ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.4 : ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್

By Mahesh
|
Google Oneindia Kannada News

ಬೆಂಗಳೂರು, ಜು.4: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

11.15: ಕಣಿವೆ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಲಿರಿಸಿದ ಬೆನ್ನಲ್ಲೇ ಕಾಶ್ಮೀರದ ಇನ್ನೊಂದೆಡೆ ಗುಂಡಿನ ಚಕಮಕಿ ಕೇಳಿ ಬಂದಿದೆ. ಶೋಪಿಯಾನ್ ಜಿಲ್ಲೆಯಲ್ಲಿರುವ ಜವಹರ ನವೋದಯ ವಿದ್ಯಾಲಯ(ಜೆಎನ್ ವಿ) ಶಾಲೆ ಬಳಿ ಇರುವ ಪೊಲೀಸರ ಮೇಲೆ ಉಗ್ರರು ಗುಂಡು ಹಾರಿಸಿದ್ದಾರೆ. ಶಾಲೆಗೆ ರಜೆ ಇರುವುದರಿಂದ ಯಾರಿಗೂ ಹೆಚ್ಚಿನ ಹಾನಿ ಸಂಭವಿಸಿಲ್ಲ.[ಕಣಿವೆ ರಾಜ್ಯಕ್ಕೆ ಮೋದಿ ಎಂಟ್ರಿ ]

9.15 : ಇರಾಕಿನ ಆಂತರಿಕ ಘರ್ಷಣೆಯಿಂದ ಸಂಕಷ್ಟಕ್ಕೆ ಸಿಲುಕಿರುವ 46 ಭಾರತೀಯ ಮೂಲದ ನರ್ಸ್ ಗಳನ್ನು ಉಗ್ರರು ತಿಕ್ರಿತ್ ನಿಂದ ಮೊಸುಲ್ ಪಟ್ಟಣಕ್ಕೆ ಸ್ಥಳಾಂತರಿಸಿದ್ದಾರೆ. ಭಾರತೀಯ ವಿದೇಶಾಂಗ ಸಚಿವಾಲಯ ವಕ್ತಾ ಅಕ್ರಬುದ್ದೀನ್ ಅವರು 'ಪರಿಸ್ಥಿತಿ ನಮ್ಮ ಕೈ ಮೀರುತ್ತಿದೆ' ಎಂದು ಒಪ್ಪಿಕೊಂಡಿದ್ದಾರೆ.

News in brief on July 4

9.10 : ಬ್ರೆಜಿಲ್ ನಲ್ಲಿ ಶುಕ್ರವಾರ ವಿಶ್ವಕಪ್ ಫುಟ್ಬಾಲ್ ನ ಕ್ವಾಟರ್ ಫೈನಲ್ ಪಂದ್ಯಗಳು ಆರಂಭಗೊಳ್ಳಲಿದೆ. ಫ್ರಾನ್ಸ್ vs ಜರ್ಮನಿ ಪಂದ್ಯದ ನಂತರ ಬ್ರೆಜಿಲ್ vs ಕೊಲಂಬಿಯಾ ಪಂದ್ಯ ನಡೆಯಲಿದೆ.
9.00 : ಬ್ರೆಜಿಲ್ಲಿನಲ್ಲಿ ಮೇಲ್ಸೇತುವೆ ಕುಸಿತದಿಂದ ಒಬ್ಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

English summary
Top news in brief for the day: 46 Indian nurses taken to Mosul by ISIS, families seek help from MEA and many more news from the around the globe on July 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X