ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.7: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Ashwath
|
Google Oneindia Kannada News

ಬೆಂಗಳೂರು, ಜೂ.7: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ

4.45 : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಿದ್ಯುತ್‌ ಕಡಿತ: ವಿದ್ಯುತ್‌ ಕಡಿತದ ಬಗ್ಗೆ ಬಿಜೆಪಿ ಸರ್ಕಾರದಿಂದ ವಿವರಣೆ ಕೇಳಿದ ಎಎಪಿ ಮುಖ್ಯಸ್ಥ ಅರವಿಂದ್‌‌ ಕೇಜ್ರಿವಾಲ್‌.

4.12 : ಉತ್ತರ ಪ್ರದೇಶ ಹಿಂಸಾಚಾರ ಸಂಭವಿಸಿದ ಪ್ರದೇಶಗಳಲ್ಲಿ ನಿರಂತರ ವಿದ್ಯುತ್‌ ಕಡಿತ‌‌.

4.00 : ಎಎಪಿಯಲ್ಲಿ ಯುವ ಜನತೆ ಸಂಖ್ಯೆ ಹೆಚ್ಚಿಸಲು ಯೋಜನೆ ರೂಪಿಸಲಾಗುವುದು: ಆಪ್‌ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಹೇಳಿಕೆ

3.51 : ಕುಡಂಕುಲಂ ಅಣು ವಿದ್ಯುತ್‌ ಸ್ಥಾವರದಿಂದ ಪ್ರಥಮ ಬಾರಿಗೆ ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆ. ಉತ್ಪಾದನೆಯಾದ ವಿದ್ಯುತ್‌ನಲ್ಲಿ ಶೇ.15 ರಷ್ಟು ವಿದ್ಯುತ್‌ನ್ನು ತಮಿಳುನಾಡಿಗೆ ನೀಡುವಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬೇಡಿಕೆ. ಒಂದು ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸಿದ ದೇಶದ ಮೊದಲ ಅಣು ವಿದ್ಯುತ್‌ ಸ್ಥಾವರ ಎಂಬ ಹೆಗ್ಗಳಿಕೆ ಪಾತ್ರವಾದ ಕುಡಂಕುಲಂ ಅಣು ವಿದ್ಯುತ್‌ ಸ್ಥಾವರ.

3.40 : ಉತ್ತರ ಪ್ರದೇಶದಲ್ಲಿ ಹದಿಹರೆಯದ ಸಹೋದರಿಯರ ಮೇಲೆ ಗ್ಯಾಂಗ್‌ ರೇಪ್‌. ಇಥ್‌ ಜಿಲ್ಲೆಯ ಸಿಯಾಪುರ್‌ ಗ್ರಾಮದಲ್ಲಿ ಮೂವರಿಂದ ಕೃತ್ಯ.

3.32 : ಕಾಶ್ಮೀರದಲ್ಲಿ ಅಪರಿಚಿತ ವ್ಯಕ್ತಿಯಿಂದ ಗುಂಡಿನ ದಾಳಿ: ಮೂರು ಮಂದಿ ಪೊಲೀಸರಿಗೆ ಗಾಯ

3.15: ತ್ರಿಪುರದಲ್ಲಿ ಬಿಎಸ್‌ಎಫ್‌ ಸೈನಿಕರು ಮತ್ತು ಗ್ರಾಮಸ್ಥರ ನಡುವೆ ನಡೆದ ಘರ್ಷ‌ಣೆಯಲ್ಲಿ ಬಿಎಸ್‌ಎಫ್‌ ಯೋಧರೊಬ್ಬರು ಮೃತಪಟ್ಟಿದ್ದಾರೆ. ಘಟನೆಯ ಬಗ್ಗೆ ತ್ರಿಪುರ ಸರ್ಕಾರ ತನಿಖೆಗೆ ಆದೇಶ ನೀಡಿದೆ.

3.04 : ಮುಂಬೈ ಮೆಟ್ರೋ ಭಾನುವಾರ ಜೂನ್‌ 8ರಂದು ಉದ್ಘಾಟನೆಯಾಗಲಿದೆ.

