ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.10: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜೂ.10: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

12.45: ದೆಹಲಿಯಲ್ಲಿ ರಸ್ತೆ ಅಪಘಾತದ ನಂತರ ಆಘಾತಕ್ಕೊಳಗಾಗಿ ಸಾವನ್ನಪ್ಪಿದ ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅವರ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಲು ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
12.30: ಸೂರತ್ ನಲ್ಲಿ ಮೇಲ್ಸೇತುವೆ ಕಂಬಗಳು ಕುಸಿದ ಪರಿಣಾಮ 2 ಸಾವನ್ನಪ್ಪಿದ್ದು, 5 ಕಾರ್ಮಿಕರಿಗೆ ಗಾಯಗಳಾಗಿವೆ.
12.15: ದೆಹಲಿಯ ವಿದ್ಯುತ್ ಸಮಸ್ಯೆ ಖಂಡಿಸಿ ಕೇಂದ್ರ ಸಚಿವ ಹರ್ಷವರ್ಧನ್ ಮನೆ ಮುಂದೆ ಆಮ್ ಆದ್ಮಿ ಪಕ್ಷದವರು ಧರಣಿ ನಡೆಸಿದ್ದಾರೆ.
11.30: ಮನಾಲಿ ದುರಂತದ ನಂತರ ವಿಎನ್ ಆರ್ ಕಾಲೇಜು ಹಾಗೂ ಹಿಮಾಚಲ ಪ್ರದೇಶದ ಅಣೆಕಟ್ಟು ಅಧಿಕಾರಿಗಳ ಮೇಲೆ ಮೊಕದ್ದಮೆ ಹೂಡಲು ತೆಲಂಗಾಣ ಸರ್ಕಾರ ನಿರ್ಧಾರ.

Gopinath Munde

9.15: ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದ ದುರಂತಕ್ಕೆ ಇಡೀ ದೇಶವೇ ಮರುಕ ವ್ಯಕ್ತಪಡಿಸಿದೆ. ಹೈದರಾಬಾದ್ ಮೂಲದ 24 ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹಿಮಾಚಲ ಪ್ರದೇಶ ಹೈಕೋರ್ಟ್ ಸೂಚಿಸಿದೆ. ಇದುವರೆವಿಗೂ 5 ಶವಗಳು ಮಾತ್ರ ಪತ್ತೆಯಾಗಿವೆ. ಬದುಕುಳಿದವರು ಹೈದರಾಬಾದಿಗೆ ತೆರಳಿದ್ದಾರೆ.[24 ವಿದ್ಯಾರ್ಥಿಗಳು ಪ್ರವಾಹಕ್ಕೆ ಬಲಿ?]

News in brief on June 10

9.00 : ಉಗ್ರರ ದಾಳಿಗೆ ನಲುಗಿದ ಕರಾಚಿ ವಿಮಾನ ನಿಲ್ದಾಣ ಮಂಗಳವಾರ ಪುನಃ ಆರಂಭಗೊಂಡಿದೆ.
8.45: ದಕ್ಷಿಣ ಬ್ರೆಜಿಲ್ ನಲ್ಲಿ ಪ್ರವಾಹಕ್ಕೆ 9 ಮಂದಿ ಬಲಿಯಾಗಿದ್ದಾರೆ.
8.30: ಕೇರಳದಲ್ಲಿ ಕಾರಿನ ಹಿಂಬದಿಯಲ್ಲಿ ಸೀಟಿನಲ್ಲಿ ಕುಳಿತವರಿಗೂ ಸೀಟು ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
English summary
Top news in brief for the day: 5 bodies recovered, HC asks HP government to file a report on Manali dam tragedy. Here are the news in brief for the day from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X