ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸಚಿವರ ಪ್ರಕಾರ ಮಹಿಳೆ ದೇಹ ದೇವಾಲಯವಂತೆ!?

|
Google Oneindia Kannada News

ನವದೆಹಲಿ, ಆ. 29 : ಸದಾ ವಿವಾದಾತ್ಮಕ ಹೇಳಿಕೆ ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಮತ್ತೊಮ್ಮೆ ಅಂಥಹದೇ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ.

'ಮಹಿಳೆಯ ದೇಹ ದೇವಾಲಯವಿದ್ದಂತೆ' ಎಂಬ ಹೇಳಿಕೆ ನೀಡಿರುವ ಹರ್ಷವರ್ಧನ್‌ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ. ದೆಹಲಿಯ ಮಹಿಳಾ ಕಾಲೇಜೊಂದರ ವಾರ್ಷಿಕೋತ್ಸವದಲ್ಲಿ ಮಾತನಾಡುತ್ತ, ಮಹಿಳೆ ಕೇವಲ ತಾಯಿ, ಶಿಕ್ಷಕಿ ಮತ್ತು ಅಕ್ಕನಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಮಾಜದಲ್ಲಿ ಅವಳ ಪಾತ್ರ ಅನೇಕ ಕ್ಷೇತ್ರಗಳಲ್ಲಿದೆ. ಆರೋಗ್ಯಕರ ಮಹಿಳೆ ದೇಶಕ್ಕೆ ಅಗತ್ಯ. ಮಹಿಳೆಯ ದೇಹ ಮಂದಿರವಿದ್ದಂತೆ ಎಂದು ಹೇಳಿ ಮಹಿಳೆಯರನ್ನು ಹೊಗಳುವ ಭರದಲ್ಲಿ ಪ್ರಮಾದವೆಸಗಿದ್ದಾರೆ.

harsha vardhan

ಇಂದಿನ ಮಹಿಳೆಯರಲ್ಲಿ ಸೌಂದರ್ಯ ಕಾಳಜಿ ಹೆಚ್ಚಿದೆ. ಉಪವಾಸ, ಜಿಮ್‌ ಎನ್ನುತ್ತ ಸೌಂದರ್ಯ ಉಳಿಸಿಕೊಳ್ಳಲು ಹೆಚ್ಚಿನ ಗಮನ ನೀಡಿ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಿಡಿ
ಫೇಸ್‌ ಬುಕ್‌ ಮತ್ತು ಟ್ವಿಟ್ಟರ್‌ನಲ್ಲಿ ಹರಿದಾಡಿರುವ ಹರ್ಷವರ್ಧನ್‌ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಮಹಿಳೆಯರು ಕೇವಲ ಗಂಡಸರ ಸೇವೆ ಮಾಡಲು ಹುಟ್ಟಿಲ್ಲ. ಹರ್ಷವರ್ಧನ್‌ ಬಿಜೆಪಿಯ ಕಪಿಲ್‌ ಸಿಬಲ್‌ ಆಗುವತ್ತ ದಾಪುಗಾಲಿಟ್ಟಿದ್ದಾರೆ. ಮಹಿಳೆಯರಿಗೆ ಮತ್ತೆ ಕೀಳರಿಮೆ ಮೂಡಿಸುವ ಕೆಲಸ ಮಾಡಬೇಡಿ. ವಿವಾದವಿರದಿದ್ದರೇ ನಿಮಗೆ ನಿದ್ರೆನೇ ಬರಲ್ವೇ... ಎಂಬ ಅನೇಕ ರೀತಿಯ ಅಸಮಾಧಾನಕಾರಿ ಟ್ವೀಟ್‌ಗಳು ಹರಿದಾಡಿವೆ.

English summary
Union health minister Harsh Vardhan, who has been at the centre of many controversies recently, kicked up yet another storm on social media on Thursday with his reference to a 'women's body as a temple'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X