ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಡ್ ಲೈನ್ಸ್: ಒಡಿಶಾ ಸಿಎಂ ಆಗಿ ಪಟ್ನಾಯಕ್ ಅಧಿಕಾರ

By Mahesh
|
Google Oneindia Kannada News

ಬೆಂಗಳೂರು, ಮೇ.21: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
3.30: ಗುಜರಾತ್ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ ನರೇಂದ್ರ ಮೋದಿ.
10.45: ನವದೆಹಲಿ ಶಾಸ್ತ್ರಿ ಭವನದ 7ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಂಟಕ್ಕೂ ಅಧಿಕ ಅಗ್ನಿಶಾಮಕದಳ ವಾಹನಗಳ ಮೂಲಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.


10.30: ಒಡಿಶಾ ಸಿಎಂ ಆಗಿ ನವೀನ್ ಪಟ್ನಾಯಕ್ ಅವರು ನಾಲ್ಕನೇ ಬಾರಿಗೆ ಆಧಿಕಾರ ಸ್ವೀಕರಿಸಿದ್ದಾರೆ.
10.15: ನವದೆಹಲಿಯಲ್ಲಿ ಹೊಸದಾಗಿ ಅಸೆಂಬ್ಲಿಗೆ ಚುನಾವಣೆ ನಡೆಯಲಿ ಎಂದು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ರಾಜ್ಯಪಾಲ ಲೆ.ಗರ್ವನರ್ ನಜೀಬ್ ಜಂಗ್ ಅವರಿಗೆ ಕೋರಿದ್ದಾರೆ.

News in brief on May 21

10.00: ಪಾಕಿಸ್ತಾನದಲ್ಲಿ 80ಕ್ಕೂ ಅಧಿಕ ಗೆರಿಲ್ಲಾಗಳನ್ನು ಕೊಂದು ಹಾಕಲಾಗಿದೆ.
9.45: ಮೇ.23 ರಾಜೀವ್ ಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ಭಯೋತ್ಪಾದನೆ ವಿರೋಧಿ ದಿನವನ್ನಾಗಿ ಆಚರಿಸಲಾಗುತಿದೆ.
9.30: ಮಾಸ್ಕೋದಲ್ಲಿ ನಡೆದ ರೈಲು ದುರಂತದಲ್ಲಿ 6 ಜನ ಸಾವನ್ನಪ್ಪಿದ್ದಾರೆ.
9.15: ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಮೂರು ವರ್ಷ ಅಧಿಕಾರ ಅವಧಿ ಪೂರೈಸಿದ್ದಾರೆ.
9.00: ಪಾಕಿಸ್ತಾನ ಮೂರು ಜಿಯೋ ಟಿವಿ ಚಾನೆಲ್ ಗಳನ್ನು ನಿಷೇಧಿಸಿದೆ.
8.45: PMO ಟ್ವಿಟ್ಟರ್ ಖಾತೆಯನ್ನು ಬದಲಾಯಿಸಿದ್ದಕ್ಕೆ ಬಿಜೆಪಿ ಗರಂ ಆಗಿದೆ. @PMOindia ಇದ್ದ ಖಾತೆಯನ್ನು @PMOIndiaArchive ಎಂದು ಬದಲಿಸಲಾಗಿದೆ. ಇದು ಪ್ರಧಾನಿ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆಯಾಗಿದೆ.
English summary
Top news in brief for the day: Naveen Patnaik takes oath as the Odisha Chief Minister for the fourth time. Here are the news in brief for the day from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X