ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರೇ, ಅಪಾಯದಲ್ಲಿದ್ದರೆ ಈ ಬಟನ್ ಒತ್ತಿ ಸಾಕು!

By Srinath
|
Google Oneindia Kannada News

woman-in-distress-press-a-button-in-your-dress-to-call-the-police
ವಾರಣಾಸಿ, ಜೂನ್ 24: ಮಹಿಳೆಯರು ತಮ್ಮ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳಿಂದ ಮುಕ್ತಿ ಪಡೆಯುವಂತಾಗಲು ಕಂಪ್ಯೂಟರ್ ವಿದ್ಯಾರ್ಥಿನಿಯೊಬ್ಬರು ನೂತನ ಸಾಧನವೊಂದನ್ನು ಕಂಡುಹಿಡಿದಿದ್ದಾರೆ. ಅದೂ ವಿಪರೀತ ಎನಿಸುವಷ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವ ಉತ್ತರ ಪ್ರದೇಶ ಮೂಲದ ವಿದ್ಯಾರ್ಥಿನಿ ಈ ಸಾಧನವನ್ನು ಕಂಡುಹಿಡಿದಿದ್ದಾರೆ.

ಮಹಿಳೆಯರು ಒಬ್ಬರೇ ಇದ್ದಾಗ, ತಮ್ಮ ಮೈಮೇಲೆ ಅಪಾಯ ಎದುರಾದಾಗ ಧೃತಿಗೆಡದೆ ತಾವು ಧರಿಸಿರುವ ಯಾವುದೇ ಡ್ರೆಸ್ (ಜೀನ್ಸ್ ಪ್ಯಾಂಟ್, ಟಿ ಶರ್ಟ್‌, ಚೂಡಿದಾರ್) ನಲ್ಲಿ ಗುಪ್ತವಾಗಿ ಅಡಗಿರುವ ಒಂದು ಬಟನ್ ಒತ್ತಿದರೆ ಸಾಕು ನೇರವಾಗಿ ಅದು ಪೊಲೀಸ್ ಕಂಟ್ರೋಲ್ ರೂಂಗೆ ಸಂದೇಶ ರವಾನಿಸುತ್ತದೆ. ಅಲ್ಲಿ ಸದಾ ಅಲರ್ಟ್ ಆಗಿರುವ ಪೊಲೀಸರು ತಕ್ಷಣ ನಿಮ್ಮ ರಕ್ಷಣೆಗೆ ಧಾವಿಸುತ್ತಾರೆ!

ದೇವನಗರಿ ವಾರಣಾಸಿಯ ಕಂಪ್ಯೂಟರ್ ವಿದ್ಯಾರ್ಥಿನಿ ಈ ಹೊಸ ತಂತ್ರಜ್ಞಾನ ಕಂಡು ಹಿಡಿದಿದ್ದಾರೆ. ಆಕೆಯ ಹೆಸರು ದೀಕ್ಷಾ ಪಾಠಕ್. ಯುವತಿಯರು ತಾವು ಧರಿಸಿರುವ ಜೀನ್ಸ್ ಪ್ಯಾಂಟಿಗೆ ಈ ಬಟನ್ ಅಳವಡಿಸಿಕೊಂಡಿದ್ದರೆ ಸಾಕು. ಜೀನ್ಸ್‌ ಪ್ಯಾಂಟಿನಲ್ಲಿ ಹೈ ಫ್ರೀಕ್ವೆನ್ಸಿಯಾ ವಾಕಿ-ಟಾಕಿ ಮಾದರಿಯ ಬಟನ್ ಅಳವಡಿಸಲಾಗಿರುತ್ತದೆ. (ಅತ್ಯಾಚಾರಿಗಳೇ ಹುಷಾರ್, ಮಹಿಳೆಯಿಂದ ದೂರವಿರಿ)

ಅದರಲ್ಲಿ ಮಾಮೂಲಿ ಸಿಮ್ ಕಾರ್ಡ್ ಇರುತ್ತದೆ. ಅದಕ್ಕೆ ಎಮರ್ಜೆನ್ಸಿ ನಂಬರ್ ಅಳವಡಿಸಲಾಗಿರುತ್ತದೆ. ಯುವತಿ ಅಪಾಯದ ಮುನ್ಸೂಚನೆ ಅರಿಯುತ್ತಿದ್ದಂತೆ ಆ ಬಟನ್ ಒತ್ತಿದರಾಯಿತು. ಒಂದು ವೇಳೆ ನೆಟ್‌ ವರ್ಕ್ ವಿಫಲವಾಗಿದ್ದರೆ? ಚಿಂತೆ ಬೇಡ. ಅದೂ ಆಟೋಮ್ಯಾಟಿಕ್ ಆಗಿ ಪುನಃ ರಿಡೈರೆಕ್ಟ್ ಆಗುತ್ತದೆ. ಅದು ಪೊಲೀಸ್ ಕಂಟ್ರೋಲ್ ರೂಂ ತಲುಪಿ ಪೊಲೀಸರು ಸ್ಥಳಕ್ಕೆ ಧಾವಿಸುತ್ತಾರೆ.

ಅಂದಹಾಗೆ, ತನ್ನ ಮತ್ತೊಬ್ಬ ಗೆಳತಿ ಅಂಜಲಿ ಜತೆಗೂಡಿ ದೀಕ್ಷಾ ತಯಾರಿಸಿರುವ ಈ ಜೀವ ರಕ್ಷಕ ಆಧುನಿಕ ಉಪಕರಣದ ಬೆಲೆ ದುಬಾರಿಯಲ್ಲ, ಕೇವಲ 200 ರೂಪಾಯಿ ಅಷ್ಟೆ. (ಕಾಮುಕರಿಂದ ಸ್ತ್ರೀಯರ ರಕ್ಷಣೆಗೆ ಬಂದಿದೆ ಉಂಗುರ!)

ಈ ಗೆಳತಿಯರು ಮುಂದೆ ಇನ್ನೂ ಒಂದು ಸಾಧನೆ ಮಾಡಲಿದ್ದಾರೆ. ಈ ಸಾಧನಕ್ಕೆ ಒಂದು ಕ್ಯಾಮರಾ ಕೂಡ ಅಳವಡಿಸುವ ಯೋಚನೆಯಲ್ಲಿದ್ದು, ದುಷ್ಕರ್ಮಿಯ ಚಿತ್ರವೂ ಕ್ಯಾಮೆರಾದಲ್ಲಿ ಸೆರೆಯಾಗಲಿದೆ. ಇದರಿಂದ ಪೊಲೀಸರ ತನಿಖೆಗೆ ಸಹಕಾರಿಯಾಗುತ್ತದೆ.

English summary
Woman in distress should press a button in their dress to call the police. Deeksha pathak, a computer science student, a driver's daughter created a set up in a pair of jeans using which women caught in crime situations can call up the police control room merely by pressing a button in their trousers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X