2.45: ಅಭಿವೃದ್ಧಿಯ ಸಮಯ ಬಂದಿದೆ. ಬಿಹಾರವನ್ನು ನಾವು ಅಭಿವೃದ್ಧಿ ಮಾಡುತ್ತೇವೆ ಜೊತೆಗೆ ದೇಶವನ್ನು ಅಭಿವೃದ್ಧಿ ಮಾಡುತ್ತೇವೆ. ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌

2.04 : ಉತ್ತರಖಂಡ್‌‌ನಲ್ಲಿ 2009ರಲ್ಲಿ ಎಂಬಿಎ ವಿದ್ಯಾರ್ಥಿ‌‌ಗಳ ನಕಲಿ ಎನ್‌‌‌ಕೌಂಟರ್‌ ಪ್ರಕರಣ. ತಪ್ಪಿತ್ಥಸ್ಥ 17 ಪೊಲೀಸರಿಗೆ ಜೂ.9 ರಂದು ಶಿಕ್ಷೆ ಪ್ರಕಟಿಸಲಿರುವ ದೆಹಲಿ ಕೋರ್ಟ್‌.

2.00 : ಜೈಪುರ ವಿಮಾನ ನಿಲ್ದಾಣದಲ್ಲಿ ಆನಾರೋಗ್ಯಕ್ಕೆ ಒಳಗಾದ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌‌ ಸಿದ್ದು.

1.30 : ಅಸ್ಸಾಂ ಉಗ್ರರ ಜೊತೆ ಕಾರ್ಯಾಚರಣೆ ಪೊಲೀಸ್‌ಅಧಿಕಾರಿ‌ ಹತ್ಯೆ: 4 ಮಂದಿ ಪೊಲೀಸ್‌ ಅಧಿಕಾರಿಗಳು ಸೇವೆಯಿಂದ ಅಮಾನತು.

12.45 : ಯೋಗೇಂದ್ರ ಯಾದವ್‌ ಹೊಗಳಿ ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌

11.48 : ಸಮರ ವಿಮಾನವಾಹಕ ನೌಕೆ 'ಐಎನ್‌ಎಸ್‌ ವಿರಾಟ್‌' ಮೇಲೆ ರಕ್ಷಣಾ ಮಂತ್ರಿ ಅರುಣ್‌ ಜೆಟ್ಲಿಯವರು ನಿಂತಿರುವುದು.


11.37 : ಅಸ್ಸಾಂ ಕಾರ್ಬಿ ಪೀಪಲ್ಸ್ ಲಿಬರೇಷನ್ ಟೈಗರ್ಸ್ (ಕೆಪಿಎಲ್ಟಿ) ಉಗ್ರರ ಜೊತೆ ಕಾರ್ಬಿ ಆಂಗ್ಲೊಂಗ್ನ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ನಡೆದ ಕಾರ್ಯಾಚರಣೆಯಲ್ಲಿ ಮೃತಪಟ್ಟ ಪೊಲೀಸ್‌ ಅಧಿಕಾರಿಗೆ ಅಸ್ಸಾಂ ಸರ್ಕಾರದಿಂದ ಅಂತಿಮ ಗೌರವ.

11.30 : ಆಮ್‌ ಆದ್ಮಿ ಪಕ್ಷ ಪ್ರಜಾಪ್ರಭುತ್ವ ಸಂಸ್ಥೆಗೆ ಗೌರವ ನೀಡದ ಕಾರಣ ದೇಶದ ಜನರು ಯೋಗ್ಯವಾದ ಉತ್ತರ ನೀಡಿದ್ದಾರೆ. ಆಮ್‌ ಆದ್ಮಿ ಪಕ್ಷದ ವಿರುದ್ದ ಬಿಜೆಪಿ ವಾಗ್ದಾಳಿ.

11.25 : ಜನರ ಸಮಸ್ಯೆಗಳಿಗೆ ಹೋರಾಡಬೇಕಾದ ಆಪ್ ನಾಯಕರು ತಮ್ಮ ಪಕ್ಷದ ಒಳಗಡೆ ಹೋರಾಟ ಮಾಡುತ್ತಿದ್ದಾರೆ. ಅರವಿಂದ್‌ ಕೇಜ್ರಿವಾಲ್‌‌ ವಿರುದ್ಧ ಕಾಂಗ್ರೆಸ್‌ ವ್ಯಂಗ್ಯ.

