ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.1: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜೂ.1: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

3.00: ಪ್ರಧಾನಿ ಸಚಿವಾಲಯದ ಫೇಸ್ ಬುಕ್ ಪುಟ ಕೇವಲ ನಾಲ್ಕೇ ದಿನಗಳಲ್ಲಿ 1,220,592(ಈ ಸಮಯಕ್ಕೆ) ಲೈಕ್ಸ್ ಪಡೆದುಕೊಂಡಿದೆ.
2.45: ಪಶ್ಚಿಮ ಬಂಗಾಳದಲ್ಲಿ ಭಾರಿ ಗುಡುಗು ಮಳೆಗೆ 10 ಮಂದಿ ಸಾವನ್ನಪ್ಪಿದ್ದಾರೆ.
2.30: ಎಡಿಜಿಪಿ ರವೀಂದ್ರನಾಥ್ ಪ್ರಕರಣದ ತನಿಖೆ ಮುಂದುವರೆಸಿರುವ ಸಿಐಡಿ ಇಂದು ರವೀಂದ್ರನಾಥ್, ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹಾಗೂ ಆರೋಪ ಮಾಡಿರುವ ಯುವತಿಯ ವಿಚಾರಣೆ.

PMO India FB page gets over million 'likes' in 4 days

2.20 : ಬೆಂಗಳೂರಿನ ಮಂಡೂರಿನಲ್ಲಿ ಕಸ ಡಂಪಿಂಗ್ ಯಾರ್ಡ್ ಗೆ ಬೀಗ, ಗ್ರಾಮಸ್ಥರ ಮನವೊಲಿಸಲು ಸಚಿವ ರಾಮಲಿಂಗಾರೆಡ್ಡಿ ಹಾಗೂ ಮೇಯರ್ ಯತ್ನ.
2.10 : ಯುಪಿಎಸ್ ಸಿ ಆಭ್ಯರ್ಥಿಗಳು ಈಗ ಸಿವಿಲ್ ಸರ್ವೀಸ್ ಪರೀಕ್ಷೆ ಪಾಸಾಗಲು ಆರು ಬಾರಿ ಯತ್ನಿಸಬಹುದಾಗಿದೆ.
1.30: ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಪ್ರಕರಣದ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಬಾಂಬೆ ಹೈಕೋರ್ಟ್ ನಿರ್ದೇಶನ.

11.00: ಉತ್ತರಪ್ರದೇಶದ ಬದೌನ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಸಿಬಿಐಗೆ ವಹಿಸಿ, ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ಎಂದು ಬಿಎಸ್ಪಿ ನಾಯಕಿ ಮಯಾವತಿ ಗುಡುಗಿದ್ದಾರೆ.
10.50 : ಲಷ್ಕರ್ ಉಗ್ರ ಅಬು ಉಕ್ಷಾನನ್ನು ಉತ್ತರ ಕಾಶ್ಮೀರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಕೊಲ್ಲಲಾಗಿದೆ.
10.45 : ಕಪ್ಪು ಹಣ ವಾಪಸ್ ತನಿಖೆ ನಡೆಸಲು ನಿಯೋಜನೆಗೊಂಡಿರುವ ವಿಶೇಷ ತಂಡ ಎಸ್ ಐಟಿ ಸೋಮವಾರ ತನ್ನ ಮೊದಲ ಮಹತ್ವದ ಸಭೆ ನಡೆಸಲಿದೆ.
10.30 : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 7 ಫೈನಲ್ ಪಂದ್ಯ ಭಾನುವಾರ ನಡೆಯಲಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ XI ಪಂಜಾಬ್ ತಂಡ ಕಪ್ ಗಾಗಿ ಸೆಣಸಾಟ ನಡೆಸಲಿದ್ದು, ಮಳೆ ಭೀತಿಯನ್ನು ಎದುರಿಸುತ್ತಿವೆ.

10.15: ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರಿಗೆ ಡಿಸಿಎಂ ಸ್ಥಾನ ನೀಡುವಂತೆ ಹೈಕಮಾಂಡ್ ಆಗ್ರಹಿಸುವುದಾಗಿ ತುಮಕೂರು ಸಂಸದ ಮುದ್ದ ಹನುಮೇಗೌಡ ಹೇಳಿಕೆ.

News in brief on June 1

10.00 : ವರ್ಷಾಂತ್ಯದಲ್ಲಿ ನಡೆಯುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ತಾವು ಮತ್ತು ತಮ್ಮ ಪಕ್ಷ ಸ್ಪರ್ಧಿಸುವುದಾಗಿ ಮಹಾರಾಷ್ಟ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಘೋಷಿಸಿದ್ದಾರೆ. ಪಕ್ಷಕ್ಕೆ ಬಹುಮತ ದೊರೆತರೆ ತಾವೇ ಮುಖ್ಯಮಂತ್ರಿ ಎಂದೂ ಹೇಳಿಕೊಂಡಿದ್ದಾರೆ.

9.30 : ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಲೋಕಸಭೆ ಚಾನೆಲ್‌ನ ಸಿಇಒ ರಾಜೀವ್ ಮಿಶ್ರಾರನ್ನು ವಜಾ ಮಾಡಿದ್ದಾರೆ. ಮತ ಎಣಿಕೆ ದಿನದಂದು ಮೀರಾ ಕುಮಾರ್ ಹಿನ್ನಡೆ ಅನುಭವಿಸಿದ್ದಾರೆಂದು ಚಾನೆಲ್‌ನಲ್ಲಿ ವರದಿಯಾಗಿತ್ತು. ಹೀಗಾಗಿಯೇ ತಮ್ಮನ್ನು ವಜಾ ಮಾಡಲಾಗಿದೆ ಎಂದು ಮಿಶ್ರಾ ಆರೋಪಿಸಿದ್ದಾರೆ.

Top news in brief for the day

9.15: ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗೆ ದೇಶದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಅಪ್ಪಳಿಸಿದ ಭಾರಿ ಬಿರುಗಾಳಿ ಒಟ್ಟಾರೆ 40 ಮಂದಿಯನ್ನು ಬಲಿತೆಗೆದುಕೊಂಡಿದೆ.

9.00: ಜಗದ್ವಿಖ್ಯಾತ ಕೇದಾರನಾಥ ಯಾತ್ರಾಸ್ಥಳವನ್ನು ಪುನರುತ್ಥಾನಗೊಳಿಸುವುದಾಗಿ ಉತ್ತರಾಖಾಂಡ ಮುಖ್ಯಮಂತ್ರಿ ಹರೀಶ್ ರಾವತ್ ಪ್ರಕಟಿಸಿದ್ದಾರೆ. , ಕಳೆದ ವರ್ಷ ಪ್ರವಾಹಕ್ಕೆ ಸಿಲುಕಿ ಹಾನಿಗೀಡಾಗಿತ್ತು.

English summary
Top news in brief for the day: PMO India FB page gets over million 'likes' in 4 days. MNS chief Raj Thackeray announces his candidature for Maharashtra Assembly polls. Here are the news in brief for the day from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X