ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಪ್ ಮಾಡಿ ಯುವತಿಯರನ್ನು ಮರಕ್ಕೆ ನೇಣುಹಾಕಿದರು

By Srinath
|
Google Oneindia Kannada News

ಬದೌನ್ (ಉತ್ತರ ಪ್ರದೇಶ), ಮೇ 30: ಇಡೀ ದೇಶವೇ ತಲೆತಗ್ಗಿಸುವಂತಹ ಹೇಯ ಕೃತ್ಯ ನಡೆದಿದೆ. ಹದಿಹರೆಯದ ಇಬ್ಬರು ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಅದಾದನಂತರ ನಿರ್ದಯೆಯಿಂದ ಅವರಿಬ್ಬರನ್ನೂ ಹತ್ಯೆ ಮಾಡಿ, ಮರಕ್ಕೆ ನೇತುಹಾಕಲಾಗಿದೆ.

ಘಟನೆಯ ಇನ್ನೂಂದು ಕ್ರೌರ್ಯದ ಮುಖವೆಂದರೆ ಪ್ರಕರಣದ ಬಗ್ಗೆ ದೂರು ನೀಡಲು ಹೋದ ಸಹೋದರಿಯರ ಕುಟುಂಬ ವರ್ಗದವರನ್ನು ಪೊಲೀಸರು ಅವಮಾನಪಡಿಸಿ, ದೂರು ಸ್ವೀಕರಿಸಲೂ ನಿರಾಕರಿಸಿದ್ದಾರೆ. ಕಟುಕರು ಹೀಗೂ ಇರುತ್ತಾರಾ? ಅಂದಹಾಗೆ ಇಷ್ಟೆಲ್ಲ ಹೇಯ ಘಟನೆಗಳು ನಡೆದಿರುವುದು ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಕಾರ್ತಾ ಎಂಬ ಹಳ್ಳಿಯಲ್ಲಿ.

ಘಟನೆ ತಿಳಿಯುತ್ತಿದ್ದಂತೆ ಸ್ವಯಂ ಪ್ರೇರಣೆಯಿಂದ ಮಧ್ಯ ಪ್ರವೇಶಿಸಿರುವ ಕೇಂದ್ರ ಮಹಿಳಾ ಆಯೋಗವು ಪ್ರಕರಣದ ತನಿಖೆಗಾಗಿ ಸಮಿತಿಯೊಂದನ್ನು ರಚಿಸಿದೆ. ಈ ನಡುವೆ ಕೇಂದ್ರ ಗೃಹ ಸಚಿವಾಲಯ ಪ್ರಕರಣದ ಬಗ್ಗೆ ವಿವರಣೆ ಕೇಳಿದೆ.

Uttar Pradesh dalit sisters gang rape-murdered and hanged to tree

ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ತಡವಾಗಿ ಎಚ್ಚೆತ್ತ ಹಿರಿಯ ಪೊಲೀಸ್ ಅಧಿಕಾರಿಗಳು ದೂರು ದಾಖಲಿಸದ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಜೇಶ್, ಅವಧೇಶ್ ಮತ್ತು ಇನ್ನೂ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಚೌಹಾಣ್ ಹೇಳಿದ್ದಾರೆ.

ಏನಿದು ಪ್ರಕರಣ: ಅತ್ಯಾಚಾರಕ್ಕೀಡಾದ ಬಾಲಕಿಯರಿಬ್ಬರೂ ಸೋದರ ಸಂಬಂಧಿಗಳು. ಅವರು ದಲಿತ ಸಮುದಾಯಕ್ಕೆ ಸೇರಿದವರು. ಸುಮಾರು 14-15 ವಯಸ್ಸಿನ ಈ ಇಬ್ಬರು ಮಂಗಳವಾರ ಮನೆಯಿಂದ ಹೊರಗೆ ಹೋದವರು ನಾಪತ್ತೆಯಾಗಿದ್ದರು. ಬುಧವಾರ ಅವರ ಮೃತದೇಹಗಳು ಊರ ಹೊರಗೆ ತೋಟದ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಇದನ್ನು ಕಂಡು ಹೌಹಾರಿದ ಗ್ರಾಮಸ್ಥರು ಮತ್ತು ಬಾಲಕಿಯವರ ಹೆತ್ತವರು ಘಟನೆಯ ಬಗ್ಗೆ ಸ್ಥಳೀಯ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಘಟನೆಯಿಂದ ರೊಚ್ಚಿಗೆದ್ದ ಹಳ್ಳಿಯ ಜನ, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

English summary
Uttar Pradesh dalit sisters gang rape-murdered and hanged to tree. two teenaged-cousins were gangraped and then hung to a tree in a village in Badaun, Uttar Pradesh on Wednesday. Following this, FIR was registered against seven persons including constables Sarvesh Yadav and Rakshapal Yadav, who were suspended. The four accused-Brijesh, Awadhesh and two other unidentified were arrested, said SP Chauhan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X