ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿಗೆ ಎಲೆಕ್ಷನ್ ಕಿಂಗ್ ಸವಾಲು

By Mahesh
|
Google Oneindia Kannada News

ವಡೋದರಾ, ಏ.4: ಭಾರತೀಯ ಚುನಾವಣಾ ಇತಿಹಾಸದಲ್ಲಿ ಎಲೆಕ್ಷನ್ ಕಿಂಗ್ ಎಂದು ಕರೆಸಿಕೊಂಡಿರುವ ಲಿಮ್ಕಾ ದಾಖಲೆ ವಿಜೇತ ತಮಿಳುನಾಡಿನ ಕೆ. ಪದ್ಮರಾಜನ್ ಅವರು ಗಿನ್ನಿಸ್ ದಾಖಲೆಗಾಗಿ ಮತ್ತೊಮ್ಮೆ ಚುನಾವಣಾ ಕಣಕ್ಕಿಳಿದಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿಯುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಚುನಾವಣೆಗೆ ಸ್ಪರ್ಧಿಸುವುದೇ ಹವ್ಯಾಸ ಮಾಡಿಕೊಂಡಿರುವ ತಮಿಳುನಾಡಿನ ಮೆಟ್ಟೂರು ಮೂಲದ ನಿವಾಸಿ ಡಾ.ಕೆ.ಪದ್ಮರಾಜನ್ ಅವರು ಈವರೆಗೂ ಅವರು 158 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ದೇಶದಲ್ಲಿ ನಡೆದಿರುವ 15 ಲೋಕಸಭೆ ಚುನಾವಣೆ ಸೇರಿದಂತೆ ಅಸೆಂಬ್ಲಿ ಚುನಾವಣೆಗಳಲ್ಲೂ ಪದ್ಮರಾಜನ್ ಸ್ಪರ್ಧೆಗಿಳಿದಿದ್ದಾರೆ.

ಈವರೆಗೆ ಒಟ್ಟು 158 ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಪದ್ಮರಾಜನ್ ಸ್ಥಳೀಯ ಚುನಾವಣೆಗಳಿಂದ ಹಿಡಿದು ಲೋಕಸಭೆ ಚುನಾವಣೆವರೆಗೂ ಸ್ಪರ್ಧಿಸಿರುವುದು ವಿಶೇಷವಾಗಿದೆ. ಆದರೆ, ಎಲ್ಲಿಯೂ ಕೂಡ ಅವರು ತಮ್ಮ ಠೇವಣಿಯನ್ನು ಉಳಿಸಿಕೊಂಡಿಲ್ಲ. ಆದರೂ ಚುನಾವಣೆಗೆ ಸ್ಪರ್ಧಿಸುವುದೆಂದರೆ ಅವರಿಗೆ ಎಲ್ಲಿಲ್ಲದ ಸಂತಸ ಬರುತ್ತದೆಯಂತೆ.

ಕಳೆದ 25 ವರ್ಷಗಳಿಂದ ನಿರಂತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪದ್ಮರಾಜನ್ ತಾನು ಭಾರತದ ಚುನಾವಣೆಯ ರಾಜ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನನಗೆ ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತ ಸ್ಪರ್ಧಿಸುವುದರಲ್ಲಿಯೇ ಆತ್ಮಾಭಿಮಾನವಿದೆ. 25 ವರ್ಷಗಳಿಂದ ಒಂದಿಲ್ಲೊಂದು ಚುನಾವಣೆಗೆ ಸ್ಪರ್ಧಿಸಿ ವಿಶ್ವ ದಾಖಲೆ ನಿರ್ಮಿಸಿದ್ದೇನೆ. ನನ್ನ ಜೀವನದ ಕೊನೆ ಉಸಿರು ಇರುವವರೆಗೂ ಸ್ಪರ್ಧಿಸುವುದೇ ಗುರಿಯಾಗಿದೆ ಎಂದು ಪದ್ಮ ರಾಜನ್ ಹೇಳಿದ್ದಾರೆ.ಪದ್ಮರಾಜನ್ ಸಾಧನೆ ಹಿನ್ನೋಟ ಮುಂದೆ ಓದಿ...

ಘಟಾನುಘಟಿಗಳ ವಿರುದ್ಧ ಸ್ಪರ್ಧಿಸಿರುವ ರಾಜನ್

ಘಟಾನುಘಟಿಗಳ ವಿರುದ್ಧ ಸ್ಪರ್ಧಿಸಿರುವ ರಾಜನ್

ಈ ಹಿಂದೆ ಪದ್ಮರಾಜನ್ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಡಾ.ಮನಮೋಹನ್ ಸಿಂಗ್, ಮಾಜಿ ರಾಷ್ಟ್ರಪತಿಗಳಾದ ಎ.ಪಿ.ಜೆ.ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್ ಸೇರಿದಂತೆ ಅನೇಕರ ಎದುರು ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದರು.

