ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ದಿಗ್ವಿಜಯ ಮುಸ್ಲಿಂ ರಾಜಕಾರಣಕ್ಕೆ ತೀವ್ರ ಹಿನ್ನಡೆ

|
Google Oneindia Kannada News

ನವದೆಹಲಿ, ಜು 18: ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ ಸಾಧಿಸಿದ ದಿಗ್ವಿಜಯ ಮುಸ್ಲಿಂ ರಾಜಕಾರಣಕ್ಕಾದ ತೀವ್ರ ಹಿನ್ನಡೆ ಎಂದು ವಿಶ್ವಹಿಂದೂ ಪರಿಷತ್ ಸಂಚಾಲಕ ಅಶೋಕ್ ಸಿಂಘಾಲ್ ಅಭಿಪ್ರಾಯ ಪಟ್ಟಿದ್ದಾರೆ.

ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಮುಸ್ಲಿಂ ಬೆಂಬಲವಿಲ್ಲದೆಯೇ ಚುನಾವಣೆಯಲ್ಲಿ ಗೆಲ್ಲಬಹುದೆಂದು ಬಿಜೆಪಿ ತೋರಿಸಿಕೊಟ್ಟಿದೆ ಮತ್ತು ಹಿಂದೂಗಳನ್ನು ದ್ವೇಷಿಸಿ ಹೆಚ್ಚು ದಿನ ಬದಕಲಾಗುವುದಿಲ್ಲ ಎಂದು ಸಿಂಘಾಲ್ ವಿವಾದಕಾರಿ ಹೇಳಿಕೆ ನೀಡಿದ್ದಾರೆ.

ಹಿಂದೂಗಳ ನಂಬಿಕೆಗೆ ಬೆಲೆಕೊಡುವ ಕೆಲಸ ಮುಸ್ಲಿಂ ಸಮುದಾಯದಿಂದ ಆಗಬೇಕಾಗಿದೆ. ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರದ ಮೇಲೆ ತಮ್ಮ ಹಕ್ಕುಪ್ರತಿಪಾದನೆ ಸ್ಥಾಪಿಸುವುದನ್ನು ಮುಸ್ಲಿಮರು ನಿಲ್ಲಿಸಬೇಕೆಂದು ಸಿಂಘಾಲ್ ಸಂದರ್ಶನದಲ್ಲಿ ಹೇಳಿದ್ದಾರೆ. (ಸಿಎಂಗೆ ಪೇಜಾವರ ಶ್ರೀಗಳು ಕೇಳಿದ ಸಪ್ತ ಪ್ರಶ್ನೆ)

ನಮ್ಮ ದೇಶದಲ್ಲಿ ಇತರ ಸಮುದಾಯದ ಜನತೆಯಂತೆ ಸಮನಾಗಿ ಅವರನ್ನೂ ನೋಡಿಕೊಳ್ಳಲಾಗುತ್ತಿದೆ. ಹೀಗಾಗಿ ಅವರಿಗೆ ಪ್ರತ್ಯೇಕ ಸ್ಥಾನಮಾನ ನೀಡುವ ಅಗತ್ಯ ನನಗೆ ಕಾಣಿಸುವುದಿಲ್ಲ. ಅಯೋಧ್ಯ, ಕಾಶಿ ಮತ್ತು ಮಥುರಾದಲ್ಲಿ ತನ್ನ ಹಕ್ಕು ಚಲಾಯಿಸುವುದನ್ನು ಮುಸ್ಲಿಮರು ನಿಲ್ಲಿಸಬೇಕೆಂದು ಸಿಂಘಾಲ್ ಹೇಳಿದ್ದಾರೆ.

