ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈತ ಮೋದಿ ಕಚೇರಿಯ ಪ್ರಮುಖ ಅಧಿಕಾರಿ

By Mahesh
|
Google Oneindia Kannada News

ನವದೆಹಲಿ, ಮೇ.29: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಸಚಿವ ಸಂಪುಟ ವಿಸ್ತರಣೆ ಮಾಡುವ ಬೆನ್ನಲ್ಲೇ ತಮ್ಮ ಕಚೇರಿಯಲ್ಲಿ ಯಾವೆಲ್ಲ ಅಧಿಕಾರಿಗಳಿಗೆ ಸ್ಥಾನ ಕಲ್ಪಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಮೋದಿ ಅವರ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಅಧಿಕಾರಿ ನೃಪೇಂದ್ರ ಮಿಶ್ರಾ ಅವರನ್ನು ನೇಮಕ ಮಾಡಲಾಗಿದ್ದು, ಪ್ರಧಾನಿ ಸಚಿವಾಲಯದ ಪ್ರಮುಖ ಹುದ್ದೆಯ ಜವಾಬ್ದಾರಿ ಮಿಶ್ರಾ ಅವರಿಗೆ ಸಿಕ್ಕಿದೆ.

ಮೋದಿ ಅವರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ 69 ವರ್ಷ ವಯಸ್ಸಿನ ನೃಪೇಂದ್ರ ಮಿಶ್ರಾ ಅವರು ಭಾರತೀಯ ದೂರಸಂಪರ್ಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿದ್ದರು. 1967ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಅವರು ಉತ್ತರಪ್ರದೇಶ ಕೇಡರ್‌ಗೆ ಸೇರಿದವರು. ಹಿಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಪುಲೋಕ್ ಚಟರ್ಜಿ ಅವರಿಂದ ಮಿಶ್ರಾ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

ನಿಯಮಗಳ ಪ್ರಕಾರ ಭಾರತೀಯ ದೂರಸಂಪರ್ಕ ಪ್ರಾಧಿಕಾರದ ಅಧ್ಯಕ್ಷ ಮತ್ತು ಸದಸ್ಯರಾಗಿದ್ದವರು ರಾಜ್ಯ ಮತ್ತು ಕೇಂದ್ರ ಸರ್ಕಾರಿ ಹುದ್ದೆಗಳನ್ನು ಸ್ವೀಕರಿಸುವಂತಿಲ್ಲ. ಆದರೆ ಮಿಶ್ರಾ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸುವ ದೃಷ್ಟಿಯಿಂದ ಸುಗ್ರೀವಾಜ್ಞೆ ಹೊರಡಿಸಲಾಯಿತು. ಅದರ ಪ್ರಕಾರ ಪ್ರಧಾನಿಯವರ ಅಧಿಕಾರದ ಅವಧಿ ಎಷ್ಟು ಸಮಯ ಇರುತ್ತದೆಯೋ ಅಥವಾ ಮುಂದಿನ ಆದೇಶದ ವರೆಗೆ ಅವರು ಪ್ರಧಾನ ಕಾರ್ಯದರ್ಶಿಯಾಗಿರುತ್ತಾರೋ ಕಾದು ನೋಡಬೇಕಿದೆ.

watch out for Nripendra Misra, Modi’s Principal Secretary,

ಮಿಶ್ರಾ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಜಾನ್ ಎಫ್ ಕೆನಡಿ ಸ್ಕೂಲ್ ನಿಂದ ಸಾರ್ವಜನಿಕ ಆಡಳಿತ ವಿಷಯದಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಅಲಹಾಬಾದ್ ವಿವಿಯಿಂದ ರಾಜ್ಯಶಾಸ್ತ್ರ ಹಾಗೂ ರಾಸಯನಿಕ ಶಾಸ್ತ್ರದಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಭಾರತೀಯ ದೂರಸಂಪರ್ಕ ನಿಯಂತ್ರಕ ಸಂಸ್ಥೆ (ಟ್ರಾಯ್) ಚೇರ್ಮನ್ ಆಗಿದ್ದ ಮಿಶ್ರಾ ಅವರು 2009ರಲ್ಲಿ ನಿವೃತ್ತಿ ಹೊಂದಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿದ್ದಾಗ ತರಂಗಗುಚ್ಛ ಹಂಚಿಕೆ ಹಾಗೂ ಹರಾಜು ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದನ್ನು ಮರೆಯುವಂತಿಲ್ಲ. ಆಗ ಟೆಲಿಕಾಂ ಸಚಿವರಾಗಿದ್ದ ಎ.ರಾಜಾ ಅವರ ಶಿಫಾರಸ್ಸು ಮನ್ನಿಸಿದ್ದು, 2ಜಿ ಹಗರಣ ನಡೆದಿದ್ದು ಇವರ ಅವಧಿಯಲ್ಲೆ ಎಂದು ಸುಪ್ರೀಂಕೋರ್ಟಿಗೆ ವರದಿ ಸಲ್ಲಿಕೆಯಾಗಿದೆ.

ಟ್ರಾಯ್ ಮುಖ್ಯಸ್ಥರಾಗುವುದಕ್ಕೂ ಮುನ್ನ ಮಿಶ್ರಾ ಅವರು ಟೆಲಿಕಾಂ, ವಾಣಿಜ್ಯ ಹಾಗೂ ರಸಗೊಬ್ಬರ ಖಾತೆಗಳ ಅಡಿಯಲ್ಲಿ ಬರುವ ವಿವಿಧ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ವಾಷಿಂಗ್ಟನ್ ನಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಉತ್ತರಪ್ರದೇಶದಲ್ಲಿ ವಾಣಿಜ್ಯ ಕಾರ್ಯದರ್ಶಿ, ಮುಲಾಯಂ ಸಿಂಗ್ ಯಾದವ್ ಹಾಗೂ ಕಲ್ಯಾಣ್ ಸಿಂಗ್ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಈಗ ಮೋದಿ ಪ್ರಧಾನಿ ಸಚಿವಾಲಯ ನಿಭಾಯಿಸುವ ಪ್ರಮುಖ ಹೊಣೆ ಇವರ ಮೇಲಿದೆ. ಸಚಿವಾಲಯದಲ್ಲಿ ಭ್ರಷ್ಟಾಚಾರ, ಅಪಾರದರ್ಶಕತೆ ದೆಸೆಯಿಂದ ಯುಪಿಎ ಸರ್ಕಾರ ಮುಖಭಂಗ ಅನುಭವಿಸಿದ್ದು ಎಲ್ಲರಿಗೂ ತಿಳಿದೇ ಇದೆ.

ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ನಡುವಿನ ಕೊಂಡಿಯಾಗಿ ಪಿಎಂಒನ ಪ್ರಧಾನ ಕಾರ್ಯದರ್ಶಿ ಕಾರ್ಯನಿರ್ವಹಿಸಬೇಕಾಗುತ್ತದೆ. ಪ್ರಧಾನಿ ಅವರ ದೈನಂದಿನ ಕಾರ್ಯಗಳಿಂದ ಹಿಡಿದು ಪ್ರಧಾನಿ ಅವರ ದೂರದೃಷ್ಟಿ, ಯೋಜನೆ, ಸೂಚನೆಗಳನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿಯೂ ಮಿಶ್ರಾ ಮೇಲಿದೆ.

English summary
Why Nripendra Misra, Modi’s Principal Secretary, will be the babu to watch out for Nripendra Misra, former Uttar Pradesh-cadre bureaucrat, has been appointed the principal secretary to Prime Minister Narendra Modi. This essentially means Misra will be heading the Prime Minister's Office (PMO).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X