ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಚುನಾವಣೆ ಕಣದಲ್ಲಿ 10 ಭಾರತೀಯರು

By Mahesh
|
Google Oneindia Kannada News

ವಾಷಿಂಗ್ಟನ್, ಫೆ.25: ಅಮೆರಿಕದಲ್ಲಿ 2014ರ ಸಾರ್ವತ್ರಿಕ ಚುನಾವಣೆಗೆ ಇನ್ನೂ ಎಂಟು ತಿಂಗಳು ಬಾಕಿಯಿರುವಾಗಲೇ, ಚುನಾವಣಾ ಕಣಕ್ಕಿಳಿಯಲು ತಾವು ನಿರ್ಧರಿಸಿರುವುದಾಗಿ 10 ಮಂದಿ ಭಾರತೀಯ ಅಮೆರಿಕನ್ನರು ಘೋಷಿಸಿದ್ದಾರೆ. ಭಾರತೀಯ ಅಮೆರಿಕನ್ ಕಾಂಗ್ರೆಸ್‌ಸದಸ್ಯ ಅಮಿ ಬೆರಾ, ಕ್ಯಾಲಿಫೋರ್ನಿಯ ಸಂಸದೀಯ ಕ್ಷೇತ್ರದಿಂದ ಮೂರನೆ ಬಾರಿಗೆ ಪುನರಾಯ್ಕೆ ಬಯಸಿದ್ದಾರೆ. ಮತ್ತೋರ್ವ ಭಾರತೀಯ ಅಮೆರಿಕನ್ ಕಮಲಾ ಹಾರಿಸ್ ಕೂಡಾ ಕ್ಯಾಲಿಫೋರ್ನಿಯದ ಅಟಾರ್ನಿ ಜನರಲ್ ಹುದ್ದೆಗೆ ಪುನರಾಯ್ಕೆ ಬಯಸಿದ್ದಾರೆ.

ರಿಪಬ್ಲಿಕನ್ ಸದಸ್ಯರಾಗಿರುವ ನೀಲ್ ಕಶ್ಕರಿ ಕ್ಯಾಲಿಫೋರ್ನಿಯದ ಗವರ್ನರ್ ಹುದ್ದೆಗೆ ಸ್ಪರ್ಧಿಸಲು ಬಯಸಿದ್ದಾರೆ. ಒಂದು ವೇಳೆ ಅವರು ಆಯ್ಕೆಯಾದಲ್ಲಿ ಗವರ್ನರ್ ಹುದ್ದೆಗೆ ಆಯ್ಕೆಯಾದ ಮೂರನೆ ಭಾರತೀಯ ಎನಿಸಿಕೊಳ್ಳಲಿದ್ದಾರೆ. ಲೂಸಿಯಾನದ ಗವರ್ನರ್ ಆಗಿ ಬಾಬ್ಬಿ ಜಿಂದಾಲ್ ಹಾಗೂ ದಕ್ಷಿಣ ಕ್ಯಾರೊಲಿನಾದ ಗವರ್ನರ್ ಆಗಿ ನಿಕ್ಕಿ ಹ್ಯಾಲಿ ಈ ಮೊದಲು ಆಯ್ಕೆಗೊಂಡಿದ್ದರು.

10 Indian-Americans in race for 2014 elections in US

ಆದಾಗ್ಯೂ, ಕ್ಯಾಲಿಫೋರ್ನಿಯದ 17ನೆ ಸಂಸದೀಯ ಕ್ಷೇತ್ರದಲ್ಲಿ, ಒಬಾಮ ಆಡಳಿತದ ವಾಣಿಜ್ಯ ಇಲಾಖೆಯ ಸಹಾಯಕ ಕಾರ್ಯದರ್ಶಿಯಾಗಿದ್ದ ರೋ ಖನ್ನಾರ ಮೇಲೆ ಎಲ್ಲರ ಗಮನ ಹರಿದಿದೆ. ಒಬಾಮ ಚುನಾವಣೆಗೆ ದಾಖಲೆ ಪ್ರಮಾಣದ ನಿಧಿ ಸಂಗ್ರಹಿಸಿದವರಲ್ಲಿ ಖನ್ನಾ ಕೂಡಾ ಒಬ್ಬರಾಗಿದ್ದು, ಒಬಾಮ ಪುನರಾಯ್ಕೆ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

17ನೆ ಕಾಂಗ್ರೆಶನಲ್ ಜಿಲ್ಲೆಯಲ್ಲಿ ಸ್ಟಾನ್‌ಫೋರ್ಡ್ ಯೂನಿವರ್ಸಿಟಿಯ ಔಷಧ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವೆನಿಲಾ ಮಾಥುರ್ ಸಿಂಗ್ ರಿಪಬ್ಲಿಕನ್ ಪಕ್ಷದಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ನ್ಯೂಜೆರ್ಸಿ ಅಸೆಂಬ್ಲಿ ಸ್ಥಾನಕ್ಕಾಗಿ ಇದೇ ಮೊದಲ ಬಾರಿಗೆ ಉಪೇಂದ್ರ ಚಿವುಕುಲ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಮಾತ್ರವಲ್ಲದೆ, ಪೆನ್ಸಿಲ್ವೇನಿಯದಿಂದ ಮನನ್ ತ್ರಿವೇದಿ, ಅಯೊವಾದಿಂದ ಸ್ವಾತಿ ದಂಡೇಕರ್ ಹಾಗೂ ಇಲಿನಾಯ್ಸಾನಿಂದ ಮಂಜು ಗೋಯೆಲ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ.

English summary
Even as the 2014 general elections in the US are still more than eight months away, as many as 10 Indian-Americans have already announced their decision to enter the race for elected public offices, including the House of Representatives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X