ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.4: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜೂ.4: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.


2.35: ಸಹಾರ ಸಂಸ್ಥೆಯ ಸುಬ್ರತೋ ರಾಯ್ ಅರ್ಜಿ ಮತ್ತೊಮ್ಮೆ ತಿರಸ್ಕರಿಸಿದ ಸುಪ್ರೀಂಕೋರ್ಟ್, ಗೆಸ್ಟ್ ಹೌಸ್ ನಲ್ಲಿ ಗೃಹಬಂಧನಕ್ಕೊಳ ಪಡಿಸುವಂತೆ ಮನವಿ ಮಾಡಿದ್ದರು.
2.20: ಈಶಾನ್ಯ ಭಾರತ ಹಾಗೂ ಮ್ಯಾನ್ಮರ್ ನಲ್ಲಿ ಮಧ್ಯಾಹ್ನ ಭೂಕಂಪದ ಅನುಭವವಾಗಿದೆ. ಭೂಕಂಪದ ಪ್ರಮಾಣ 4.2 ರಷ್ಟಿತ್ತು.

Sahara Roy

2.15: ನವದೆಹಲಿಯಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ಬೆಂಗಾವಲು ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದಿದೆ.
2.00: ಗೋಪಿನಾಥ್ ಮುಂಡೆ ಅವರ ಪಾರ್ಥೀವ ಶರೀರಕ್ಕೆ ಮಹಾರಾಷ್ಟ್ರದ ಪರ್ಲಿ ಗ್ರಾಮದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ.
1.45: ವಿಶ್ವ ಅರೋಗ್ಯ ಸಂಸ್ಥೆ(WHO) ನೀಡಿರುವ ವರದಿ ಪ್ರಕಾರ ಭಾರತದಲ್ಲೆ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತದೆ.
10.40:
9 ಬಾರಿ ಸಂಸದರಾಗಿರುವ ಹಿರಿಯ ನಾಯಕ ಕಮಲ್ ನಾಥ್ ಅವರು ಹಂಗಾಮಿ ಸ್ಪೀಕರ್ ಆಗಿ ಲೋಕಸಭೆಯಲ್ಲಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ರಮಾಣ ವಚನ ಬೋಧಿಸಿದರು.

10.15 : ಎಂಡಿಎಂಕೆ ಮುಖ್ಯಸ್ಥ ವೈಕೋ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಅಫ್ಘಾನಿಸ್ತಾನದಲ್ಲಿನ ಭಾರತೀಯ ರಕ್ಷಣೆಗೆ ಕೋರಿದ್ದಾರೆ. ಹೆರಾತ್ ನಿಂದ ತಮಿಳುನಾಡು ಮೂಲದ ಪ್ರೇಮ್ ಕುಮಾರ್(47) ಎಂಬುವರ ಅಪಹರಣವಾಗಿದೆ.

Kamalnath

10.00 : ಉಕ್ರೇನ್ ಗಲಭೆ ಮಿತಿ ಮೀರುತ್ತಿದ್ದಂತೆ ಒಬಾಮಾ ಅವರು ಉಕ್ರೇನ್ ಅಧ್ಯಕ್ಷ ಪೆಟ್ರೋ ಪೊರೊಶೆಂಕೋ ಅವರನ್ನು ಭೇಟಿ ಮಾಡಿ ರಷ್ಯಾದ ವಿರುದ್ಧ ಕಾರ್ಯಾಚರಣೆಗೆ ಸಿದ್ದ ಎಂದಿದ್ದಾರೆ.
9.45 : ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗಾಯ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ.
9.30 : ಕುಪ್ಪಂನಲ್ಲಿ ಯಶವಂತಪುರ-ಹೌರಾ ಎಕ್ಸ್ ಪ್ರೆಸ್ ಹಳಿ ತಪ್ಪಿದ್ದು, ದೊಡ್ಡ ದುರಂತ ತಪ್ಪಿದೆ.
9.20: ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅವರ ಪಾರ್ಥೀವ ಶರೀರ ಬುಧವಾರ ವಿಶೇಷ ವಿಮಾನದಲ್ಲಿ ಲಾತೂರ್ ಗೆ ಕರೆ ತರಲಾಗಿದೆ. ಪರಲಿ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
9.15 : 16ನೇ ಲೋಕಸಭೆ ಕಲಾಪ ಬುಧವಾರದಿಂದ ಆರಂಭಗೊಳ್ಳಲಿದ್ದು, ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಗುತ್ತದೆ. ಸಂಸದರ ಪ್ರಮಾಣ ವಚನ ಮುಂದೂಡಲಾಗುತ್ತದೆ.ಜೂ.4 ರಿಂದ ಜೂ .11 ರ ತನಕ ಕಲಾಪ ನಡೆಯಲಿದೆ. ಜೂ.9 ರಂದು ಉಭಯ ಸದನ ಉದ್ದೇಶಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಷಣ ಮಾಡಲಿದ್ದಾರೆ.
English summary
Top news in brief for the day: Congress will work to be a constructive Opposition: Kamal Nath sworn in as Protem Speaker today. Here are the news in brief for the day from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X