11.03: ಪುಣೆ ಟೆಕ್ಕಿ ಕೊಲೆ ಪ್ರಕರಣ: ಮಹಾರಾಷ್ಟ್ರ ಸರ್ಕಾರದಿಂದ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಕೆ. ಸಲ್ಲಿಕೆಯಾದ ವರದಿ ಗೃಹ ಸಚಿವಾಲಯಕ್ಕೆ ತೃಪ್ತಿ ನೀಡಿಲ್ಲವೆಂದು ಇಂಗ್ಲಿಷ್‌ ವಾಹಿನಿ ಟೈಮ್ಸ್‌ ನೌ ಹೇಳಿದೆ.

10.58 : ಉಕ್ರೈನ್‌‌ನ ಪೊರೊಶೆಂಕೋ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

10.11 : ಇಂದು ದಕ್ಷಿಣ ಮತ್ತು ಮಧ್ಯ ಏಷ್ಯಾ ರಾಷ್ಟ್ರಗಳ ಅಮೇರಿಕಾದ ಸಹಾಯಕ ಕಾರ್ಯದರ್ಶಿ ನಿಶಾ ಬಿಸ್ವಾಲ್‌ ಭಾರತಕ್ಕೆ ಭೇಟಿ. ಅಧಿಕಾರಿಗಳೊಂದಿಗೆ ನಿಶಾ ಬಿಸ್ವಾಲ್‌ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

10.03 : ಎಎಪಿ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸಭೆ ದೆಹಲಿಯಲ್ಲಿ ಕೆಲ ಕ್ಷಣಗಳಲ್ಲಿ ಆರಂಭ. ಸಭೆಯಲ್ಲಿ ಇತ್ತೀಚಿಗೆ ರಾಜೀನಾಮೆ ನೀಡಿರುವ ಸದಸ್ಯರ ರಾಜೀನಾಮೆ ವಿಚಾರ ಬಗ್ಗೆ ಚರ್ಚೆ ಸಾಧ್ಯತೆ.

9.22 : ಗುಜರಾತ್‌ ಅಕ್ಷರಧಾಮ ಮೇಲೆ ಉಗ್ರರ ದಾಳಿ ಪ್ರಕರಣ. ಸರಿಯಾದ ಸಾಕ್ಷ್ಯಾಧಾರವಿಲ್ಲದ ಕಾರಣ ಇಬ್ಬರು ಆರೋಪಿಗಳಿಗೆ ತನಿಖೆಯಿಂದ ರಿಲೀಫ್‌. ವಿಶೇಷ ಪೋಟಾ ಕೋರ್ಟ್‌ ನ್ಯಾಯಧೀಶರಿಂದ ಆದೇಶ.

9.13 : ಇಂದು ಭಾರತಕ್ಕೆ ಭೇಟಿ ನೀಡಲಿರುವ ಚೀನಾದ ವಿದೇಶಾಂಗ ಮಂತ್ರಿ. ನಾಳೆ ಪ್ರಧಾನಿ ನರೇಂದ್ರ ಮೋದಿಯರ ಚೀನಾದ ವಿದೇಶಾಂಗ ಮಂತ್ರಿ ಮಾತುಕತೆ ನಡೆಸಲಿದ್ದಾರೆ.

9.08 : ಕೇಂದ್ರ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಉತ್ತರಪ್ರದೇಶದ ಲಕ್ನೋ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿರುವ ರಾಜನಾಥ್‌ ಸಿಂಗ್‌‌‌. ಕಾರ್ಮಿ‌ಕರ ಸಮ್ಮೇಳನದಲ್ಲಿ ರಾಜನಾಥ್‌ ಸಿಂಗ್‌ ಭಾಗವಹಿಸಲಿದ್ದಾರೆ.

8.30 : ಪಶ್ಚಿಮ ನೌಕಾದಳ ಕಮಾಂಡ್‌ಗೆ ಭೇಟಿ ನೀಡಲಿರುವ ರಕ್ಷಣಾ ಸಚಿವ ಅರುಣ್‌ ಜೇಟ್ಲಿ. ನೌಕಾದಳ ಕಮಾಂಡ್‌ಗೆ ಭೇಟಿ ನೀಡಿ‌ ಕಾರ್ಯಾಚರಣೆಯ ಸಿದ್ದತೆಯನ್ನು ಪರಿಶೀಲಿಸಲಿರುವ ಅರುಣ್‌ ಜೇಟ್ಲಿ.

Arun Jaitley
English summary
Top news in brief for the day: Yogendra Yadav is a very dear friend and a very valued colleague, tweets Arvind Kejriwal after meeting him.Assam top cop, who was gunned down by militants on Friday laid to rest with full State honours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X