ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾರಾಪುಂಜದಲ್ಲಿ ಭೂಮಿಗಿಂತ ದೊಡ್ಡ ವಜ್ರ ಪತ್ತೆಯಾಯ್ತು!

By Srinath
|
Google Oneindia Kannada News

11bn-year-old-earth-size-coldest-white-dwarf-diamond-psr-j2222-0137-discovered
ಲಂಡನ್, ಜೂನ್ 26: ನಮ್ಮ ತಲೆಯ ಮೇಲಿರುವ ನಕ್ಷತ್ರ ಸಮೂಹದಲ್ಲಿ ನಂಬಲಸದಳವಾದ ತಾರೆಯೊಂದನ್ನು ಖಗೋಳಶಾಸ್ತ್ರಜ್ಞರು ಗುರುತಿಸಿದ್ದಾರೆ. ಇದು ಅತ್ಯಂತ ತಣ್ಣಗಿದ್ದು, ಅತ್ಯಂತ ಪುರಾತನದ್ದಾಗಿದೆ. ಕಣ್ಣುಗುರುಡಾಗಿಸುವಂತಹ ಬಿಳಿ ಬಣ್ಣದ ವಜ್ರದಂತೆ ಹರಳುಗಟ್ಟಿದ ನಕ್ಷತ್ರ ಇದಾಗಿದೆ.

ಕುತೂಹಲಕಾರಿ ಸಂಗತಿಯೆಂದರೆ ಭೂಮಿಗಿಂತ ದೊಡ್ಡದಾದ ಗ್ರಹ/ನಕ್ಷತ್ರಗಳು ತಾರಾಲೋಕದಲ್ಲಿದೆ ಎಂದು ಹೇಳುತ್ತಾ ಬಂದಿರುವ ಖಗೋಳಶಾಸ್ತ್ರಜ್ಞರು ಈ ವಜ್ರವೂ ಭೂಮಿಗಿಂತ ದೊಡ್ಡದಾಗಿದೆ ಎಂದು ಪ್ರಕಟಿಸಿದ್ದಾರೆ.

Wisconsin-Milwaukee University ಪ್ರೊ. ಡೇವಿಡ್ ಕೆಪ್ಲಾನ್ ಅವರು ಈ ವಜ್ರ ನಕ್ಷತ್ರದ ಇರುವನ್ನು ಖಚಿತಪಡಿಸಿದ್ದಾರೆ. ಇದು ಭೂಮಿಯ ಮೇಲಿನ ವಜ್ರದಂತೆ ಫಳಫಳಿಸುವ ಬದಲು ಪೇಲವವಾಗಿದೆ. ಹಾಗಾಗಿಯೇ ಅದು ಕಣ್ಣಿಗೆ ಬಿದ್ದಿಲ್ಲ. ಭೂಮಿಯ ಮೇಲಿಂದ ಟೆಲಿಸ್ಕೋಪ್ ಮೂಲಕ ಪತ್ತೆಹಚ್ಚಲು ಸಾಧ್ಯವಾಗದಷ್ಟು ಇವು ಬಿಳಿಚಿಕೊಂಡಿವೆ ಎಂದು ತಿಳಿಸಿದ್ದಾರೆ. (ಮತ್ತೊಂದು ವಾಸಯೋಗ್ಯ ಭೂಮಿ ಪತ್ತೆ ಹಚ್ಚಿದ NASA!)

ಈ ಬಿಳಿ ಕುಬ್ಜ ನಕ್ಷತ್ರವು ತನ್ನಲ್ಲಿರುವ ಉಷ್ಣ ಶಕ್ತಿಯನ್ನು ಸಂಪೂರ್ಣವಾಗಿ ಹೊರಹಾಕಿ ತನ್ನ ಜೀವಿತಾವಧಿಯ ಕೊನೆ ಕೊನೆಗೆ ತ್ಯಾಜ್ಯವಾಗಿ ಉಳಿದ ಇಂಗಾಲ ಮತ್ತು ಆಮ್ಲಜನಕವು ಶೀತಲ ಸ್ಥಿತಿಯಲ್ಲಿ ಘನೀಕೃತಗೊಂಡಿದೆ. ಅದು ವಜ್ರದ ಹರಳು ರೂಪದಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡಿದೆ. (ಅಬ್ಬಾ! ಬೆಳಕಿಗಿಂತ ವೇಗವಾಗಿ ಹಾರುವ ಆಕಾಶನೌಕೆ)

ಮಿಲ್ಕಿ ವೆ ಕಾಲದ್ದು: ಹಿಂದೊಮ್ಮೆ ತನ್ನಲ್ಲಿನ ಭಾರಿ ಉಷ್ಣ ಶಕ್ತಿಯೊಂದಿಗೆ ಭಯಂಕರವಾಗಿದ್ದ ಈ ನಕ್ಷತ್ರವು ಇದೀಗ ಶಾಂತಗೊಂಡು ವಜ್ರದ ಹರಳಾಗಿದೆ. ಅಂದಹಾಗೆ 11 ಶತಕೋಟಿ ವರ್ಷಗಳಷ್ಟು ಹಳೆಯದಾದ ನಕ್ಷತ್ರ ಇದಾಗಿದೆ. PSR J2222-0137 ಹೆಸರಿನ ಈ ನಕ್ಷತ್ರವನ್ನು ಕಾಣಲು ಖಗೋಳಶಾಸ್ತ್ರಜ್ಞರಿಗೆ ಅಪರಿಚಿತ ವಸ್ತುವೊಂದು ಸತತವಾಗಿ ಅಡ್ಡಿಪಡಿಸುತ್ತಿದೆ.

ಸೂರ್ಯನ ಮಧ್ಯ ಭಾಗದಲ್ಲಿರುವ ಉಷ್ಣಾಂಶಕ್ಕಿಂತ (ಶೀತಕ್ಕಿಂತ) 5,000 ಪಟ್ಟು ಈ ವಜ್ರ ನಕ್ಷತ್ರ ತಣ್ಣಗಿದೆ. ಆದರೆ ಗಮನಿಸಿ, ಈ ವಜ್ರ ನಕ್ಷತ್ರದಲ್ಲಿ ಇನ್ನೂ 2,700 ಡಿಗ್ರಿ ಸೆಲ್ಸಿಷಿಯಸ್ (ಅಂದರೆ 4,892 ಡಿಗ್ರಿ ಫ್ಯಾರನ್ ಹೀಟ್) ಉಷ್ಣಾಂಶವಿದೆ.

English summary
11bn-year-old Earth size coldest white dwarf diamond PSR J2222-0137 discovered. "However, this is cold in an astronomical sense and despite being 5,000 times cooler than the center of the Sun, the diamond white dwarf is still thought to be 2,700 degrees celsius (or 4,892 degrees Fahrenheit).," said Professor David Kaplan of the University of Wisconsin-Milwaukee in a press release.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X