ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಚಂದ್ರಾಪುರದ 'ಮಹಾ' ಚಿರತೆ ಸೆರೆ

By Mahesh
|
Google Oneindia Kannada News

ಚಂದ್ರಾಪುರ(ಮಹಾರಾಷ್ಟ್ರ), ಏ.21: ಚಂದ್ರಾಪುರ ಹಾಗೂ ಬಲ್ಲರ್ ಪುರದ ಜನರ ನಿದ್ದೆಗೆಡಿಸಿದ್ದ ಚಿರತೆಯನ್ನು ಅರಣ್ಯ ಸಿಬ್ಬಂದಿ ಕೊನೆಗೂ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಸೋಮವಾರ ಬೆಳಗ್ಗೆ ಚಿರತೆ ಬಲೆಗೆ ಕೆಡವಿಕೊಳ್ಳುವುದಕ್ಕೂ ಮುನ್ನ ಅರಣ್ಯ ಸಿಬ್ಬಂದಿಗಳು ಒಂದಿಷ್ಟು ರಕ್ತವನ್ನು ಹರಿಸಬೇಕಾಯಿತು.ಅಂತಿಮವಾಗಿ ಶೌಚಾಲಯವೊಂದರಲ್ಲಿ ಅಡಗಿದ್ದ ಚಿರತೆಯನ್ನು ಅರವಳಿಕೆ ಮದ್ದು ಬಳಸಿ ಕೆಳಕ್ಕುರುಳಿಸಿದ್ದಾರೆ.

ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿದರೂ ಚಿರತೆ ಹಿಡಿಯುವುದು ಅರಣ್ಯ ಸಿಬ್ಬಂದಿ ಅಷ್ಟು ಸುಲಭವಾಗಿರಲಿಲ್ಲ. ಮನೆಯ ಹೆಂಚಿನ ಮೇಲೆ ಹತ್ತಿದ್ದ ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ಬಂದ ಚಿರತೆ ಸಿಬ್ಬಂದಿಗಳು ಸೇರಿದಂತೆ ಒಬ್ಬ ಗ್ರಾಮಸ್ಥನ ಮೇಲೂ ಎರಗಿತ್ತು. ಪುಣ್ಯಕ್ಕೆ ಎಲ್ಲರೂ ಪ್ರಾಣಾಪ್ರಾಯದಿಂದ ಪಾರಾಗಿದ್ದು ಗಾಯದ ವೇದನೆ ಅನುಭವಿಸುತ್ತಿದ್ದಾರೆ.

Video: Leopard runs amock in Maharashtra villages, tamed after 4 hours

ಚಂದ್ರಾಪುರ ಜಿಲ್ಲೆಯ ತಡೊಬಾ ರಾಷ್ಟ್ರೀಯ ವನ್ಯಜೀವಿ ಉದ್ಯಾನದಿಂದ ಚಿರತೆ ಗ್ರಾಮಕ್ಕೆ ಎಂಟ್ರಿ ಕೊಟ್ಟಿದೆ. ಇತ್ತೀಚೆಗೆ ಬಂದಿದ್ದ ಒಂದು ಚಿರತೆ ಹಳ್ಳಿಯ ಬಾವಿಗೆ ಬಿದ್ದು ಸಾವನ್ನಪ್ಪಿತ್ತು. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ವನ್ಯಜೀವಿಗಳು ಹಳ್ಳಿಗಳಿಗೆ ಪ್ರವೇಶಿಸುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಇತ್ತೀಚೆಗೆ ಬರುತ್ತಿರುವ ಕಾಡಿನ ಅತಿಥಿಗಳು ಸ್ವಲ್ಪ ಹೆಚ್ಚಾಗಿ ಆರ್ಭಟಿಸುತ್ತಿವೆ ಎಂದು ಚಂದ್ರಾಪುರ ಗ್ರಾಮಸ್ಥರು ಹೇಳಿದ್ದಾರೆ. ಏ.17ರಂದು ಕರಡ್ ನ ಗ್ರಾಮವೊಂದರ ವ್ಯಕ್ತಿಯನ್ನು ಗಾಯಗೊಳಿಸಿತ್ತು. ಚಿರತೆಯ ಆರ್ಭಟವನ್ನು ವಿಡಿಯೋದಲ್ಲಿ ನೋಡಿ...

English summary
A leopard entered two villages in Ballarpur in Chandrapur district in Maharashtra early on Monday morning, pushing the panic button. Forest department officials had a harrowing time to rein in the animal and it was tamed with the help of tranquilisers after it entered the toilet in a house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X