ಯಾವುದೇ ಎಲೆಕ್ಷನ್ ಇರಲಿ ಪದ್ಮರಾಜನ್ ಹಾಜರು

ಯಾವುದೇ ಎಲೆಕ್ಷನ್ ಇರಲಿ ಪದ್ಮರಾಜನ್ ಹಾಜರು

ಲೋಕಸಭೆ, ವಿಧಾನ ಪರಿಷತ್, ವಿಧಾನ ಸಭೆ, ರಾಜ್ಯಸಭೆ, ರಾಷ್ಟ್ರಪತಿ, ಉಪರಾಷ್ಟ್ರಪತಿ, ನಗರ ಪಾಲಿಕೆ, ತಾಪಂ, ಜಿಪಂ ಸೇರಿದಂತೆ ಪ್ರತಿ ಹಂತದ ಚುನಾವಣೆಗೂ ಸ್ಪರ್ಧಿಸಿದ್ದಾರೆ.

ಎಲ್ಲವೂ ದಾಖಲೆಗಾಗಿ ಎನ್ನುತ್ತಾರೆ ರಾಜನ್

ಎಲ್ಲವೂ ದಾಖಲೆಗಾಗಿ ಎನ್ನುತ್ತಾರೆ ರಾಜನ್

ನಾನು 1988ರಿಂದಲೂ ಚುನಾವಣೆಗೆ ಸ್ಪರ್ಧಿಸುತ್ತ ಬಂದಿದ್ದೇನೆ. ನನಗೆ ಸೋಲು-ಗೆಲುವಿಗಿಂತಲೂ ದಾಖಲೆ ನಿರ್ಮಿಸಬೇಕೆಂಬುದೇ ಪ್ರಮುಖ ಉದ್ದೇಶ ಎನ್ನುತ್ತಾರೆ. ಗಿನ್ನಿಸ್ ದಾಖಲೆ ನಿರ್ಮಾಣಕ್ಕೆ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರ ಮಾಡುವುದಿಲ್ಲ. ದಾಖಲೆಗಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ ಎಂದಿದ್ದಾರೆ.

ಗಳಿಸಿದ ಮತಗಳೆಷ್ಟು, ಖರ್ಚು ವೆಚ್ಚ ಲೆಕ್ಕಾಚಾರ

ಗಳಿಸಿದ ಮತಗಳೆಷ್ಟು, ಖರ್ಚು ವೆಚ್ಚ ಲೆಕ್ಕಾಚಾರ

ಪದ್ಮರಾಜನ್ ಅವರು ಈವರೆಗೂ ಗಳಿಸಿರುವ ಅತಿ ಹೆಚ್ಚು ಮತಗಳೆಂದರೆ, 627.. 2011ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮೆಟ್ಟೂರಿನಿಂದ ಸ್ಪರ್ಧಿಸಿದ್ದ ಅವರು ತಾವು ಸ್ಪರ್ಧಿಸಿರುವ ಚುನಾವಣೆಯಲ್ಲಿ ಪಡೆದ ಅತಿ ಹೆಚ್ಚು ಮತಗಳು ಇದಾಗಿದೆ.

ಇದುವರೆಗೆ 12 ಲಕ್ಷ ರೂ. ನಾಮಪತ್ರ ಸಲ್ಲಿಕೆಗೆ ವೆಚ್ಚ ಮಾಡಿದ್ದೇನೆ. ಆದರೆ ರಾಷ್ಟ್ರಪತಿ ಚುನಾವಣೆಯಲ್ಲಿ ಮಾತ್ರ ಹಣ ಮರುಪಾವತಿ ಆಗಿದೆ. ಈ ಹಿಂದೆ ಸ್ಪರ್ಧಿಸಿದ್ದ 157 ಚುನಾವಣೆಗಳಲ್ಲೂ ಠೇವಣಿ ಕಳೆದುಕೊಂಡಿದ್ದಾರೆ

ರಾಷ್ಟ್ರಪತಿ, ಉಪ ರಾಷ್ಟ್ರಪತಿ ವಿರುದ್ಧ ಸ್ಪರ್ಧೆ

ರಾಷ್ಟ್ರಪತಿ, ಉಪ ರಾಷ್ಟ್ರಪತಿ ವಿರುದ್ಧ ಸ್ಪರ್ಧೆ

ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ಮೂಲದ ಮೂಲತಃ ಹೋಮಿಯೋಪತಿ ವೈದ್ಯರಾಗಿರುವ 55 ವರ್ಷದ ಪದ್ಮರಾಜನ್ ಟೈರ್ ರಿಮೋಲ್ಡಿಂಗ್ ವ್ಯವಹಾರ ನಡೆಸುತ್ತಿದ್ದಾರೆ.

