ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.9: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜೂ.9: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
3.50: ಕರ್ನಾಟಕದ ಕಾರವಾರದಲ್ಲಿ ಬ್ರಹ್ಮೋಸ್ ಕ್ಷಿಪಣಿ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಬ್ರಹ್ಮೋಸ್ 290 ಕಿ.ಮೀ ದೂರದವರೆಗೂ ಗುರಿ ಮುಟ್ಟುವ ಸಾಮರ್ಥ್ಯ ಹೊಂದಿದೆ.

12.15: ಬೆಲೆ ಏರಿಕೆ, ಆರ್ಥಿಕತೆ ನಿಯಂತ್ರಣ, ಶಿಕ್ಷಣದ ಬಗ್ಗೆ ರಾಷ್ಟ್ರಪತಿ ಭಾಷಣದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ[ವಿವರ ಇಲ್ಲಿ ಓದಿ]
11.00: ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾಷಣ ಆರಂಭಿಸಿದ್ದಾರೆ.
10.45: ಹಿಮಾಚಲ ಪ್ರದೇಶದಲ್ಲಿ ಹೈದರಾಬಾದಿನ ವಿದ್ಯಾರ್ಥಿಗಳ ದುರಂತ ಸಾವಿಗೆ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ದುಃಖ ವ್ಯಕ್ತಪಡಿಸಿದ್ದಾರೆ.

Pranab Mukherjee

10.30: ಫೀಫಾ ವಿಶ್ವಕಪ್ 2014 ಅಭ್ಯಾಸ ಪಂದ್ಯವೊಂದರಲ್ಲಿ ಜಮೈಕಾ ತಂಡವನ್ನು ಫ್ರಾನ್ಸ್ ಸೋಲಿಸಿದೆ. ಫ್ರಾನ್ಸಿನ ಪ್ರಮುಖ ಆಟಗಾರ ರಿಬೇರಿ ಗಾಯಾಳುವಾಗಿದ್ದು, ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ.
9.50: ಪಾಕಿಸ್ತಾನದ ವಿಮಾನ ನಿಲ್ದಾಣದಲ್ಲಿ ದಾಳಿ ಘಟನೆ ನಂತರ ಭಾರತದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

9.45: ಚಂದೀಗಢದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದ್ದು, ಬೆಂಕಿ ಆಕಸ್ಮಿಕ ಸಂಭವಿಸಿದೆ, ರಕ್ಷಣಾ ಕಾರ್ಯಕ್ಕಾಗಿ ಬಂದಿದ್ದ ಅಗ್ನಿ ಶಾಮಕದಳ ಸಿಬ್ಬಂದಿ ಪೈಕಿ ಮೂವರು ಕಟ್ಟಡ ಕುಸಿತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
9.00:
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಜೂನ್ ತಿಂಗಳಿನಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ.
8.50: ದೆಹಲಿ ವಿಜಯ್ ಪಂಡಿತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಉತ್ತರಪ್ರದೇಶದ ಸಮಾಜವಾದಿ ಪಕ್ಷ ನಮಗೂ ಈ ಘಟನೆಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದೆ.

News in brief on June 9

8.30: ರೋಲ್ಯಾಂಡ್ ಗ್ಯಾರೋಸ್ ಅಂಗಳದಲ್ಲಿ ಕಿಂಗ್ ಆಫ್ ಕ್ಲೇ ಖ್ಯಾತಿಯ ಸ್ಪೇನ್‌ನ ರಾಫೆಲ್ ನಡಾಲ್ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ನೊವಾಜ್ ಜೋಕೊವಿಕ್ ಎದುರು 4-6, 7-5, 6-2, 6-4 ಅಂತರದ ಜಯ ದಾಖಲಿಸಿ 9ನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದು ಇತಿಹಾಸ ಬರೆದರು.

7.40: ಹಿಮಾಚಲ ಪ್ರದೇಶದ ಬೀಸ್ ಸಮೀಪದ ನದಿ ಪ್ರವಾಹಕ್ಕೆ ಪ್ರವಾಸ ನಿರತ ಆಂಧ್ರಪ್ರದೇಶ 24 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೊಚ್ಚಿ ಹೋಗಿದ್ದಾರೆ.
7.30: ಉಗ್ರರ ದಾಳಿಗೆ ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ 20 ಜನರ ಬಲಿ. ಗನ್ ಮ್ಯಾನ್ ಗಳಂತೆ ಬಂದಿದ್ದ ಉಗ್ರರು.

English summary
Top news in brief for the day: Four persons were detained for questioning in connection with the murder of BJP leader and Dadri Nagar Panchayat Chairman Geeta Pandit's husband Vijay Pandit in Dadri area even as police clamped prohibitory orders in Gautam Budh Nagar district. Here are the news in brief for the day from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X