ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ. 23: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜೂ.23: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

6.15: ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ)ದ ಬೆಂಬಲಕ್ಕೆ ನಿಂತಿರುವ ಕೇಂದ್ರ ಸರ್ಕಾರ, ವಿವಾದಾತ್ಮಕ ನಾಲ್ಕು ವರ್ಷಗಳ ಪದವಿ ಶಿಕ್ಷಣ ಪ್ರವೇಶಕ್ಕೆ ಸಂಬಂಧಿಸಿದಂತೆ ದೆಹಲಿ ವಿಶ್ವವಿದ್ಯಾಲಯ ಮತ್ತು ಯುಜಿಸಿ ನಡುವಿನ ವಿವಾದದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಸೋಮವಾರ ಹೇಳಿದ್ದಾರೆ.

3.45: ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು ಜುಲೈ 8ಕ್ಕೆ 2014-15ನೇ ಸಾಲಿನ ರೇಲ್ವೆ ಬಜೆಟ್‌ ಮಂಡಿಸುವ ಸಾಧ್ಯತೆ ಇದೆ.
2.45: ಜುಲೈ 10ಕ್ಕೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ
1.45: ಏಳು ಜನ ಅಲ್ ಜಜೀರಾ ವರದಿಗಾರರಿಗೆ ಏಳು ವರ್ಷ ಶಿಕ್ಷೆ ವಿಧಿಸಿದ ಈಜಿಪ್ಟ್ ಸರ್ಕಾರ.
12.45 : ಕೋಲ್ಕತ್ತಾದ ಮೆಟ್ರೋ ಸುರಂಗದೊಳಗೆ ಸಿಲುಕಿದ ಪರಿಣಾಮ 1.5 ಗಂಟೆಗಳ ಕಾಲ ಪ್ರಯಾಣಿಕರು ಆತಂಕದ ಪರಿಸ್ಥಿತಿ ಎದುರಿಸಿದರು.
11.55: ಬಾಲಿವುಡ್ ನಟ ಅಮೀರ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಭೇಟಿ ಮಾಡಿದರು.

10.25: ಹಿಂದೂಗಳ ಪವಿತ್ರ ಯಾತ್ರಾಸ್ಥಳ ವೈಷ್ಣೋದೇವಿಗೆ ಜೂನ್ ತಿಂಗಳ ಅಂತ್ಯಕ್ಕೆ ರೈಲು ಸಂಪರ್ಕ ಆರಂಭವಾಗಲಿದೆ. ಉಧಾಂಪುರ-ಕಟ್ರಾ ರೈಲು ಮಧ್ಯೆ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ ಎಂದು ರೈಲ್ವೆ ಸಚಿವ ಸದಾನಂದ ಗೌಡ ಹೇಳಿದ್ದಾರೆ.

News in brief on June 23

10.15: ಪಾಲಾರ್ ನದಿ ನೀರಿಗೆ ತಮಿಳುನಾಡು ಸಿಎಂ ಜಯಲಲಿತಾ ತಗಾದೆ. ಕರ್ನಾಟಕದ ನಂದಿಬೆಟ್ಟದಲ್ಲಿ ಹುಟ್ಟಿ ಆಂಧ್ರಪ್ರದೇಶದಲ್ಲಿ ಹರಿಯುವ ಪಾಲಾರ್ ನದಿಗೆ ಅಣೆಕಟ್ಟು ನಿರ್ಮಿಸುವುದಕ್ಕೆ ಜಯಲಲಿತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
10.00 : ಹೈದರಾಬಾದಿನಲ್ಲಿ ಪಿಕ್ ಪಾಕೆಟರ್ ಒಬ್ಬ ಡಿಆರ್ ಡಿಒ ವಿಜ್ಞಾನಿಯೊಬ್ಬರ ಮೇಲೆ ಬ್ಲೇಡಿನಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ.
9.45: ನವದೆಹಲಿಯಲ್ಲಿ ಸಾರ್ಕ್ ದೇಶಗಳ ರಾಯಭಾರಿಗಳ ವಿಚಾರ ಸಂಕಿರಣ ಸೋಮವಾರ ನಡೆಯಲಿದೆ.

English summary
Top news in brief for the day: The 25-km long Udhampur-Katra rail section in Jammu and Kashmir is slated to be inaugurated by this month-end by Prime Minister Narendra Modi along with Railway Minister Sadananda Gowda. Follow news updates on Monday June 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X