ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಡ್ ಲೈನ್ಸ್: ದೇಶ, ವಿದೇಶಗಳ ಚುಟುಕು ಸುದ್ದಿ

By Mahesh
|
Google Oneindia Kannada News

ಬೆಂಗಳೂರು, ಮೇ.18 ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

3.00: ಗಾಂಧಿನಗರದ ಸಂಸದ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ.
2.45: ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ ರಾಜ್ಯ ಸಂಸದರ ನಿಯೋಗ. ನಾಲ್ಕು ಸಂಪುಟ ದರ್ಜೆ ಹಾಗೂ ಎರಡು ರಾಜ್ಯ ಸಚಿವ ಖಾತೆಗೆ ಬೇಡಿಕೆ ಮುಂದಿಡಲಾಗಿದೆ ಎಂದು ರಾಜ್ಯ ಅಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿಕೆ.

Entertainment to Environment: News in brief on May 18

10.45: ಆರೆಸ್ಸೆಸ್ ಮುಖಂಡರೊಡನೆ ಸಚಿವ ಸಂಪುಟ ರಚನೆ ಬಗ್ಗೆ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಚರ್ಚೆ ನಡೆಸಲಿದ್ದಾರೆ. ಮೇ.20 ರಂದು ನಡೆಯುವ ಬಿಜೆಪಿ ಸಂಸದೀಯ ಸಭೆಗೂ ಮುನ್ನ ಈ ಚರ್ಚೆ ನಡೆಯಲಿದೆ.
10.30: ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಜೆಡಿಯು ಮುಖಂಡರೊಡನೆ ಚರ್ಚೆ ನಡೆಸಿದ್ದು, ಹೊಸ ನಾಯಕನ ಆಯ್ಕೆ ಮಾಡುತ್ತಿದ್ದಾರೆ.
10.00: ಯಾವುದೇ ಟ್ರೋಫಿ ಗೆಲ್ಲಿಸಲು ಸಾಧ್ಯವಾಗದ ಕಾರಣ ಬಾರ್ಸಿಲೋನ ಫುಟ್ಬಾಲ್ ಕ್ಲಬ್ ಕೋಚ್ ಗೆರಾರ್ಡೋ ಮಾರ್ಟಿನೋ ರಾಜೀನಾಮೆ ನೀಡಿ ಹೊರನಡೆದಿದ್ದಾರೆ.

News in brief on May 18

9.45: ದೆಹಲಿಯ ಗುಜರಾತ್ ಭವನದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕರ್ನಾಟಕದ ಸಂಸದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪ್ರಧಾನ್, ಅಮಿತ್ ಶಾ ಕೂಡಾ ಸಾಥ್.
9.30: ಐಪಿಎಲ್ ಫೈನಲ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೆ ನಡೆಯಲಿದೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಮಾಡಿದ ಮನವಿ ತಿರಸ್ಕೃತ.
9.15: ಸುಮಾತ್ರದಲ್ಲಿ 6.2 ಪ್ರಮಾಣದಲ್ಲಿ ಭೂ ಕಂಪನವಾಗಿರುವ ವರದಿ ಬಂದಿದೆ.
English summary
Top news in brief for the day: Narendra Modi to IPL, Politics to Sports, Entertainment to Environment -- get all latest news of India and foreign countries here. Stay tuned to be updated. Here are the news in brief for the day from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X