ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ.20: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಮೇ.20: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

6.45: ಮೇ.21ಕ್ಕೆ ಗುಜರಾತ್ ಸಿಎಂ ನರೇಂದ್ರ ಮೋದಿ ಅವರು ಅಧಿಕಾರ ಹಸ್ತಾಂತರಿಸಿ ಆನಂದಿಬೇನ್ ಅವರನ್ನು ಮುಂದಿನ ಸಿಎಂ ಆಗಿ ಘೋಷಿಸುವ ಸಾಧ್ಯತೆಯಿದೆ.
6.30: ಮೇ.26ರಂದು ನರೇಂದ್ರ ಮೋದಿ ಅವರು ದೇಶದ 15ನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
6.00: ಜಿತನ್ ರಾಮ್ ಮಾಂಝಿ ಅವರು ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
5.30: ಗೋವಾ ಸಿಎಂ ಮನೋಹರ್ ಪಾರಿಕ್ಕಾರ್ ಅವರು ಮೋದಿ ಸಂಪುಟ ಸೇರ್ಪಡೆ ಬಗ್ಗೆ ಅಷ್ಟೇನೂ ಆಸಕ್ತಿ ತೋರಿಸಿಲ್ಲ ಎಂದು ತಿಳಿದು ಬಂದಿದೆ.
5.00: ಬ್ರೆಜಿಲ್ 2014ರ ಫುಟ್ಬಾಲ್ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂದು ಲೂಯಿಸ್ ಫಿಗೋ ಹೇಳಿಕೆ

News in brief on May 20

3.00: ವಾರಣಾಸಿಯಲ್ಲಿ 60 ಫ್ಲೈಓವರ್ ನಿರ್ಮಾಣ ಮಾಡುವ ಉದ್ದೇಶವನ್ನು ಬಿಜೆಪಿ ಇಟ್ಟುಕೊಂಡಿದ್ದು, ಚುನಾವಣೆ ಸಂದರ್ಭದಲ್ಲಿ ಮೋದಿ ನೀಡಿದ ಆಶ್ವಾಸನೆಯಂತೆ ಗಂಗಾ ನದಿ ಸ್ವಚ್ಛತೆಗೂ ಆದ್ಯತೆ ನೀಡಲು ಮುಂದಾಗಿದೆ.
2.45: ಲೋಕಸಭೆ ಚುನಾವಣೆಯಲ್ಲಿ ಸೋಲು ಹಿನ್ನೆಲೆ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸಚಿವರು ಸೇರಿ 36 ಮುಖಂಡರನ್ನು ವಜಾಗೊಳಿಸಿದ್ದಾರೆ.
2.30: ಎಎಪಿ ಮುಖ್ಯಸ್ಥ, ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ಭೇಟಿ ಮಾಡಿದ್ದಾರೆ.
2.15: ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬ್ಲೇಡ್ ರನ್ನರ್ ಖ್ಯಾತಿಯ ಆಸ್ಕರ್ ಪೊಸ್ಟೋರಿಯಸ್ ನನ್ನು 30ದಿನಗಳ ಮಾನಸಿಕ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ.
2.00: ರಾಷ್ಟ್ರಪತಿ ಭವನ ತಲುಪಿದ ನರೇಂದ್ರ ಮೋದಿ ಹಾಗೂ ಎನ್ಡಿಎ ಮುಖಂಡರು.
1.45: ಆದರ್ಶ್ ಹಗರಣದ ಮುಖಂಡರಿಗೆ ಮಹಾರಾಷ್ಟ್ರ ಸರ್ಕಾರದಲ್ಲಿ ಮತ್ತೊಮ್ಮೆ ಸ್ಥಾನ ಕಲ್ಪಿಸಲಾಗಿದೆ.
1.30: ಬಿಜೆಪಿ ಸಂಸದೀಯ ಸಭೆ ಮುಕ್ತಾಯಗೊಂಡಿದ್ದು, ಮೋದಿ ಭಾವುಕ ಭಾಷಣಕ್ಕೆ ಎಲ್ಲರೂ ತಲೆದೂಗಿದ್ದಾರೆ. [ವಿವರ ಇಲ್ಲಿ ಓದಿ]
1.15: 15 ಮುಖಂಡರಿರುವ ಎನ್ಡಿಎ ನಿಯೋಗದೊಡನೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಲಿರುವ ಮೋದಿ.
11.00: ಮೋದಿ ಅವರ ಕ್ಯಾಬಿನೆಟ್ ನಲ್ಲಿ ಮೊದಲಿಗೆ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ ಅವರಿಗೆ ಸ್ಥಾನ ಸಿಗಲಿದೆ ಎಂಬ ಸುದ್ದಿ ಬಂದಿದೆ.

10.45: ಬಿಜೆಪಿ ಸಂಸದೀಯ ಸಮಿತಿ ಸಭೆಯಲ್ಲಿ ನರೇಂದ್ರ ಮೋದಿ ಹೆಸರನ್ನು ಪ್ರಧಾನಿ ಹುದ್ದೆಗೆ ಸೂಚಿಸಿದ ಎಲ್.ಕೆ ಅಡ್ವಾಣಿಗೆ ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್ ಅನುಮೋದನೆ.
10.30: ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿತೀಶ್ ಕುಮಾರ್ ವಿರುದ್ಧ ಶಿವಸೇನಾ ಮುಖವಾಣಿ 'ಸಾಮ್ನಾ' ದಲ್ಲಿ ಲೇಖನ. ನಿತೀಶ್ ಡ್ರಾಮಾ ಎಂದು ಟೀಕೆ.

News in brief on May 20

10.00: ಬಿಜೆಪಿಯ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ಕೋರಲಿದ್ದಾರೆ.
9.45: ಜಮ್ಮುವಿನಲ್ಲಿ ಇಂದು ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ 17 ಜನ ಮೃತರಾಗಿದ್ದು, 30 ಜನರಿಗೆ ಗಾಯಗಳಾಗಿವೆ.
9.30: 'ಮೆಟ್ರೋ ಮ್ಯಾನ್' ಇ. ಶ್ರೀಧರನ್ ಅವರು ಮೋದಿ ಟೀಮ್ ಸೇರುವ ಬಗ್ಗೆ ಬಂದಿರುವ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ.
9.15: ಒಡಿಶಾ ಸಿಎಂ ಆಗಿ ನವೀನ್ ಪಟ್ನಾಯಕ್ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
English summary
Top news in brief for the day:Advani to propose Modi's name as PM in BJP Parliamentary Committee, Sushma, Rajnath to back proposal. Here are the news in brief for the day from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X