ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ. 22: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜೂ.22: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

6.15: ಕಳೆದ 3 ದಿನಗಳಿಂದ ಮುಂಬೈನಲ್ಲಿ ಕ್ಯಾಂಪಕೋಲಾ ನಿವಾಸಿಗಳು ನಡೆಸಿದ್ದ ಮುಷ್ಕರಕ್ಕೆ ತೆರೆಬಿದ್ದಿದೆ. ಅಕ್ರಮ ಫ್ಲಾಟ್‌ಗಳ ತೆರವು ಕಾರ್ಯಾಚರಣೆಗೆ ಕ್ಯಾಂಪಕೋಲಾ ವಸತಿ ಸಮುಚ್ಚಯದ ನಿವಾಸಿಗಳು ಭಾನುವಾರ ಒಪ್ಪಿಗೆ ಸೂಚಿಸಿದ್ದಾರೆ. 2 ಕಟ್ಟಡಗಳಲ್ಲಿ ಒಟ್ಟು 45 ಅಂತಸ್ತುಗಳಿದ್ದು, ಹೆಚ್ಚುವರಿಯಾಗಿ ಸುಮಾರು 107 ಫ್ಲಾಟ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲಿ ಈಗ ಸುಮಾರು 500 ಕ್ಕೂ ಅಧಿಕ ನಿವಾಸಿಗಳು ವಾಸವಾಗಿದ್ದಾರೆ.


11.45: ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ಅಮೆರಿಕದಿಂದ ಮುಂಬೈಗೆ ಬಂದಿಳಿದಿದ್ದು, ಪೊಲೀಸರ ಮುಂದೆ ಸೋಮವಾರ ಹೇಳಿಕೆ ನೀಡಲು ತೆರಳಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರೀತಿ ಅವರು ತಮ್ಮ ಗೆಳೆಯ ನೆಸ್ ವಾಡಿಯಾ ಮೇಲೆ ಹಲ್ಲೆ, ಅಪಮಾನ ಆರೋಪವನ್ನು ಹೊರೆಸಿದ್ದಾರೆ.

Preity Zinta

9.40: ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶೇ 14.2 ರಷ್ಟು ರೈಲ್ವೆ ದರ ಏರಿಕೆಯಾಗಿರುವುದನ್ನು ಖಂಡಿಸಿದ್ದಾರೆ. ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಪ್ರತಿಭಟನೆ ನಡೆಸುವ ಬಗ್ಗೆ ಚಿಂತನೆ ನಡೆಸಿವೆ.
9.30: ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ತಮ್ಮ ಸಿಎಂ ಪಟ್ಟ ಉಳಿಸಿಕೊಳ್ಳಲು ಯತ್ನಿಸುತ್ತಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.

News in brief on June 22

9.20: ಇರಾಕ್ ಗಲಭೆ ಪೀಡಿತ ಮೊಸೂಲ್ ನಗರದಲ್ಲಿ ಸುನ್ನಿ ಉಗ್ರರಿಂದ ಅಪರಹರಿಸಲ್ಪಟ್ಟ 40 ಮಂದಿ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಬದ್ಧವಗಿದ್ದು, ಸುನ್ನಿ ಬಂಡುಕೋರರ ಸಂಘಟನೆ ಮುಖ್ಯಸ್ಥರೊಡನೆ ಭಾರತ ಸಂಪರ್ಕ ಸಾಧಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
9.15 : ದಕ್ಷಿಣ ಮುಂಬೈ ನಮನ್ ಟವರ್ಸ್ ಸಂಕೀರ್ಣ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

9.00: ಜೂ.28ರಿಂದ ಬಾಲ್ಟಲ್ ಮಾರ್ಗದ ಮೂಲಕ ಅಮರನಾಥ ಯಾತ್ರೆ ಆರಂಭ.
8.45: ಫೀಫಾ ವಿಶ್ವಕಪ್ ಫುಟ್ಬಾಲ್ ಫಲಿತಾಂಶ: ಅರ್ಜೆಂಟೀನಾ, ನೈಜೀರಿಯಾಗೆ ಗೆಲುವು, ಜರ್ಮನಿ-ಘಾನಾ ಪಂದ್ಯ ಡ್ರಾನಲ್ಲಿ ಅಂತ್ಯ.

English summary
Top news in brief for the day:FIFA World Cup 2014 gripped the country. Meanwhile, activists and many political parties have been protesting against current rail fare hike. Prime Minister Narendra Modi has been invited to speak before US Congress. Follow news updates on Sunday, June 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X