1988ರಲ್ಲಿ ಸಿಪಿಎಂನ ಮಾಜಿ ಶಾಸಕ ಸೆರಂಗನ್ ವಿರುದ್ಧ ಮೊದಲ ಸ್ಪರ್ಧೆ. 1997ರಲ್ಲಿ ಕೆ.ಆರ್.ನಾರಾಯಣ್, 2002ರಲ್ಲಿ ಎ.ಪಿ.ಜೆ.ಅಬ್ದುಲ್ ಕಲಾಂ, 2007ರಲ್ಲಿ ಪ್ರತಿಭಾ ಪಾಟೀಲ, 2012ರಲ್ಲಿ ಪ್ರಣಬ್ ಮುಖರ್ಜಿ ವಿರುದ್ಧ ಸ್ಪರ್ಧಿಸಿದ್ದಾರೆ.

ಉಪ ರಾಷ್ಟ್ರಪತಿ ವಿರುದ್ಧ 1997ರಲ್ಲಿ ಕೃಷ್ಣಕಾಂತ, 2002ರಲ್ಲಿ ಭೈರೋನ್ ‌ಸಿಂಗ್ ಶೆಖಾವತ್, 2007 ಮತ್ತು 2012ರಲ್ಲಿ ಎರಡು ಬಾರಿ ಹಮೀದ್ ಅನ್ಸಾರಿ ವಿರುದ್ಧ ಕಣಕ್ಕಿಳಿದಿರುವ ಪದ್ಮರಾಜನ್ ಲೋಕಸಭೆ ಚುನಾವಣೆಯಲ್ಲಿ ವಿವಿಧ ರಾಜ್ಯಗಳಲ್ಲಿ ಒಟ್ಟು 24 ಬಾರಿ ಸ್ಪರ್ಧಿಸಿದ್ದರು.

ಕರ್ನಾಟಕದಲ್ಲೂ ಪದ್ಮರಾಜನ್ ಸ್ಪರ್ಧೆ

ಕರ್ನಾಟಕದಲ್ಲೂ ಪದ್ಮರಾಜನ್ ಸ್ಪರ್ಧೆ

ಈ ಬಾರಿ ಲೋಕಸಭೆಗೆ 25 ಸಾವಿರ ಖರ್ಚು ಮಾಡಿರುವ ಪದ್ಮರಾಜನ್ ಅವರ ಚುನಾವಣಾ ಚಿನ್ಹೆ ಬಲೂನ್.

ಕರ್ನಾಟಕ ಲೋಕಸಭೆಯಿಂದ 1996ರಲ್ಲಿ ಸಿ. ನಾರಾಯಣಸ್ವಾಮಿ, 2004ರಲ್ಲಿ ಬೀದರ್, 2009ರಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿದ್ದರು. 2013ರಲ್ಲಿ ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ಧ ಸಲ್ಲಿಸಿದ್ದ ನಾಮಪತ್ರ ಅನುಮೋದಕರಿಲ್ಲದೆ ಕಸದ ಬುಟ್ಟಿ ಸೇರಿತ್ತು.

ವಿವಿಧ ರಾಜ್ಯಗಳಲ್ಲಿ ಪದ್ಮರಾಜನ್ ಸ್ಪರ್ಧೆ

ವಿವಿಧ ರಾಜ್ಯಗಳಲ್ಲಿ ಪದ್ಮರಾಜನ್ ಸ್ಪರ್ಧೆ

ಪಾಂಡಿಚೇರಿ, ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ ರಾಜ್ಯಗಳಿಂದ ರಾಜ್ಯಸಭೆಗೆ 28 ಬಾರಿ ಸ್ಪರ್ಧಿಸಿರುವ ಪದ್ಮರಾಜನ್, ವಿಧಾನಸಭಾ ಚುನಾವಣೆಗೆ 46 ಬಾರಿ ಸ್ಪರ್ಧಿಸಿದ್ದಾರೆ. 1988ರಲ್ಲಿ ಮೆಟ್ಟೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ನಂತರ ಕಂಗ್ಯಾಯಮ್, ರಾಣಿಪೇಟ್, ಪೆರುಂದರಿ, ಮೈಲಾಪೂರ, ಆಂಧ್ರಪ್ರದೇಶದ ಕಡಪ, ಕೇರಳದ ತಿರುರಂಗಡಿ, ಅಟ್ಟೂರು, ಬೃಗೂರು, ಪುಡುಕೊಟ್ಟಿ, ಅರುಪ್ಪುಕೊಟ್ಟಿ, ತಿರುಚ್ಚಿ-2, ಆಂಡಿಪೆಟ್ಟಿ, ಸೈದಪೆಟ್ಟಿ, ತ್ರೀರುವಲ, ಕಂಚಿಪೂರಂ, ಕುಮಿಡಿಪೊಂಡಿ, ಅಕ್ಸಿಕೊಂಡೆ, ಪಯ್ಯಾನೂರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ ಅನುಭವ ಹೊಂದಿದ್ದಾರೆ.

English summary
Vadodara: 'Election King' Dr. K. Padmarajan, whose name figures in the Limca Book of Records for being the 'most unsuccessful candidate', is Jumping into the poll fray once again for the 159th time.The Tamil Nadu-based tyre seller will take on the Bharatiya Janata Party’s prime ministerial candidate Narendra Modi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X