ರಕರ್ತರಿಗೆ ಈಜಿಪ್ಟಿನಲ್ಲಿ ಏಳು ವರ್ಷಗಳ ಜೈಲುವಾಸ ವಿಧಿಸಲಾಗಿದೆ.

ಕಳೆದ ಡಿಸೆಂಬರಿನಲ್ಲಿ ಕೈರೋದಲ್ಲಿ ಹೋಟೆಲೊಂದರ ಮೇಲೆ ದಾಳಿ ನಡೆಸಿದಾಗ ಈ ಪತ್ರಕರ್ತರು ಸ್ಥಳೀಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈಜಿಪ್ಟಿನ ಉಚ್ಛಾಟಿತ ಅಧ್ಯಕ್ಷ ಮೊಹಮದ್ ಮೊರ್ಸಿಗೆ ಬೆಂಬಲ ನೀಡುತ್ತಿದ್ದ ಇಸ್ಲಾಂ ಬೆಂಬಲಿಗರ ವಿರುದ್ಧ ಸಾರಿದ್ದಾಗ ಇವರೆಲ್ಲಾ ಸಿಕ್ಕಿಬಿದ್ದಿದ್ದರು. ಮೊರ್ಸಿಗೆ ಬೆಂಬಲ ಸೂಚಿಸಿದ್ದ ಈ ಮುಸ್ಲಿಂ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಈಜಿಪ್ಟ್ ಆಡಳಿತ ನಿಷೇಧಿಸಿತ್ತು.

3-al-jazeera-journalists-jailed-for-seven-years-in-cairo

ಜುಲೈ 3ರಂದು ಸೇನಾದಂಗೆಯಲ್ಲಿ ಅಧ್ಯಕ್ಷ ಮೊಹಮದ್ ಮೊರ್ಸಿಯನ್ನು ಉಚ್ಛಾಟಿದ ನಂತರ ನಡೆದ ಗಲಭೆ/ಪ್ರತಿಭಟನೆಗಳನ್ನು ಈ ಪತ್ರಕರ್ತರು ವ್ಯಾಪಕವಾಗಿ ಸುದ್ದಿ ಮಾಡಿದ್ದೇ ಅವರಿಗೆ ಮುಳುವಾಗಿದೆ. ಆ ಪ್ರತಿಭಟನೆಗಳಲ್ಲಿ ತೊಡಗಿದ್ದ ನೂರಾರು ಮಂದಿಯನ್ನು ಸೇನೆಯು ಹತ್ಯೆ ಮಾಡಿತ್ತು. ಮತ್ತು ಸಾವಿರಾರು ಮಂದಿಯನ್ನು ಜೈಲಿಗಟ್ಟಿತ್ತು. (ಚಿತ್ರ ಕೃಪೆ: AP/PTI )

ತಪ್ಪು ಸುದ್ದಿ ಹರಡಿದ ಮತ್ತು ನಿಷೇಧಿತ ಮುಸ್ಲಿಂ ಸಂಘಟನೆಯನ್ನು ಬೆಂಬಲಿಸಿದ ಆರೋಪದ ಮೇಲೆ ಆಸ್ಟ್ರೇಲಿಯಾದ ಪೀಟರ್ ಗ್ರೆಸ್ಟೆ, ಕೆನಡಾ-ಈಜಿಪ್ಟ್ ರಾಷ್ಟ್ರೀಯ ಮೊಹಮಸ್ ಫಹಾಮಿ ಮತ್ತು ಈಜಿಪ್ಟಿನ ಬಹೆರ್ ಮೊಹಮದ್ ಅವರುಗಳನ್ನು ಜೈಲಿಗಟ್ಟಲಾಗಿದೆ. ಶಸ್ತ್ರಾಸ್ತ್ರ ಹೊಂದಿದ್ದ ಹೆಚ್ಚುವರಿ ಆರೋಪದ ಮೇಲೆ ಬಹೆರ್ ಮೊಹಮದ್ ಗೆ ಹೆಚ್ಚುವರಿಯಾಗಿ ಮೂರು ವರ್ಷ ಜೈಲು ವಿಧಿಸಲಾಗಿದೆ.

ಪ್ರಕರಣದಲ್ಲಿ ಇನ್ನೂ 11 ಮಂದಿಗೆ ಶಿಕ್ಷೆ ವಿಧಿಸಲಾಗಿದೆ. ಆಪಾದಿತರೆಲ್ಲಾ ತಮ್ಮ ವಿರುದ್ಧದ ಆರೋಪಗಳನ್ನು ಕೈರೋದಲ್ಲಿ ನಿರಾಕರಿಸಿದ್ದಾರೆ. ಪ್ರಕರಣವು ವಾಕ್ ಸ್ವಾತಂತ್ರ್ಯ ಕಾರ್ಯಕರ್ತರನ್ನು ಕೆರಳಿಸಿದೆ. ಸ್ಕೈ ನ್ಯೂಸ್ ಮತ್ತು ಬಿಬಿಸಿ ಮಾಧ್ಯಮ ಸಂಸ್ಥೆಗಳು ಮೂರೂ ಪತ್ರಕರ್ತರನ್ನು ಬಿಡುಗಡೆಗೊಳಿಸಬೇಕು ಎಂದು ಕರೆ ನೀಡಿವೆ.

ಪತ್ರಕರ್ತರನ್ನು ಜೈಲಿಗಟ್ಟಿರುವುನ್ನು ವಿರೋಧಿಸಿ, ಟ್ವಿಟ್ಟರ್ ಲೋಕದಲ್ಲಿ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿವೆ.

English summary
Three Al Jazeera Journalists Jailed For Seven Years in Cairo on June 23. Three Al Jazeera journalists have each been jailed for seven years in Egypt after being found guilty of aiding terrorism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X