ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ. 25: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜೂ.25: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

10.05: ಗುಜರಾತಿನ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ತಮ್ಮ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸಲು ಮುಂದಾಗಿದ್ದಾರೆ.
9.45: ರಾಜ್ಯಸಭೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಂಧ್ರಪ್ರದೇಶದಿಂದ ಅವಿರೋಧವಾಗಿ ಆಯ್ಕೆ ಆಗುವ ಸಾಧ್ಯತೆಯಿದೆ. ಜೂ.26ರಂದು ಆಯ್ಕೆ ನಿಚ್ಚಳವಾಗಿದೆ.
9.30 : ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್ ಖಾನ್ ವಿರುದ್ಧ ಸಾಕ್ಷಿ ಹೇಳಿದ್ದ ಒಬ್ಬ ವ್ಯಕ್ತಿ ತನ್ನ ಹೇಳಿಕೆಯಿಂದ ಹಿಂದೆ ಸರಿದಿದ್ದಾನೆ. ಘಟನೆ ದಿನ ಸಲ್ಮಾನ್ ನೋಡಿದ್ದೆ ಎಂದಿದ್ದ ವ್ಯಕ್ತಿ ಈಗ ನಾನು ಹಾಗೆ ಹೇಳಿಲ್ಲ ಎಂದು ಸಾಕ್ಷಿದಾರ ಸಚಿನ್ ಕದಂ ಹೇಳಿದ್ದಾನೆ.

Follow news updates on June 25

9.15 : ಶ್ರೀಲಂಕಾದಿಂದ ಮತ್ತೆ 11 ತಮಿಳುನಾಡು ಮೂಲದ ಮೀನುಗಾರರ ಬಂಧನವಾಗಿದೆ.
9.00 : ದೆಹಲಿ ವಿವಿ ಕುಲಪತಿ ದಿನೇಶ್ ಸಿಂಗ್ ರಾಜೀನಾಮೆ ಸುಳ್ಳು ಸುದ್ದಿ ಎಂದು ಸಾಬೀತಾಗಿದೆ. ಮೂರು ವರ್ಷದ ಪದವಿ ಕೋರ್ಸ್ ಜಾರಿಗೆ ತರುವ ಯುಜಿಸಿ ಆದೇಶ ಧಿಕ್ಕರಿಸಿ 4 ವರ್ಷ ಪದವಿ ಕೋರ್ಸ್ ಜಾರಿಗೆ ತಂದು ವಿವಾದಕ್ಕೀಡಾಗಿದ್ದರು.
8.45 : ಬಿಹಾರದ ಛಾಪ್ರಾ ಬಳಿ ನಡೆದ ರಾಜಧಾನಿ ಎಕ್ಸ್ ಪ್ರೆಸ್ ದುರಂತದಲ್ಲಿ ಸಾವನ್ನಪ್ಪಿದ್ದವರ ಕುಟುಂಬ ವರ್ಗಕ್ಕೆ ರೈಲ್ವೆ ಸಚಿವ ಸದಾನಂದ ಗೌಡ ಅವರು 20,000 ರು ತಕ್ಷಣದ ಪರಿಹಾರ ಘೋಷಿಸಿದ್ದಾರೆ.
English summary
Top news in brief for the day: Gujarat chief minister Anandiben Patel has said that 33% positions in police force would be filled by women from now. News in brief on June 25
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X