ಸಿಂಘಾಲ್ ಹೇಳಿಕೆಗೆ ಕಾಂಗ್ರೆಸ್ ಕೆಂಡಾಮಂಡಲ. ಕಾಂಗ್ರೆಸ್ ನಾಯಕರ ಹೇಳಿಕೆ ಸ್ಲೈಡಿನಲ್ಲಿ

ನಿಜಬಣ್ಣ ಬಯಲು

ನಿಜಬಣ್ಣ ಬಯಲು

ಸಿಂಘಾಲ್ ಹೇಳಿಕೆಯಿಂದ ಬಿಜೆಪಿಯ ನಿಜಬಣ್ಣ ಬಯಲಾಗಿದೆ. ಇದು ಬಿಜೆಪಿಗೆ ಅಲ್ಪಸಂಖ್ಯಾತರ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ. ಸಂಘಪರಿವಾರದ ಅಣತಿಯಂತೆ ಬಿಜೆಪಿ ಕುಣಿಯುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ - ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ.

ಮೋದಿ ಇದಕ್ಕೆ ಒಪ್ಪುವುದಿಲ್ಲ

ಮೋದಿ ಇದಕ್ಕೆ ಒಪ್ಪುವುದಿಲ್ಲ

ಭಾರತದಲ್ಲಿ ಎಲ್ಲರೂ ಒಂದೇ. ಒಡೆದಾಳುವುದು ನಮ್ಮ ನೀತಿಯಲ್ಲ. ಮುಸ್ಲಿಮರನ್ನು ಎರಡನೇ ದರ್ಜೆ ನಾಗರೀಕರ ಹಾಗೆ ನೋಡುವುದು ತಪ್ಪು. ಸಿಂಘಾಲ್ ಹೇಳಿಕೆಯನ್ನು ಬಹುಷಃ ಪ್ರಧಾನಿ ಮೋದಿ ಒಪ್ಪಲಾರರು - ರಾಜೀವ್ ಶುಕ್ಲಾ.

ಹಿಂದೂ ಮತ್ತು ಮುಸ್ಲಿಮರು ಸಹೋದರರಂತೆ

ಹಿಂದೂ ಮತ್ತು ಮುಸ್ಲಿಮರು ಸಹೋದರರಂತೆ

ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸಹೋದರರಂತೆ. ಸಹೋದರರಾಗಿಯೇ ಇರುತ್ತಾರೆ. ದೇಶ ಕಟ್ಟುವ ವಿಚಾರದಲ್ಲಿ ಎರಡೂ ಸಮದಾಯದವರ ಕೊಡುಗೆ ಅಪಾರ - ರಾಜೀವ್ ಶುಕ್ಲಾ.

ಶಿವಸೇನೆ ಮುಖಂಡ

ಶಿವಸೇನೆ ಮುಖಂಡ

ಈ ದೇಶದಲ್ಲಿ ಎಲ್ಲರೂ ಒಂದೇ. ವೋಟಿಗಾಗಿ ಮುಸ್ಲಿಮರನ್ನು ಓಲೈಸುವುದು ತಪ್ಪು ಎಂದು ಶಿವಸೇನೆಯ ಮುಖಂಡ ಸಂಜಯ್ ರಾವತ್ ಅಭಿಪ್ರಾಯ ಪಟ್ಟಿದ್ದಾರೆ.

ಮೋದಿಯನ್ನು ಹೊಗಳಿದ ಸಿಂಘಾಲ್

ಮೋದಿಯನ್ನು ಹೊಗಳಿದ ಸಿಂಘಾಲ್

88 ವರ್ಷದ ಸಿಂಘಾಲ್ ಸಂದರ್ಶನದಲ್ಲಿ, ಮೋದಿ ಅಲೆಯಿಂದಾಗಿ ಬಿಜೆಪಿಗೆ ಅಭೂತಪೂರ್ವ ಜಯಸಿಕ್ಕಿತು. ಮೋದಿಯವರಲ್ಲಿ ಒಬ್ಬ ಆತ್ಮವಿಶ್ವಾಸದ ಸ್ವಯಂಸೇವಕನನ್ನು ಕಂಡೆ ಎಂದು ಹೊಗಳಿದ್ದಾರೆ.

English summary
VHP leader Ashok Singhal says BJP win a setback to Muslim politics, Congress condemns Singhal statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X