ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.17: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜೂ.17: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

2.45: ಭಾರತೀಯ ಮೂಲದ ಅಲೆಕ್ಸಿಸ್ ಪ್ರೇಮ್ ಕುಮಾರ್ ಅವರು ಅಪಹರಣಕಾರರ ಹಿಡಿತದಲ್ಲೇ ಇದ್ದಾರೆ. ಪ್ರೇಮ್ ಅವರ ಜೀವಕ್ಕೆ ಅಪಾಯವಾಗಿಲ್ಲ ಎಂದು ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಅಮರ್ ಸಿನ್ಹಾ ಹೇಳಿದ್ದಾರೆ.

11.55: ಸೋನಿಯಾ ಗಾಂಧಿ ಅವರಿಂದ ನೇಮಕವಾಗಿರುವ ಅವರ ಆಪ್ತ ರಾಜ್ಯಪಾಲರು ರಾಜಿನಾಮೆ ನೀಡಿ ಮನೆಗೆ ಹೋಗ್ಲಿ. ಅರ್ಹತೆ ಇಲ್ಲದ ನೇಮಕಕ್ಕೆ ಬೆಲೆಯಿಲ್ಲ ಎಂದು ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಕಿಡಿಕಾರಿದ್ದಾರೆ.

News in brief on June 17

11.45: ಜಾರ್ಖಂಡ್ ಜೈಲಿನಲ್ಲಿರುವ ಬಿಜೆಪಿ ನಾಯಕ ಯಶವಂತ ಸಿನ್ಹಾ ಭೇಟಿ ಮಾಡಲು ಹಿರಿಯ ನಾಯಕ ಎಲ್ ಕೆ ಅಡ್ವಾಣಿ ತೆರಳಿದ್ದಾರೆ.
11.30: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದಿರುವ ಪತ್ರಕರ್ತ ತರುಣ್ ತೇಜ್ಪಾಲ್ ಅವರ ಜಾಮೀನು ಅರ್ಜಿ ವಿಚಾರಣೆ ಜೂ.27ಕ್ಕೆ ನಡೆಯಲಿದೆ.
11.20: ಅಕ್ರಮವಾಗಿ ಅಹಾರ ಶೇಖರಣೆ ಮಾಡಿಟ್ಟುಕೊಂಡಿರುವುದು ಹಾಗೂ ದುರ್ಬಲ ಮುಂಗಾರಿನ ಕಾರಣ ಆಹಾರ ದುಬ್ಬರ ಏರಿಕೆಯಾಗಿದೆ ಎಂದು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
10.30: ಉತ್ತರಪ್ರದೇಶ, ಕೇರಳ, ಪಂಜಾಬ್, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶ ರಾಜ್ಯಗಳ ರಾಜ್ಯಪಾಲರನ್ನು ಬದಲಾಯಿಸಲು ಮೋದಿ ಸರ್ಕಾರ ನಿರ್ಧರಿಸಿದೆ ಎಂಬ ಸುದ್ದಿಯಿದೆ.
10.15: ವೆನೆಜುವೆಲಾದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ 20 ಜನ ಸಾವನ್ನಪ್ಪಿದ್ದಾರೆ.

9.45: ಸುಬ್ರಮಣ್ಯ ಸ್ವಾಮಿ ಅವರನ್ನು ಸಿಐಎ ಏಜೆಂಟ್ ಎಂದು ಕರೆದಿದ್ದ ಕಾಂಗ್ರೆಸ್ ಮುಖಂಡ ಸಂಜಯ್ ಝಾ ಅವರು ಪತ್ರ ಬರೆದು ಕ್ಷಮೆಯಾಚನೆ.

Subramanian Swamy

9.30: ಇರಾಕಿನಲ್ಲಿರುವ ಕೇರಳ ಮೂಲದ ನರ್ಸ್ ಗಳಿಗೆ ಭಾರತಕ್ಕೆ ಮರಳುವಂತೆ ಸೂಚಿಸಲಾಗಿದೆ.


9.15 : ವೈಎಸ್ಸಾರ್ ಕಾಂಗ್ರೆಸ್ ಮುಖಂಡ ಜಗನ್ ಮೋಹನ್ ರೆಡ್ಡಿ ಅವರ ಅಕ್ರಮ ಆಸ್ತಿ ಪ್ರಕರಣ ಸಿಬಿಐ ನ್ಯಾಯಾಲಯದಲ್ಲಿ ಮೇ.21 ರಂದು ವಿಚಾರಣೆಗೆ ಬರಲಿದೆ.
9.00: ಏರ್ ಏಷ್ಯಾ ಸಂಸ್ಥೆ ಬೆಂಗಳೂರಿನಿಂದ ಕೊಚ್ಚಿಗೆ ವಿಮಾನಯಾನ ಘೋಷಿಸಿದೆ. [ಸುದ್ದಿ ಇಲ್ಲಿ ಓದಿ]
8.45: ಶಿಮ್ಲಾದಲ್ಲಿ ಭೀಕರ ರಸ್ತೆ ಅಪಘಾತಕ್ಕೆ 11 ಜನ ಬಲಿ, 40ಕ್ಕೂ ಅಧಿಕ ಮಂದಿಗೆ ಗಾಯ.

English summary
Top news in brief for the day: Indian aid worker Alexis Prem Kumar is in custody of his abductors, but safe; working on his release: Amar Sinha, Indian ambassador to Afghanistan and Here the news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X